ಬೆಂಗಳೂರು: ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ತಾಯಿ ಪಿಂಕಿ ರೋಷನ್ ಅವರ ಜನುಮದಿನಕ್ಕೆ ಸ್ಪೆಷಲ್ ವಿಡಿಯೊ ಹಂಚಿಕೊಂಡಿದ್ದಾರೆ. 69ನೇ ವಸಂತಕ್ಕೆ ಪಿಂಕಿ ರೋಷನ್ ಕಾಲಿಟ್ಟಿದ್ದಾರೆ. ವಿಡಿಯೊ ಮೂಲಕ ಹಳೆಯ ನೆನಪುಗಳನ್ನು ಮೆಲುಕು ಹಾಕಿ ವಿಶೇಷವಾಗಿ ಆಚರಿಸಿದ್ದಾರೆ.
ವಿಡಿಯೊದಲ್ಲಿ ಹೃತಿಕ್ ರೋಷನ್ ಬಾಲ್ಯದಿಂದ ಈವರೆಗೂ ತಾಯಿ ಜತೆ ಕಳೆದ ಸುಮಧುರ ಕ್ಷಣಗಳ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕಳೆದ ವರ್ಷ ದೀಪಾವಳಿಯಲ್ಲಿ ಅಮ್ಮನ ಜತೆ ನೃತ್ಯ ಮಾಡುತ್ತಿರುವುದು, ಜಿಮ್‌ನಲ್ಲಿ ತಾಯಿ ಜತೆ ವರ್ಕೌಟ್… ಹೀಗೆ ಇನ್ನಿತರ ಮೆಮೊರೀಸ್ ಶೇರ್ ಮಾಡಿದ್ದಾರೆ.
ಪೋಸ್ಟ್ ಅನ್ನು ಹಂಚಿಕೊಂಡ ಹೃತಿಕ್, “ನಿಮಗಾಗಿ ನಿಮ್ಮೊಳಗೆ ಇರುವ ನನ್ನ ತಾಯಿಯ ಪ್ರೀತಿಯನ್ನು ನೀವು ಪ್ರೀತಿಸಬೇಕೆಂದು ನಾನು ಬಯಸುತ್ತೇನೆ. 69 ನೇ ಜನ್ಮದಿನದ ಶುಭಾಶಯಗಳು!ʼʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Hrithik Roshan | ಹೃತಿಕ್ ರೋಷನ್ ಮತ್ತು ಸಬಾಗೆ ಮದುವೆಗೇನು ಅರ್ಜೆಂಟ್ ಇಲ್ವಂತೆ!
ಹೃತಿಕ್ ಅವರ ಗೆಳತಿ ಸಾಬಾ ಆಜಾದ್ ಹಾಗೂ ಮಾಜಿ ಪತ್ನಿ ಸುಸೇನ್ ಖಾನ್ ಕಮೆಂಟ್ ಮೂಲಕ ಶುಭ ಹಾರೈಸಿದ್ದಾರೆ. ಹಲವಾರು ಸೆಲೆಬ್ರಿಟಿಗಳು ವಿಶ್ ಮಾಡಿದ್ದಾರೆ. ಇತ್ತೀಚೆಗೆ, ಹೃತಿಕ್ ಮತ್ತು ಸಬಾ ಶೀಘ್ರದಲ್ಲೇ ತಮ್ಮ ಈ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಪ್ಲಾನ್ ಮಾಡುತ್ತಿದ್ದಾರೆ ಎಂಬ ಗಾಸಿಪ್‌ಗಳು ಹರಿದಾಡುತ್ತಿದ್ದವು. ಅಂದರೆ ಸದ್ಯವೇ ಅವರು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ತಾವಿಬ್ಬರೂ ಒಳ್ಳೆಯ ಸಂಬಂಧದಲ್ಲಿದ್ದು, ಮದುವೆಯಾಗುವ ಆತುರದಲ್ಲಿಲ್ಲ ಎಂಬ ಮಾಹಿತಿಯನ್ನು ಈ ಜೋಡಿ ಹಂಚಿಕೊಂಡಿತ್ತು.
ಇದನ್ನೂ ಓದಿ | Hrithik Roshan | ಹೃತಿಕ್ ರೋಷನ್ ಮತ್ತು ಸಬಾಗೆ ಮದುವೆಗೇನು ಅರ್ಜೆಂಟ್ ಇಲ್ವಂತೆ!