Site icon Vistara News

18 ವರ್ಷವಿದ್ದಾಗ ಹೇಗಿದ್ದರು ಪಿಗ್ಗಿ? Memories ಶೇರ್‌ ಮಾಡಿಕೊಂಡ ಪ್ರಿಯಾಂಕ ಚೋಪ್ರಾ

ಪ್ರಿಯಾಂಕ ಚೋಪ್ರಾ

ಬೆಂಗಳೂರು: ಬಾಲಿವುಡ್‌ ಮೂಲಕ ವೃತ್ತಿ ಜೀವನ ಆರಂಭಿಸಿ ಹಾಲಿವುಡ್‌ನಲ್ಲೂ ಛಾಪು ಮೂಡಿಸಿರುವ ನಟಿ ಪ್ರಿಯಾಂಕ ಚೋಪ್ರಾ. ತನ್ನ ನಟನಾ ವೃತ್ತಿಯನ್ನು ಆರಂಭಿಸುವ ಮುಂಚೆ,  ರೂಪದರ್ಶಿಯಾಗಿ ಮಾಡಿದ್ದ ಪ್ರಿಯಾಂಕಾ 2000ನೇ ಇಸವಿಯಲ್ಲಿ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡರು.

ಪ್ರಿಯಾಂಕ ಚೋಪ್ರಾ ತಮ್ಮ ಇನ್ಸ್ಟಾದಲ್ಲಿ ಹಳೆಯ Memories ಅನ್ನು ಶೇರ್‌ ಮಾಡುತ್ತಲೇ ಇರುತ್ತಾರೆ. ಇದೀಗ 22 ವರ್ಷದ ಹಳೆಯ ಪೋಟೋವನ್ನು ಹಂಚಿಕೊಂಡಿದ್ದಾರೆ ಚೋಪ್ರಾ. 18ನೇ ವಯಸ್ಸಿನಲ್ಲಿ ಮಾಲ್ಡೀವ್ಸ್‌ನಲ್ಲಿ ತೆಗೆದುಕೊಂಡ ಪೋಟೊ ಹಂಚಿಕೊಂಡಿದ್ದಾರೆ ಪಿಗ್ಗಿ.

ಇದನ್ನೂ ಓದಿ | ಪ್ಯಾರಿಸ್‌ನ ಬಲ್ಗೇರಿಯ ಈವೆಂಟ್‌ನಲ್ಲಿ ಮಿಂಚಿದ ಪ್ರಿಯಾಂಕಾ ಚೋಪ್ರಾ

ಝಾರ್ಖಂಡ್‌ ವೈದ್ಯ ದಂಪತಿಗಳಾದ ಅಶೋಕ್ ಚೋಪ್ರಾ ಮತ್ತು ಮಧು ಅಖೌರಿ ಚೋಪ್ರಾ ಅವರ ತಂದೆ ತಾಯಿ. ತನ್ನ ಬಾಲ್ಯದ ಜೀವನವನ್ನು   ಉತ್ತರಪ್ರದೇಶದ ಬರೇಲಿ, ಮೆಸಾಚುಸೆಟ್ಸ್‌ನ ನ್ಯೂಟನ್‌ ಮತ್ತು ಅಯೊವಾದ ಸಿಡಾರ್‌ ರಾಪಿಡ್ಸ್‌ನಲ್ಲಿ ಕಳೆದಿದ್ದಾರೆ. ತಂದೆ ಪಂಜಾಬಿ ಖತ್ರಿ  ಮೂಲದ ಕುಟುಂಬದವರಾಗಿದ್ದು, ತಾಯಿ ಜಮ್ಷೆಡ್‌ಪುರದಲ್ಲಿ ನೆಲೆಸಿದ್ದ ಮಲಯಾಳಿ ಕುಟುಂಬದವರಾಗಿದ್ದಾರೆ.

ಈ ಹಿಂದೆ ಪ್ರಿಯಾಂಕ ಚೋಪ್ರಾ ತಮ್ಮ ತಂದೆ  ಡಾ ಅಶೋಕ್‌ ಅವರೊಂದಿಗೆ ಇರುವ ಪೋಟೊ ಹಂಚಿಕೊಂಡು ಬಾಲ್ಯದ ನೆನಪನ್ನು ಮೆಲುಕು ಹಾಕಿದ್ದರು. ʼಡ್ಯಾಡಿಸ್ ಲಿಟ್ಲ್‌ ಗರ್ಲ್‌ʼ ಎಂದು ಕ್ಯಾಪ್ಷನ್‌ ನೀಡಿ ಸಂತಸವನ್ನು ಹಂಚಿಕೊಂಡಿದ್ದರು.

ವಾರಗಳ ಹಿಂದೆ ಪ್ರಿಯಾಂಕ ತನ್ನ ಬಾಲ್ಯದ ನೆನಪುಗಳನ್ನು ಹಂಚಿಕೊಂಡು, ಈ ಬಾರಿ ತನ್ನ ತಾಯಿ ಮತ್ತು ಅಜ್ಜಿಯೊಂದಿಗೆ ಎಂದು ಬರೆದುಕೊಂಡಿದ್ದರು. ʼನಾವೆಲ್ಲರೂ ಅಜ್ಜಿಯ ಜನ್ಮದಿನವನ್ನು ಆಚರಿಸುತ್ತಿದ್ದೇವೆ. ನನ್ನ ತಾಯಿ ಮೆಡಿಕಲ್‌ ಕರಿಯರ್‌ ಹಾಗೂ ತಂದೆ ಅಧ್ಯಯನದಲ್ಲಿ ಇದ್ದಾಗ, ಆ ಸಂದರ್ಭದಲ್ಲಿ ನನ್ನನ್ನು ಬೆಳೆಸಿದ್ದು ನನ್ನ ಅಜ್ಜಿ. ಅವಳು ನನ್ನ ಪಾಲಿನ ಅತ್ಯಂತ ಮುಖ್ಯ ವ್ಯಕ್ತಿʼ ಎಂದು ಶೇರ್‌ ಮಾಡಿದ್ದರು.

ಸಿದ್ಧಾರ್ಥ ಚೋಪ್ರಾ, ಪ್ರಿಯಾಂಕ ಚೋಪ್ರಾ ಅವರ ತಮ್ಮನಾಗಿದ್ದು, ಅವರೊಂದಿಗೆ ಬಾಲ್ಯದ ನೆನಪು ಹಂಚಿಕೊಂಡ ಕ್ಷಣ.

2000ರಲ್ಲಿ ಚೋಪ್ರಾ ಮಿಸ್ ಇಂಡಿಯಾ ವರ್ಲ್ಡ್‌,  ಆ ನಂತರ  ವಿಶ್ವಸುಂದರಿ ಕಿರೀಟ ಧರಿಸಿ ಹೆಸರುವಾಸಿಯಾಗುತ್ತಾರೆ. ಅಮೆರಿಕಾದ ನೆಟ್ವರ್ಕ್ ಸರಣಿಯಲ್ಲಿ, ಮೊದಲ ದಕ್ಷಿಣ ಏಷ್ಯಾ ಮಹಿಳೆ ಎನಿಸಿಕೊಳ್ಳುವ ಮೂಲಕ, ಎಬಿಸಿ ನಾಟಕದ ಶ್ರೇಣಿ ‘ಕ್ವಿಂಟಿಕೊ’ (Quantico) ದಲ್ಲಿ ಅಲೆಕ್ಸ್ ಪಾರ್ರಿಷ್ ಪಾತ್ರದಲ್ಲಿ ನಟಿಸಿ ಹಾಲಿವುಡ್‍ನಲ್ಲಿ ನಟಿಸಲು ಅವಕಾಶ ಪಡೆದರು.

ಪ್ರಿಯಾಂಕ ಅವರು ಅಮೆರಿಕದ ನ್ಯೂಯಾರ್ಕ್‌ನಲ್ಲಿ ರೆಸ್ಟೋರೆಂಟ್‌ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ನಿಕ್‌ ಜೋನಾಸ್‌ ಜತೆ ಮದುವೆಯಾದ ಬಳಿಕ ಹಾಲಿವುಡ್‌ನಲ್ಲಿ ನಟನೆಯನ್ನು ಮುಂದುವರೆಸಿದ್ದಾರೆ. ಪಿಗ್ಗಿ ಅಭಿಮಾನಿಗಳು ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ | ಮಿಸ್ ಮಾಡಬೇಡಿ, ವೇಶ್ಯೆಯರ ಬದುಕಿನ ಕಥಾನಕದ ಟಾಪ್ 5 ಸಿನಿಮಾ

Exit mobile version