Site icon Vistara News

Hoysala Movie | ಡಾಲಿ ಧನಂಜಯ ಅಭಿನಯದ ಹೊಯ್ಸಳ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌!

Hoysala Movie

ಬೆಂಗಳೂರು : ಡಾಲಿ ಧನಂಜಯ್‌ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನೆಮಾತಾಗುತ್ತಿದ್ದಾರೆ. ಇತ್ತೀಚಿನ ಅವರ ʻಬೈರಾಗಿʼ ಸಿನಿಮಾದ ಅಭಿನಯಕ್ಕೂ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿದೆ. ʻಜಮಾಲಿ ಗುಡ್ಡʼ ಸಿನಿಮಾದ ಪೋಸ್ಟರ್‌ ಹಂಚಿಕೊಂಡು ಅವರು ಸಖತ್‌ ಸುದ್ದಿಯಲ್ಲಿದ್ದರು. ಇದೇ ತಿಂಗಳು ಬಿಡುಗಡೆಗೊಳ್ಳುವ ʻಮಾನ್ಸೂನ್‌ ರಾಗʼ ಸಿನಿಮಾ ಪ್ರಚಾರದಲ್ಲಿ ತೊಡಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ʻಹೊಯ್ಸಳʼ (Hoysala Movie ) ಚಿತ್ರದ ಬಿಡುಗಡೆ ದಿನಾಂಕ ಚಿತ್ರತಂಡ ರಿವೀಲ್‌ ಮಾಡಿದೆ. 2023ರ ಮಾರ್ಚ್‌ 30ರಂದು ಸಿನಿಮಾ ತೆರೆಗೆ ಬರಲಿದೆ ಎಂದು ಕೆಆರ್‌ಜಿ ಸ್ಟುಡಿಯೋಸ್‌ ಬುಧವಾರ ತಿಳಿಸಿದೆ.

ʻಮಾನ್ಸೂನ್‌ ರಾಗʼ, ʻತೋತಾಪುರಿʼ, ʻಹೆಡ್‌ಬುಷ್‌ʼ, ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯಸಿಯಾಗಿರುವ ಡಾಲಿ ಧನಂಜಯ್‌ ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಸಿನಿಮಾ ಬ್ಯಾಂಕ್‌ ಹೊಂದಿರುವ ನಟ ಎನಿಸಿಕೊಂಡಿದ್ದಾರೆ. ಡಾಲಿ ಧನಂಜಯ್‌ ಅಭಿನಯದ 25ನೇ ಸಿನಿಮಾ ಹೊಯ್ಸಳ ಆಗಿದ್ದು, ಈ ಚಿತ್ರದಲ್ಲಿ ಡಾಲಿ ʻಗುರುದೇವ ಹೊಯ್ಸಳʼ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ | Hoysala Movie | ಡಾಲಿ ಧನಂಜಯ ಅಭಿನಯದ ಹೊಯ್ಸಳ ಸೆಟ್‌ಗೆ ಸ್ಯಾಂಡಲ್‌ವುಡ್‌ ಪದ್ಮಾವತಿ ರಮ್ಯಾ ಪ್ರತ್ಯಕ್ಷ

ನಿರ್ದೇಶಕ ವಿಜಯ್‌ ನಾಗೇಂದ್ರ ಈ ಹಿಂದೆ ಗಣೇಶ್‌ ಅಭಿನಯದ ಗೀತಾ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅಜನೀಶ್‌ ಲೋಕನಾಥ್‌ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಅಮೃತ ಅಯ್ಯಂಗಾರ್‌, ಅಚ್ಯುತ್‌ ಕುಮಾರ್‌, ಪ್ರತಾಪ್‌ ನಾರಾಯಣ್‌, ನವೀನ್‌ ಶಂಕರ್‌, ಅವಿನಾಶ್‌ ಕೆ.ಜಿ.ಎಫ್‌, ರಾಘು ಶಿವಮೊಗ್ಗ ಮುಂತಾದ ಕಲಾವಿದರಿದ್ದಾರೆ. ಡಾಲಿ ಧನಂಜಯ ಹಾಗೂ ರಚಿತಾ ರಾಮ್ ನಟನೆಯ ʻಮಾನ್ಸೂನ್ ರಾಗʼ ಸಿನಿಮಾ ಇದೇ ಸೆಪ್ಟೆಂಬರ್‌ 16 ಚಿತ್ರ ತೆರೆ ಕಾಣಲಿದೆ.

ಇದನ್ನೂ ಓದಿ | Monsoon Raaga | ಡಾಲಿ- ರಚಿತಾ ಅಭಿನಯದ ಮಾನ್ಸೂನ್ ರಾಗ ರಿಲೀಸ್ ಡೇಟ್ ಅನೌನ್ಸ್!

Exit mobile version