ಬೆಂಗಳೂರು: ಶ್ರದ್ಧಾ ವಾಳ್ಕರ್‌ಳನ್ನು (Shraddha Walkar) ಆಕೆಯ ಮುಸ್ಲಿಂ ಪ್ರಿಯಕರ ಅಫ್ತಾಬ್ ತುಂಡು ತುಂಡಾಗಿ ಕತ್ತರಿಸಿ ಭಯಾನಕವಾಗಿ ಕೊಲೆ ಮಾಡಿದ್ದ ಪ್ರಕರಣ ಇಡೀ ದೇಶವೇ ಬೆಚ್ಚಿ ಬೀಳಿಸಿತ್ತು. ಇದೇ ವಿಚಾರವನ್ನು ಇಟ್ಟುಕೊಂಡು ಇದೀಗ ರಾಖಿ ಸಾವಂತ್ (Rakhi Sawant) ಪರೋಕ್ಷವಾಗಿ ಪತಿ ಆದಿಲ್ ಅಕ್ರಮ ಸಂಬಂಧದ ಕುರಿತು ಮಾಧ್ಯಮದವರ ಮುಂದೆ ಕಣ್ಣೀರಿಟ್ಟಿದ್ದಾರೆ. ಮುಂಬೈನಲ್ಲಿ ರಾಖಿ ಸಾವಂತ್ ಅವರು ಜಿಮ್ನಿಂದ ಹೊರಬರುವಾಗ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ್ದಾರೆ. ಪತಿ ಆದಿಲ್ ಅಕ್ರಮ ಸಂಬಂಧ ಇಟ್ಟುಕೊಂಡಿರುವುದಾಗಿ ಸುಳಿವು ನೀಡುವಾಗ ಅವರು, ನನ್ನ ಜೀವನ ಫ್ರಿಡ್ಜ್‌ನಲ್ಲಿ ಕೊನೆಯಾಗುವುದು ನನಗೆ ಇಷ್ಟವಿಲ್ಲ ಎಂದಿದ್ದಾರೆ!
ರಾಖಿ ಸಾವಂತ್ ಮೈಸೂರು ಮೂಲದ ಉದ್ಯಮಿ ಆದಿಲ್‌ನನ್ನು ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದರು. ಇದು ಭಾರಿ ಸುದ್ದಿಯಾಗಿತ್ತು. ರಾಖಿ ಸಾವಂತ್ ತಾಯಿ ಇತ್ತೀಚೆಗಷ್ಟೇ ತಾಯಿಯನ್ನು ಕಳೆದುಕೊಂಡಿದ್ದರು. ಆ ನೋವು ಇನ್ನೂ ಹಸಿಯಾಗಿರುವಾಗಲೇ ಅವರಿಗೆ ದಾಂಪತ್ಯ ಮುರಿದು ಬೀಳುವ ಭಯ ಕಾಡುತ್ತಿದೆ. ಹಾಗಾಗಿ ಅವರ ಮಧ್ಯ ರಸ್ತೆಯಲ್ಲಿ ನಿಂತು ಕಣ್ಣೀರು ಹಾಕಿದ್ದಾರೆ. ರಾಖಿ ಅವರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಮಾಧ್ಯಮಗಳ ಮುಂದೆ ಏಕೆ ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ʻʻನನಗೆ ತಿಳಿದಿದೆ. ವೈಯಕ್ತಿಕ ವಿಚಾರಗಳನ್ನು ಮನೆಯ ಹೊರಗಡೆ ತರಬಾರದು ಎಂದು. ಆದರೆ ನನ್ನ ಜೀವನ ಫ್ರಿಡ್ಜ್‌ನಲ್ಲಿ ಕೊನೆಯಾಗುವುದು ಇಷ್ಟವಿಲ್ಲ. ಆದ್ದರಿಂದ ನಾನು ನಿಮ್ಮ ಮುಂದೆ ಹೇಳಿಕೊಳ್ಳುತ್ತಿದ್ದೇನೆʼʼಎಂದು ಪರೋಕ್ಷವಾಗಿ ಶ್ರದ್ಧಾ ವಾಳ್ಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ್ದಾರೆ.
ಇದನ್ನೂ ಓದಿ: Rakhi Sawant Mother Dies | ನಟಿ ರಾಖಿ ಸಾವಂತ್ ತಾಯಿ ಜಯಾ ಭೇದಾ ಇನ್ನಿಲ್ಲ
ಇದನ್ನೂ ಓದಿ: Rakhi Sawant: ತಾಯಿಯ ಅಂತಿಮ ವಿಧಿ ವಿಧಾನ ಪೂರೈಸಿದ ರಾಖಿ ಸಾವಂತ್ ದಂಪತಿ: ವಿಡಿಯೊ ವೈರಲ್
ʻʻನಾನು ವಿವಾಹಿತ ಮಹಿಳೆಯಾಗಿ ನನ್ನ ಹಕ್ಕುಗಳಿಗಾಗಿ ಹೋರಾಡುತ್ತೇನೆ. ಇನ್ನೊಬ್ಬ ಮಹಿಳೆಗೆ ಆದಿಲ್ ಬೆಂಬಲವಿದೆ. ನಮ್ಮ ದಾಂಪತ್ಯ ಅಪಾಯದಲ್ಲಿದೆ. ನನಗೆ ಏನೂ ಅರ್ಥ ಆಗುತ್ತಿಲ್ಲ. ಈಗ ನಾನು ಏನನ್ನೂ ಹೇಳುವಂತಿಲ್ಲ. ಕಾಲ ಬಂದಾಗ ಎಲ್ಲವನ್ನೂ ವಿವರಿಸುತ್ತೇನೆ. ನಾನು ಯಾರಿಗೆ ತೊಂದರೆ ಕೊಟ್ಟಿದ್ದೇನೆ ಅಂತ ದೇವರಲ್ಲಿ ಪ್ರಶ್ನಿಸುತ್ತೇನೆ. ನನ್ನನ್ನು ಆದಿಲ್ ಉಪಯೋಗಿಸಿಕೊಂಡ. ಅವನಿಗೆ ಪ್ರಚಾರ ಬೇಕಿತ್ತು. ಆದಿಲ್ನ ಸಂದರ್ಶನ ಮಾಡಬೇಡಿ. ಅವನು ಸುಳ್ಳು ಹೇಳುತ್ತಾನೆ. ಕುರಾನ್ ಮೇಲೆ ಪ್ರಮಾಣ ಮಾಡಿ ಹೇಳಿದ್ದ ಆ ಹುಡುಗಿಯನ್ನು ಬ್ಲಾಕ್ ಮಾಡುತ್ತೇನೆ ಎಂದು. ಆದರೆ ಅವನು ಬ್ಲಾಕ್ ಮಾಡಲಿಲ್ಲ. ಈಗ ಆ ಹುಡುಗಿಯೇ ಅವನಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ. ಅವಳ ಬಳಿ ಅವನ ಕುರಿತಾದ ʼಕೆಟ್ಟ ಸಾಕ್ಷಿಗಳುʼ ಇವೆ’ ಎಂದು ರಾಖಿ ಸಾವಂತ್ ಹೇಳಿದ್ದಾರೆ.
‘ನಾನು ಬಿಗ್‌ಬಾಸ್ ಮರಾಠಿಯಲ್ಲಿ ಇದ್ದಾಗ ಆದಿಲ್ ಸಾಕಷ್ಟು ಲಾಭ ಪಡೆದುಕೊಂಡಿದ್ದ. ನಮ್ಮ ಮದುವೆಯನ್ನು ಸುಮಾರು ಎಂಟು ತಿಂಗಳ ಕಾಲ ಆದಿಲ್ ಗುಪ್ತವಾಗಿಟ್ಟಿದ್ದಿದ್ದು ಅಫೇರ್ಸ್ ಮುಂದುವರಿಸುವ ಕಾರಣಕ್ಕಾಗಿ ಎಂದು ಈಗ ನನಗೆ ಗೊತ್ತಾಗುತ್ತಿದೆ” ಎಂದಿದ್ದಾರೆ ರಾಖಿ.