Site icon Vistara News

SSE SideB Twitter Review: ʻಸಪ್ತ ಸಾಗರದಾಚೆ ಎಲ್ಲೋʼ ಸೈಡ್‌ ಬಿ ಬಗ್ಗೆ ಜನಾಭಿಪ್ರಾಯ ಹೀಗಿದೆ

How is Side B of saptha sagaradache b Twitter Review!

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ (Rakshit Shetty) ಹಾಗೂ ರುಕ್ಮಿಣಿ ವಸಂತ್‌ (rukmini vasanth) ಅಭಿನಯದ ʻಸಪ್ತ ಸಾಗರದಾಚೆ ಎಲ್ಲೋʼ (SSE SideB Twitter Review) ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಸಕ್ಸಸ್ ಕಂಡಿದೆ. ಪ್ರೇಕ್ಷಕರು ಭಾಗ 2ಕ್ಕೆ ಕಾಯುತ್ತಿದ್ದರು. ಇದೀಗ ಸಿನಿಮಾ ನವೆಂಬರ್‌ 17ರಂದು ರಿಲೀಸ್‌ ಆಗಿದೆ. ವಿಶೇಷ ಅಂದರೆ ಈ ಬಾರಿ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಆಗಿದೆ.

ಒಬ್ಬರು ʻʻಈಗಷ್ಟೇ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್-ಬಿ’ ವೀಕ್ಷಿಸಿದೆ. ವಾಹ್, ಎಂತಹ ಭಾವನಾತ್ಮಕ ಪ್ರಯಾಣ! ಧನ್ಯವಾದಗಳು ಹೇಮಂತ ರಾವ್ʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನಿನ್ನ ಸೇರುವ ಆಸೆಯಲ್ಲೇ ನಾ… ಸಪ್ತ ಸಾಗರದಾಚೆ ಎಲ್ಲೋ ಸೈ ಬಿ ಟ್ರೈಲರ್ ಔಟ್‌, ನೋಡಿ!

ʻʻಮನುವಿಗೆ ಪ್ರಿಯ. SideB ಪ್ರಿಯಾಗೆ ಮನು. ಆದರೆ SideA ಗಿಂತ ಭಿನ್ನವಾಗಿ, Side B ವಾಸ್ತವದಿಂದ ದೂರವಿದೆ. 1 ನೇ ಭಾಗಕ್ಕೆ ಹೋಲಿಸಿದರೆ ಕಥೆ ಹೇಳುವ ತೀವ್ರತೆ ಮತ್ತು ಕಾವ್ಯಾತ್ಮಕ ರೀತಿಯಲ್ಲಿ ಸುಗಮವಾಗಿರಲಿಲ್ಲ. ಕ್ಲೈಮ್ಯಾಕ್ಸ್ ಫೈಟ್ ತುಂಬಾ ಚೆನ್ನಾಗಿದೆ. ರಕ್ಷಿತ್ ನಟನೆ ಭಯಂಕರ. ಅವರ ಮಾಸ್ ಸೈಡ್ ಮತ್ತಷ್ಟು ಬೇಕು” ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

ʻʻಸಿನಿಮಾ ಬಣ್ಣಿಸೋಕೆ ಪದಗಳಿಲ್ಲ… ಕನ್ನಡ ಸಿನಿಮಾ ಯಾವ ಮಟ್ಟಕ್ಕೆ ಇವತ್ತು ಇದೆ ಅನ್ನೋದಕ್ಕೆ ಈ ಸಿನಿಮಾʼʼ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

“ಸೈಡ್- A ಬಹಳ ಕಾಡುತ್ತದೆ ಎನ್ನುವವರಿಗೆ ಸೈಡ್- B ಇನ್ನಷ್ಟು ಕಾಡುತ್ತದೆ. ಹೇಮಂತ್ ರಾವ್ ಮೇಕಿಂಗ್, ನಿರೂಪಣೆ ಹಾಗೂ ಅದನ್ನು ಕಟ್ಟಿಕೊಟ್ಟಿರುವ ಬಗೆ ಅದ್ಭುತ. ನೀವು ಸಿನಿಮಾ ಪ್ರೇಮಿಗಳಾಗಿದ್ದರೆ ಸಿನಿಮಾ ನೋಡಿ ಖುಷಿ ಪಡುತ್ತೀರಿ. ಅದು BGM ಆಗಿರಲಿ, ನಟನೆ ಇರಲಿ, ದೃಶ್ಯರೂಪಕ್ಕೆ ಇಳಿಸಿರುವ ಬಗೆ ಇರಲಿ ಪ್ರತಿಯೊಂದರಲ್ಲೂ ಸೈಡ್‌- B ಚೆನ್ನಾಗಿದೆ. ಚೈತ್ರಾ ಆಚಾರ್ ‘ಟೋಬಿ’ ಚಿತ್ರದಲ್ಲಿ ನಿಮ್ಮ ನಟನೆ ಮೆಚ್ಚಿದ್ದೆ. ಈ ಸಿನಿಮಾ ನೋಡಿದ ಮೇಲೆ ನಿಮ್ ಅಭಿಮಾನಿ ಆಗಿಬಿಟ್ಟೆ. ಎಂದಿನಂತೆ ರಕ್ಷಿತ್, ರುಕ್ಮಿಣಿ ತಮ್ಮ ತಮ್ಮ ಪಾತ್ರಗಳನ್ನು ಸೊಗಸಾಗಿ ನಿಭಾಯಿಸಿದ್ದಾರೆ. ಫಸ್ಟ್ ಹಾಫ್ ಎಂಜಾಯ್‌ ಮಾಡುವಂತಿದೆ. ಸೆಕೆಂಡ್ ಹಾಫ್ ಭಾವನಾತ್ಮಕವಾಗಿದೆ” ಎಂದು ಬರೆದಿದ್ದಾರೆ.

ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಜತೆಗೆ ಅಚ್ಯುತ್ ಕುಮಾರ್, ಅವಿನಾಶ್, ಚೈತ್ರಾ ಆಚಾರ್ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಸ್ವತಃ ರಕ್ಷಿತ್ ಶೆಟ್ಟಿ.

Exit mobile version