Site icon Vistara News

Priyanka Chopra: `ಸಿಟಾಡೆಲ್’ ವೀಕ್ಷಿಸಿ ಪಿಗ್ಗಿಯನ್ನು ಹೊಗಳಿದ ಹೃತಿಕ್ ರೋಷನ್

Hrithik Roshan as he reviews Citadel

ಬೆಂಗಳೂರು: ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ವೆಬ್ ಸೀರೀಸ್ `ಸಿಟಾಡೆಲ್’ ವೀಕ್ಷಿಸಿದ ಬಳಿಕ ನಟ ಹೃತಿಕ್ ರೋಷನ್ ಅವರು ಪಿಗ್ಗಿಯನ್ನು ಹೊಗಳಿದ್ದಾರೆ. ಹೃತಿಕ್ ಸಿನಿಮಾ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಮತ್ತು ಹೃತಿಕ್ ಕ್ರಿಶ್ ಫ್ರಾಂಚೈಸ್ ಮತ್ತು ಅಗ್ನಿಪಥ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು.

ಹೃತಿಕ್ ರೋಷನ್ ಸಿಟಾಡೆಲ್ ಪೋಸ್ಟರ್ ಹಂಚಿಕೊಂಡು “ಪ್ರಿಯಾಂಕಾ ಅವರನ್ನು ಸಿಟಾಡೆಲ್‌ನಲ್ಲಿ ನೋಡುವುದು ತುಂಬ ಅದ್ಭುತವಾಗಿದೆ! ನಂಬಲಾಗದಷ್ಟು ಮನರಂಜನೆಯ ಪ್ರದರ್ಶನ! ಅತ್ಯುತ್ತಮ ನಿರ್ದೇಶನ ಮತ್ತು ಚಿತ್ರಕಥೆ. ನಿಮ್ಮ ಬಗ್ಗೆ ತುಂಬ ಹೆಮ್ಮೆ ಇದೆʼʼಎಂದು ಬರೆದುಕೊಂಡಿದ್ದಾರೆ.

ಪ್ರಿಯಾಂಕಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಗಳಲ್ಲಿ ರಿ-ಪೋಸ್ಟ್ ಮಾಡಿದ್ದಾರೆ. ‘ಧನ್ಯವಾದಗಳು ನನ್ನ ಸ್ನೇಹಿತನೇ’ ಎಂದು ಬರೆದುಕೊಂಡಿರುವ ಅವರು ಹೃತಿಕ್​ ರೋಷನ್​ರ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ. ಅಮೆಜಾನ್​ ಪ್ರೈಂ ವಿಡಿಯೊದಲ್ಲಿ ‘ಸಿಟಾಡೆಲ್​’ ಪ್ರಸಾರ ಆಗುತ್ತಿದೆ.

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 2023ರ ಮೆಟ್‌ ಗಾಲಾ’ದಲ್ಲಿ ಪಿಗ್ಗಿ ತಮ್ಮ ಉಡುಗೆಗಳಿಂದ ಸಖತ್‌ ಸುದ್ದಿಯಲ್ಲಿದ್ದರು. ನಟಿ ತಮ್ಮ ಮುಂಬರುವಲವ್ ಅಗೇನ್ʼ ಸಿನಿಮಾದ ಪ್ರೀಮಿಯರ್‌ನಲ್ಲಿ (Love Again premier) ಭಾಗಿಯಾಗಿದ್ದರು.

ಇದನ್ನೂ ಓದಿ: Priyanka Chopra : ಬಾಲಿವುಡ್‌ನ ಮಾಜಿ ಪ್ರಿಯತಮರ ಬಗ್ಗೆ ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?

ಮೇ 3ರಂದು ನ್ಯೂಯಾರ್ಕ್‌ನಲ್ಲಿ ಪ್ರೀಮಿಯರ್‌ನಲ್ಲಿ, ಪ್ರಿಯಾಂಕಾ, ಸ್ಯಾಮ್ ಮತ್ತು ನಿಕ್ ಜೋನಾಸ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಿಯಾಂಕಾ ಅವರ ಮೂಗಿಗೆ ಸ್ಯಾಮ್​ ಹ್ಯೂವನ್ ಕಿಸ್‌ ಕೊಟ್ಟಿದ್ದರು. ಈ ವಿಡಿಯೊ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಲವ್ ಅಗೇನ್ ಸಿನಿಮಾವನ್ನು ಜಿಮ್ ಸ್ಟ್ರೌಸ್ ಬರೆದು ನಿರ್ದೇಶಿಸಿದ್ದಾರೆ. ಮೇ 12ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ. ನಟಿ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ʻಜೀ ಲೆ ಜರಾʼದಲ್ಲಿ ಕೂಡ ತೆರೆ ಹಂಚಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಫರ್ಹಾನ್ ಅಖ್ತರ್ ನಿರ್ದೇಶಿಸಲಿದ್ದಾರೆ.

Exit mobile version