Site icon Vistara News

Kantara Movie | ʻಕಾಂತಾರʼ ಪ್ರಭಾವದಿಂದ ದೈವದ ದರ್ಶನ ಸೇವೆಯನ್ನು ‌ಕಣ್ತುಂಬಿಕೊಂಡ ನೂರಾರು ವಿದ್ಯಾರ್ಥಿಗಳು

Kantara Movie

ಮಂಗಳೂರು : ‘ಕಾಂತಾರ’ ಸಿನಿಮಾ (Kantara Movie) ಪ್ರಭಾವದಿಂದ ಹೊರವಲಯದ ಸುರತ್ಕಲ್‌ನಲ್ಲಿ ಎನ್‌ಐಟಿಕೆ ವಿದ್ಯಾರ್ಥಿಗಳು ಕೋಲ ವೀಕ್ಷಣೆ ಮಾಡಿದ್ದಾರೆ. ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಮಹೋತ್ಸವದ ಅಂಗವಾಗಿ ನೇಮ ನಡೆದಿದೆ. ನೇಮದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದು ಕೋಲ ವೀಕ್ಷಿಸಿದ್ದಾರೆ.

ದೇವಸ್ಥಾನದಲ್ಲಿರುವ ದೈವಗಳ ದೇವರ ಭೇಟಿ ಕಾರ್ಯಕ್ರಮ ಜಾತ್ರೆ ಸಂದರ್ಭ ನಡೆಯುತ್ತದೆ. ಎನ್‌ಐಟಿಕೆ ತಾಂತ್ರಿಕ ವಿದ್ಯಾಲಯಕ್ಕೆ ದೇಶ, ವಿದೇಶದ ವಿದ್ಯಾರ್ಥಿಗಳು ಕಲಿಕೆಗಾಗಿ ಬರುತ್ತಾರೆ. ʻಕಾಂತಾರʼ ಸಿನಿಮಾ ಪ್ರಭಾವದಿಂದ ಎನ್‌ಐಟಿಕೆ ವಿದ್ಯಾರ್ಥಿಗಳು ಸಾಲುಗಟ್ಟಿ ಕ್ಷೇತ್ರದ ನೇಮಕ್ಕೆ ಆಗಮಿಸಿದ್ದರು.

ಇದನ್ನೂ ಓದಿ | Kantara Movie | ಕಿರುತೆರೆಯಲ್ಲಿ ಕಾಂತಾರ: ಡೇಟ್‌ ರಿವೀಲ್‌, ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಸಿನಿಮಾ ಅಬ್ಬರ

ನೇಮಕ್ಕೆ ಆಗಮಿಸಿ ವೀಕ್ಷಿಸಿ ಒಂದಿಷ್ಟು ಫೋಟೊ, ವಿಡಿಯೋಗಳನ್ನು ವಿದ್ಯಾರ್ಥಿಗಳು ಸೆರೆ ಹಿಡಿದಿದ್ದಾರೆ. ದೈವಗಳ ಹಾವ ಭಾವ ಕಂಡು ಭಕ್ತಿಯಿಂದ ನೇಮ ನೂರಾರು ವಿದ್ಯಾರ್ಥಿಗಳು ವೀಕ್ಷಿಸಿದ್ದಾರೆ. ಬೇರೆ ಭಾಗದ ವಿದ್ಯಾರ್ಥಿಗಳಿಗೆ ನೇಮದ ರೀತಿ ರಿವಾಜನ್ನು ಸ್ಥಳೀಯ ವಿದ್ಯಾರ್ಥಿಗಳು ವಿವರಿಸಿದ್ದಾರೆ.

ಇದನ್ನೂ ಓದಿ | Kantara movie | ವಿವಾದಿತ ಪಡುಬಿದ್ರಿ ದೈವಸ್ಥಾನದ ನೇಮೋತ್ಸವ ಮುಂದೂಡಿಕೆ, ದೈವಕ್ಕೆ ಬೆದರಿತೇ ಆಡಳಿತ ಮಂಡಳಿ?

Exit mobile version