Site icon Vistara News

Fighter Banned: ಗಲ್ಫ್ ದೇಶಗಳಲ್ಲಿ ಹೃತಿಕ್ ರೋಷನ್- ದೀಪಿಕಾ ಅಭಿನಯದ ʻಫೈಟರ್‌ʼ ಸಿನಿಮಾ ನಿಷೇಧ!

Hrithik Roshan starrer Fighter

ಬೆಂಗಳೂರು: ಹೃತಿಕ್ ರೋಷನ್ (Hrithik Roshan) ಮತ್ತು ದೀಪಿಕಾ ಪಡುಕೋಣೆ (Deepika Padukone) ಅಭಿನಯದ ʻಫೈಟರ್ʼ ಬಿಡುಗಡೆಗಾಗಿ ಅವರ ಫ್ಯಾನ್ಸ್‌ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಆದರೆ ಸಿನಿಮಾ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದ ಗಲ್ಫ್ ದೇಶಗಳಲ್ಲಿಯ ವೀಕ್ಷಕರಿಗೆ ಕೆಟ್ಟ ಸುದ್ದಿಯಿದೆ. ಫಿಲ್ಮ್‌ ಬಿಸ್ನೆಸ್‌ ತಜ್ಞ ಮತ್ತು ನಿರ್ಮಾಪಕರಾದ ಗಿರೀಶ್‌ ಜೋಹಾರ್‌ ಪ್ರಕಾರ ಸದ್ಯ ಯುಎಇ (Fighter Banned) ಹೊರತುಪಡಿಸಿ ಇತರೆ ಗಲ್ಫ್‌ ದೇಶಗಳಲ್ಲಿ ಫೈಟರ್‌ ಸಿನಿಮಾಕ್ಕೆ ಅನುಮತಿ ದೊರಕಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. ಗಲ್ಫ್‌ ದೇಶಗಳಲ್ಲಿ ಫೈಟರ್‌ ಸಿನಿಮಾ ಬಿಡುಗಡೆಯಾಗದೆ ಇರುವುದಕ್ಕೆ ಕಾರಣವೇನೆಂದು ಬಹಿರಂಗವಾಗಿಲ್ಲ.

ಗಿರೀಶ್ ಟ್ವೀಟ್ ಮಾಡಿ ʻʻಫೈಟರ್‌ ಸಿನಿಮಾಗೆ ಒಂದು ಹಿನ್ನಡೆ, ಸಿನಿಮಾ ಮಧ್ಯ ಪ್ರಾಚ್ಯ ದೇಶಗಳಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿಲ್ಲ. ಇದಕ್ಕೆ ಆ ದೇಶಗಳು ಅಧಿಕೃತವಾಗಿ ನಿಷೇಧ ಹೇರಿವೆ. ಪಿಜಿ15 ಕ್ಲಾಸಿಫಿಕೇಷನ್‌ನೊಂದಿಗೆ ಯುಎಇಯಲ್ಲಿ ಮಾತ್ರ ಈ ಸಿನಿಮಾ ಬಿಡುಗಡೆಯಾಗಲಿದೆʼಎಂದು ಬರೆದುಕೊಂಡಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ಹಸಿರು ನಿಶಾನೆ ದೊರಕಿಲ್ಲ. ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಜನವರಿ 25ರಂದು ಭಾರತೀಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಮುಖ್ಯಭೂಮಿಕೆಯಲ್ಲಿದ್ದಾರೆ. ಫೈಟರ್ ಟೀಸರ್‌ನಲ್ಲಿ, ಜೆಟ್‌ ವಿಮಾನವೇರಿ ಸಾಹಸ ಪ್ರದರ್ಶಿಸಿದ್ದಾರೆ ಹೃತಿಕ್‌ ಮತ್ತು ದೀಪಿಕಾ.ವರದಿಯ ಪ್ರಕಾರ, ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾ 3D ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಪಠಾಣ್‌ ಮೂಲಕ 1000 ಕೋಟಿಯ ಹಿಟ್‌ ಸಿನಿಮಾ ನೀಡಿರುವ ಸಿದ್ಧಾರ್ಥ್‌ ಆನಂದ್‌, ಫೈಟರ್‌ ಮೂಲಕ ಮತ್ತೊಂದು ಹಿಟ್‌ ಸಿನಿಮಾ ನೀಡಲಿದ್ದಾರೆ. ನಿರ್ದೇಶಕ ಸಿದ್ಧಾರ್ಥ್ ಆನಂದ್ ಒಂದು ನಿಮಿಷ 10 ಸೆಕೆಂಡ್‌ನ ಟೀಸರ್ ಮೂಲಕ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಪ್ಯಾಟಿ, ಮಿನ್ನಿ ಮತ್ತು ರಾಕಿ ಸ್ಕ್ವಾಡ್ರನ್ ಕೂಡ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರು ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ ಪಠಾಣ್‌ ಸಿನಿಮಾ ನಂತರ ಈ ಸಿನಿಮಾ ಮೂಲಕ ಮತ್ತೆ ಕಮ್‌ ಬ್ಯಾಕ್‌ ಆಗಿದ್ದಾರೆ.

ಇದನ್ನೂ ಓದಿ: Fighter Trailer: ʼಫೈಟರ್‌ʼ ಚಿತ್ರದ ಟ್ರೈಲರ್‌ ಔಟ್‌; ವೈಮಾನಿಕ ಸಾಹಸವೇ ಹೈಲೈಟ್‌

ಈ ಸಿನಿಮಾಗೆ ಹೃತಿಕ್‌ ರೋಷನ್‌ 85 ಕೋಟಿ ರೂ. ಸಂಭಾವನೆ ಪಡೆದರೆ, ದೀಪಿಕಾ ಚಿತ್ರಕ್ಕೆ 20 ಕೋಟಿ ರೂ. ಪಡೆಯುತ್ತಿದ್ದಾರೆ ಎಂದೂ ವರದಿಯಾಗಿದೆ. ಸಿದ್ಧಾರ್ಥ್ ಆನಂದ್‌ ಅವರು ದೀಪಿಕಾಗಿಂತ ಹೆಚ್ಚು, ಅಂದರೆ 40 ಕೋಟಿ ರೂ. ಪಡೆದುಕೊಳ್ಳುತ್ತಿದ್ದಾರೆ. ದೀಪಿಕಾಗಿಂತ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ʻಉಳಿದ ಸೆಲೆಬ್ರಿಟಿಗಳು 15 ಕೋಟಿ ರೂ. ಪಡೆದುಕೊಳ್ಳುತ್ತಿದ್ದು, ಸಂಭಾವನೆ ಮೊತ್ತವೇ 160 ಕೋಟಿ ರೂ. ತಲುಪಲಿದೆ’ ಎಂದು ಕಮಾಲ್​ ಆರ್​. ಖಾನ್ ಈ ಹಿಂದೆ​ ಟ್ವೀಟ್​ ಮಾಡಿದ್ದರು. 350 ಕೋಟಿ ರೂ. ಬಜೆಟ್‌ ಈಗಾಗಲೆ ಮೀರಿದೆ. ಹೃತಿಕ್​ ರೋಷನ್​ ಜತೆ ಸಿದ್ಧಾರ್ಥ್‌ ಆನಂದ್‌ ಅವರು ಈ ಹಿಂದೆ ‘ವಾರ್​’ ಮತ್ತು ‘ಬ್ಯಾಂಗ್​ ಬ್ಯಾಂಗ್​’ ಚಿತ್ರಗಳನ್ನು ಮಾಡಿದ್ದರು. ಆ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡವು. ಈಗ ಮತ್ತೆ ಅವರು ‘ಫೈಟರ್​’ ಚಿತ್ರದಲ್ಲಿ ಹೃತಿಕ್​ ರೋಷನ್​ ಜತೆ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಜೋರಾಗಿದೆ.

Exit mobile version