Site icon Vistara News

Hrithik Roshan: ಹೃತಿಕ್ ರೋಷನ್ ಗರ್ಲ್ ಫ್ರೆಂಡ್ ವಿಚಿತ್ರ ಡ್ಯಾನ್ಸ್! ಸಬಾ ಟ್ರೋಲ್‌, ತಿರುಗೇಟು ಕೊಟ್ಟ ನಟ!

Hrithik Roshan

ಬೆಂಗಳೂರು: ಹೃತಿಕ್ ರೋಷನ್ (Hrithik Roshan) ಅವರ ಗೆಳತಿ ಸಬಾ ಆಜಾದ್ (Saba Azad) ಅವರು ಇತ್ತೀಚೆಗೆ ಲ್ಯಾಕ್ಮೆ ಫ್ಯಾಶನ್ ವೀಕ್ ರ‍್ಯಾಂಪ್‌ ವಾಕ್ ಮತ್ತು ಡ್ಯಾನ್ಸ್ ಮಾಡಿದ್ದಾರೆ. ಸಬಾ ಆಜಾದ್ ಡ್ಯಾನ್ಸ್‌ ಹೆಚ್ಚು ಟ್ರೋಲ್‌ಗೆ ಒಳಗಾಗಿದೆ. ಶಿಮ್ಮರಿ ಬಟ್ಟೆಯ ಡ್ರೆಸ್ ಧರಿಸಿದ್ದು ರ‍್ಯಾಂಪ್‌ ವಾಕ್ ಮಾಡಿದ್ದಾರೆ. ಸಬಾ ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಆ ಮೊಮೆಂಟ್ ಎಂಜಾಯ್ ಮಾಡಿದ್ದರು. ಟ್ರೋಲಿಗರು ಹೃತಿಕ್ ರೋಷನ್ ಅವರನ್ನು ಕಾಲೆಳಿದಿದ್ದರು. ಇದೀಗ ಹೃತಿಕ್‌ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ಸಾಬಾ ಆಜಾದ್ ಹಾಡಿನ ಜತೆ ವಿಚಿತ್ರವಾಗಿ ಡ್ಯಾನ್ಸ್‌ ಮಾಡಿದ್ದಾರೆ. ಈಗ, ಹೃತಿಕ್ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಬಾ ಅವರ ಡ್ಯಾನ್ಸ್ ವಿಡಿಯೊವನ್ನು ಮರು-ಪೋಸ್ಟ್ ಮಾಡಿ, ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ. “ಆಹಾ ಅದೇನು ಶರಣಾಗತಿ! ಅದಕ್ಕಾಗಿಯೇ ಅ ವೇದಿಕೆಗೊಂದು ಕಳೆʼʼಎನ್ನುವ ರೀತಿ ಬರೆದುಕೊಂಡಿದ್ದಾರೆ.

ವಿಡಿಯೋ ವೈರಲ್ ಆದ ಕೂಡಲೇ ನೆಟ್ಟಿಗರು ಕಮೆಂಟ್ ಮಾಡಲಾರಮಭಿಸಿದ್ದಾರೆ. ಕೆಲವರು ಸಬಾ ಮತ್ತಿನಲ್ಲಿದ್ದಾರೆ ಎಂದರೆ , ಇನ್ನು ಕೆಲವರು ಅವಳು ಅವಳನ್ನೇ ಫೂಲ್ ಮಾಡುತ್ತಿದ್ದಾಳೆ ಎಂದಿದ್ದಾರೆ.

ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ತಮ್ಮ ಪತ್ನಿ ಸುಸೇನ್ ಖಾನ್​​ಗೆ 2014ರಲ್ಲಿ ಡಿವೋರ್ಸ್​ ನೀಡಿದ ಬಳಿಕ ನಟಿ ಸಬಾ ಆಜಾದ್ ಜತೆ ಡೇಟಿಂಗ್ ಮಾಡುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಈ ಜೋಡಿ ಇದೇ ವರ್ಷಾಂತ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂಬ ಸುದ್ದಿಯೂ ಚಾಲ್ತಿಯಲ್ಲಿದೆ.

ಇದನ್ನೂ ಓದಿ: IIFA 2023 Winners Full List: ಹೃತಿಕ್ ರೋಷನ್, ಆಲಿಯಾ ಭಟ್‌ಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ; ವಿಜೇತರ ಪಟ್ಟಿ ಇಲ್ಲಿದೆ!

ಸಬಾ ಆಜಾದ್‌ ಯಾರು?

ಸಬಾ ಆಜಾದ್‌ 2008ರಲ್ಲಿ ತೆರೆ ಕಂಡ ʻದಿಲ್‌ ಕಬ್ಬಡ್ಡಿʼಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ‘ಪ್ಯೂರ್ ವೆಜ್’, ‘ಕನೆಕ್ಟೆಡ್’ ಕಿರುಚಿತ್ರಗಳಲ್ಲಿ ಸಬಾ ಆಜಾದ್ ಅಭಿನಯಿಸಿದ್ದಾರೆ. ʼಮುಜ್ಸೆ ಫ್ರಾಡ್‌ಶಿಪ್‌ ಕರೋಗಿʼ ಚಿತ್ರದಲ್ಲಿ ನಾಯಕಿಯಾಗಿ ಎಲ್ಲರ ಗಮನ ಸೆಳೆದಿದ್ದರು. 26 ವರ್ಷದ ಸಬಾ ಆಜಾದ್‌ ಈಗ ವಿವಿಧ ವೆಬ್‌ ಸೀರಿಸ್‌ಗಳಲ್ಲಿಯೂ ಅಭಿನಯಿಸುತ್ತಿದ್ದಾರೆ. ಚಿತ್ರಗಳಲ್ಲಿ ಮಿಂಚಿದಕ್ಕಿಂತ ಹೃತಿಕ್‌ ರೋಷನ್‌ ಅವರೊಂದಿಗೆ ಸಂಬಂಧದಿಂದಾಗಿ ಅವರು ಹೆಚ್ಚು ಸುದ್ದಿಯಾಗಿದ್ದಾರೆ.

ಸುಸೇನ್‌ ಖಾನ್‌ ಅವರಿಂದ ವಿಚ್ಛೇದನ ಪಡೆದ ಹೃತಿಕ್‌

ಹೃತಿಕ್ ರೋಷನ್‌ಗೆ ಈಗಾಗಲೇ ಮದುವೆಯಾಗಿದೆ ಮತ್ತು ಮಕ್ಕಳಿದ್ದಾರೆ. ಅವರು ಸುಸೇನ್‌ ಖಾನ್‌ ಅವರನ್ನು ಪ್ರೀತಿಸಿ ಮದುವೆಯಾಗಿ ನಂತರ ವಿಚ್ಛೇದನ ಪಡೆದುಕೊಂಡಿದ್ದಾರೆ. 2000ನೇ ಇಸವಿಯಲ್ಲಿ ಸುಸೇನ್ ಖಾನ್ ಹಾಗೂ ಹೃತಿಕ್ ರೋಷನ್ ಅವರ ವಿವಾಹ ಮಹೋತ್ಸವ ಜರುಗಿತ್ತು. 2014ರಲ್ಲಿ ತಮ್ಮ 14 ವರ್ಷಗಳ ದಾಂಪತ್ಯ ಜೀವನಕ್ಕೆ ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ಫುಲ್ ಸ್ಟಾಪ್ ಇಟ್ಟರು. ವಿಚ್ಛೇದನದ ಬಳಿಕ ಮಕ್ಕಳಿಗಾಗಿ ಕೆಲವೊಮ್ಮೆ ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು.

Exit mobile version