Site icon Vistara News

Hoysala Movie: ಡಾಲಿ ಧನಂಜಯ್‌ ಅಭಿನಯದ ಹೊಯ್ಸಳ ಸಿನಿಮಾದ ಮೆಲೋಡಿ ಲವ್ ಸಾಂಗ್ ಔಟ್‌

Hoysala Movie Romantic song out

ಬೆಂಗಳೂರು: ಡಾಲಿ ಧನಂಜಯ್‌ ಅಭಿನಯದ ಬಹು ನಿರೀಕ್ಷಿತ ಹೊಯ್ಸಳ ಸಿನಿಮಾದ (Hoysala Movie) ಮೊದಲ ಹಾಡು ಫೆ.25ರಂದು ಬಿಡುಗಡೆಗೊಂಡಿತ್ತು . “ಇದೀಗ ಅರೇ ಇದು ಎಂಥಾ ಭಾವನೆ” ಎನ್ನುವ ಮೆಲೋಡಿ ಲವ್ ಸಾಂಗ್ ಬಿಡುಗಡೆಗೊಂಡಿದೆ. ಬಡವ ರಾಸ್ಕಲ್‌ನಲ್ಲಿ ಉಡುಪಿ ಹೋಟೆಲು ಹಾಡಿನಿಂದ ತಮ್ಮ ಜೋಡಿಯ ಮೋಡಿ ಮಾಡಿದ್ದ ಧನಂಜಯ ಹಾಗೂ ಅಮೃತಾ ಐಯ್ಯಂಗಾರ್ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಗಾಯಕ ಹರಿಚರಣ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ಅಜನೀಶ್ ಲೋಕನಾಥ್ ರವರು ಸಂಗೀತ ಸಂಯೋಜಿಸಿದ್ದಾರೆ. ಡಾಲಿ ಧನಂಜಯ್​ರ 25ನೇ ಸಿನಿಮಾ ಹೊಯ್ಸಳ ಮಾರ್ಚ್‌ 30 ರಂದು ತೆರೆಮೇಲೆ ಅಪ್ಪಳಿಸಲಿದೆ.

ಈ ಹಿಂದೆ ಟೀಸರ್‌ (Hoysala Movie Teaser) ಬಿಡುಗಡೆಯಾಗಿದ್ದು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ನಿಷ್ಠ ಹಾಗೂ ಖಡಕ್‌ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಡಾಲಿ ಧನಂಜಯ್‌ ಅವರು ನಟಿಸಿದ್ದು, ಟೀಸರ್‌ ರಿಲೀಸ್‌ ಆದ ಕೆಲವೇ ಗಂಟೆಯಲ್ಲಿ 14 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಮೊದಲ ಹಾಡಿಗೆ ಸಂಗೀತ ನೀಡಿರುವುದು ಅಜನೀಶ್ ಲೋಕನಾಥ್. ಹಾಡನ್ನು ಹಾಡಿರುವುದು ನಕಾಶ್‌ ಅಜೀಜ್.

ಇದನ್ನೂ ಓದಿ: Hoysala Movie: ಡಾಲಿ ಧನಂಜಯ್‌ ಅಭಿನಯದ ʻಸಲ ಸಲ ಹೊಯ್ಸಳʼ ಸಾಂಗ್‌ ಔಟ್‌!

ಹೊಂಬಾಳೆ ಸಂಸ್ಥೆಯ ವಿಜಯ್‌ ಕಿರಗಂದೂರ್‌ ಅರ್ಪಿಸುವ, ಕೆ.ಆರ್‌.ಜಿ. ಸ್ಟುಡಿಯೋಸ್‌ ನಿರ್ಮಾಣ ಸಂಸ್ಥೆಯ ಬ್ಯಾನರ್‌ ಅಡಿಯಲ್ಲಿ ಕಾರ್ತಿಕ್‌ ಹಾಗೂ ಯೋಗಿ ಜಿ. ರಾಜ್‌ ಅವರು ಚಿತ್ರ ನಿರ್ಮಿಸಿದ್ದಾರೆ. ಕಾರ್ತಿಕ್‌ ಎಸ್‌. ಚಿತ್ರದ ಛಾಯಾಗ್ರಾಹಕರಾದರೆ, ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನವಿದೆ.

ಧನಂಜಯ್‌ ಅವರು ಗುರುದೇವ್‌ ಪಾತ್ರಧಾರಿಯಾದರೆ, ಗಂಗಾ ಆಗಿ ಅಮೃತಾ ಅಯ್ಯಂಗಾರ್‌ ಬಣ್ಣ ಹಚ್ಚಿದ್ದಾರೆ. ಇನ್ನು ನವೀನ್‌ ಶಂಕರ್‌, ಅವಿನಾಶ್‌ ಸೇರಿ ಹಲವು ನಟರು ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾ ಟೀಸರ್‌ ನೋಡಿದ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಕಾರಣ ಸಿನಿಮಾ ತಂಡದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

Exit mobile version