Site icon Vistara News

Kantara Movie: ಕಾಂತಾರ ಕಥೆ ಹುಟ್ಟಿದ್ದು ಹೇಗೆ? ಪ್ಯಾನ್‌ ಇಂಡಿಯಾ ಸಿನಿಮಾ ಯಾಕಾಯ್ತು? ಮಾಹಿತಿ ಬಿಚ್ಚಿಟ್ಟ ರಿಷಬ್‌

Kantara Movie How was the story of Kantara born? Rishabh revealed the information about what happened to the Pan India movie

ಬೆಂಗಳೂರು : ರಿಷಬ್‌ ಶೆಟ್ಟಿ ನಟನೆ ಹಾಗೂ ನಿರ್ದೇಶನದ ಕಾಂತಾರ ಸಿನಿಮಾ (Kantara Movie) ವಿಶ್ವಾದ್ಯಂತ 400 ಕೋಟಿ ರೂ. ಅಧಿಕ ಗಳಿಕೆ ಕಂಡು, ಇದೀಗ ಕಾಂತಾರ-2 ಪ್ರಿಕ್ವೆಲ್‌ ಚಿತ್ರೀಕರಣಕ್ಕೆ ಸಜ್ಜಾಗಿದೆ. ಶನಿವಾರ (ಫೆ.11)ರಂದು ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದಲ್ಲಿ ಸಿನಿಮಾ ಪತ್ರಕರ್ತರ ಜತೆ ರಿಷಬ್ ಶೆಟ್ಟಿ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. 

ಕಾಂತಾರ ಸಿನಿಮಾ ನೂರು ದಿನ ಪೂರೈಸಿದೆ. ಸಿನಿಮಾ ಮಾಡಿರುವ ಮೋಡಿಗೆ ಭಾರತೀಯ ಚಿತ್ರೋದ್ಯಮವೇ ಬೆರಗಾಗಿದೆ. ಪ್ಯಾನ್‌ ಇಂಡಿಯಾ ಸಿನಿಮಾವಾಗಿ ಚಿತ್ರ ಹೊರಹೊಮ್ಮಿದೆ. ಕಾಂತಾರ ಕಥೆ ಹುಟ್ಟಿದ್ದು ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆಲ್ಲಲು ಕಾರಣ ಇವೆಲ್ಲದರ ಬಗ್ಗೆ ರಿಷಬ್‌ ಮಾತನಾಡಿದ್ದಾರೆ. ರಿಷಬ್‌ ಮಾತನಾಡಿ ʻʻನಿಜವಾದ ಕಾಂತರ ಸಿನಿಮಾ ಕಥೆ ಹುಟ್ಟಿದ್ದು, 2021ರ ಏಪ್ರಿಲ್ ಲಾಕ್ ಡೌನ್ ಸಮಯದಲ್ಲಿ . ಆ ಸಮಯದಲ್ಲಿ ಸಾವಯವ ಕೃಷಿ ಮಾಡೋಣ ಎನ್ನುವ ಯೋಚನೆ ಇತ್ತು. ಸಾವಯವ ಕೃಷಿಯಲ್ಲಿನ ಬೆಳೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೆ. ಅಲ್ಲಿ ನಾನು ಕೂತಿದ್ದ ಸ್ಥಳದಲ್ಲಿ ಬ್ಯಾಂಕ್ ನೌಕರರು ಸೇರಿದಂತೆ ಬೇರೆಯವರು ಇದ್ದಿದ್ದರು. ಅಲ್ಲಿ ಕಾಡು ಪ್ರಾಣಿ ಹೊಡೆಯುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಫಾರೆಸ್ಟ್ ಇಲಾಖೆಯವರು ಅಲ್ಲಿ ರೈಡ್ ಮಾಡಿದರು. ಹಾಗಾಗಿ ‘ಕಾಂತಾರ’ ಚಿತ್ರದ ಕಥೆ ಹುಟ್ಟಿತು’ ಎಂದಿದ್ದಾರೆ ರಿಷಬ್ ಶೆಟ್ಟಿ.

ಇದನ್ನೂ ಓದಿ: Kantara Movie: ಕಾಂತಾರ ತಂಡಕ್ಕೆ ಸಿಹಿ ಸುದ್ದಿ: ಕೇರಳ‌ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಪ್ಯಾನ್ ಇಂಡಿಯಾ ಮಟ್ಟಕ್ಕೆ ತಲುಪಲು ವಿಜಯ್ ಕಿರಗಂದೂರು ಕಾರಣ

ʻಕೆಜಿಎಫ್ 2′ ಚಿತ್ರ ನಿರ್ಮಾಣಕ್ಕೆ ಸಾಥ್ ನೀಡಿದ್ದು ಹೊಂಬಾಳೆ ಫಿಲ್ಮ್ಸ್. ಚಿತ್ರ ಯಶಸ್ಸು ಕಂಡಿದ್ದರಿಂದ ಈ ನಿರ್ಮಾಣ ಸಂಸ್ಥೆಯ ಹಸೆರು ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿತು. ಕಾಂತಾರ ಚಿತ್ರ ಕನ್ನಡದಲ್ಲಿ ಯಶಸ್ಸು ಕಂಡ ನಂತರ ಅದನ್ನು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂಗೆ ರಿಮೇಕ್ ಮಾಡಲಾಯಿತು. ಹೊಂಬಾಳೆ ಸಂಸ್ಥೆಗೆ ಈಗಾಗಲೇ ಜನಪ್ರಿಯತೆ ಇರುವ ಕಾರಣ ಕಾಂತಾರ ಚಿತ್ರಕ್ಕೆ ಮತ್ತಷ್ಟು ಫ್ಲಸ್ ಆಯಿತು ಎಂದು ರಿಷಬ್ ವಿವರಿಸಿದ್ದಾರೆ.

ಆಸ್ಕರ್ ಮಟ್ಟದವರೆಗೂ ಅಹರ್ಹತೆ ಪಡೆದ ಕಾಂತಾರದ ಬಗ್ಗೆ ರಿಷಬ್‌ ಮಾತನಾಡಿ ʻʻಎರಡು ವಿಚಾರ ತುಂಬಾ ತಲೆಗೆ ತಗೆದುಕೊಳ್ಳುವುದಕ್ಕೆ ಆಗುವುದಿಲ್ಲ. ಉತ್ಸಾಹ ಹಾಗೂ ನಿರೀಕ್ಷೆ ಎರಡೂ ತುಂಬ ಹರ್ಟ್ ಮಾಡುತ್ತದೆ. ಕೆಲಸ ಮಾಡುವುದಷ್ಟೇ ನಮ್ಮ ಕೆಲಸ. ರಿಲೀಸ್ ಸಮಯದಲ್ಲಿ ಹೆಚ್ಚು ಪ್ರಚಾರ ಮಾಡಿರಲಿಲ್ಲ. ಬಾಯಿಮಾತಿನ ಪ್ರಚಾರ ಚಿತ್ರಕ್ಕೆ ಸಹಕಾರಿ ಆಯಿತು. ನಮ್ಮ ಚಿತ್ರ ಪ್ಯಾನ್ ಇಂಡಿಯಾ ಮಟ್ಟಕ್ಕೆ ತಲುಪಲು ವಿಜಯ್ ಕಿರಗಂದೂರು ಕಾರಣʼʼ ಎಂದರು.

ಇದನ್ನೂ ಓದಿ: Kantara Movie: ‘ವರಾಹ ರೂಪಂ’ ವಿವಾದ: ರಿಷಬ್‌, ವಿಜಯ್ ಕಿರಗಂದೂರುಗೆ ನಿರೀಕ್ಷಣಾ ಜಾಮೀನು

ಪ್ರಿಕ್ವೆಲ್‌ ಆಗಿ ಬರಲಿದೆ ಕಾಂತಾರ 2:

ಕಾಂತಾರ-1 ಸಿಕ್ವೆಲ್‌ ಆಗಿದ್ದರೆ, ಕಾಂತಾರ-2 ಪ್ರಿಕ್ವೆಲ್‌ (Prequel film) ಆಗಿ ಮೂಡಿಬರಲಿದೆ. ಕಾಂತಾರ-2 ಪೂರ್ವಭಾವಿ ಕತೆಯಾಗಿದ್ದು, ಇದು ಗ್ರಾಮಸ್ಥರು, ದೇವತೆ ಮತ್ತು ತೊಂದರೆಗೊಳಗಾದ ರಾಜನ ನಡುವಿನ ಸಂಬಂಧವನ್ನು ಅನ್ವೇಷಿಸುತ್ತದೆ. ರಾಜನು ಗ್ರಾಮಸ್ಥರನ್ನು ಮತ್ತು ತನ್ನ ಸುತ್ತಲಿನ ಭೂಮಿಯನ್ನು ರಕ್ಷಿಸಲು ದೇವತೆಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾನೆ. ʻಮನುಷ್ಯ ಮತ್ತು ಪ್ರಕೃತಿಯ ಕದನʼ ಚಿತ್ರದ ತಿರುಳು ಇದಾಗಿದೆ. ಕಾಂತಾರ-2, 2024ರಲ್ಲಿ ಥಿಯೇಟರ್‌ಗೆ ಬರಲಿದೆ ಎಂದು ರಿಷಬ್‌ ಖಚಿತಪಡಿಸಿದ್ದಾರೆ.

Exit mobile version