Site icon Vistara News

Samantha Ruth Prabhu | ನಾನಿನ್ನೂ ಕಳೆಗುಂದಿಲ್ಲ; ತೋಳ್ಬಲ ತೋರಿಸಿ ಫೋಟೋ ಶೇರ್​ ಮಾಡಿದ ಸಮಂತಾ

Samantha Ruth Prabhu

ಹೈದರಾಬಾದ್​: ಬಹುಭಾಷಾ ನಟಿ ಸಮಂತಾ ರುತ್​​ ಪ್ರಭು (Samantha Ruth Prabhu) ಅಪರೂಪದ ಮಯೋಸೈಟಿಸ್​ ಕಾಯಿಲೆಗೆ ಒಳಗಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅಪಾರ ಆತ್ಮವಿಶ್ವಾಸ ಹೊಂದಿರುವ ಅವರೀಗ ಬಹುನಿರೀಕ್ಷಿತ ಸಿನಿಮಾ ಶಾಕುಂತಲಮ್​ನ ಬಿಡುಗಡೆಯ ಬ್ಯುಸಿ. ಇತ್ತೀಚೆಗೆ ತಮ್ಮ ಸಿನಿಮಾ ಬಿಡುಗಡೆ ಕುರಿತು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿಯಲ್ಲೂ ಲವಲವಿಕೆಯಿಂದ ಪಾಲ್ಗೊಂಡಿದ್ದರು. ಆದರೆ, ಅವರು ಆರೋಗ್ಯ ಸಮಸ್ಯೆಗೆ ಸಿಲುಕಿದ ತಕ್ಷಣವೇ ನಾನಾ ಬಗೆಯಲ್ಲಿ ಪ್ರತಿಕ್ರಿಯೆ ನೀಡಲು ಶುರು ಮಾಡಿದ್ದ ಟ್ರೋಲಿಗರು, ಪತ್ರಿಕಾಗೋಷ್ಠಿಯ ಚಿತ್ರವನ್ನು ಉಲ್ಲೇಖಿಸಿ ಅವರ ಸೌಂದರ್ಯವನ್ನು ಅಳೆಯಲು ಆರಂಭಿಸಿದ್ದಾರೆ. ಮಯೋಸೈಟಿಸ್​ ಬಂದ ಬಳಿಕ ಸಮಂತಾ ಕಳೆಗುಂದಿದ್ದಾರೆ. ಅವರ ತೋಳಿನ ಮಾಂಸಖಂಡಗಳು ಕರಗಿಹೋಗಿವೆ ಎಂದೆಲ್ಲ ಹೇಳುತ್ತಿದ್ದಾರೆ. ಇದೀಗ ಅವರೆಲ್ಲರಿಗೂ ಉತ್ತರವೆಂಬಂತೆ ಸಮಂತಾ ತಾವು ಜಿಮ್​ನಲ್ಲಿ ತೊಡಗಿಸಿಕೊಂಡಿರುವ ಫೋಟೋ ಶೇರ್ ಮಾಡಿದ್ದಾರೆ.

ತಮ್ಮ ಟ್ರೇನರ್​ ಜುನೈದ್​ ಖಾನ್​ ಮಾರ್ಗದರ್ಶನದಲ್ಲಿ ಜಿಮ್​ ತರಬೇತಿ ಮುಗಿಸಿದ ಬಳಿಕ ತೋಳಿನ ಚಿತ್ರವನ್ನು ತೆಗೆದುಕೊಂಡು ಅದನ್ನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ನಾನು ಅಷ್ಟೊಂದು ದುರ್ಬಲಳಲ್ಲ ಎಂಬುದಾಗಿ ಬರೆದುಕೊಂಡಿದ್ದಾರೆ. ಈ ಮೂಲಕ ಸಮಂತಾ ಮುಖದಲ್ಲಿ ಕಳೆಯಿಲ್ಲ, ತೋಳಿನಲ್ಲಿ ಮಾಂಸವಿಲ್ಲ ಎಂದು ಹೇಳಿದವರಿಗೆ ಎದಿರೇಟು ಕೊಟ್ಟಿದ್ದಾರೆ.

ಮಯೋಸೈಟಿಸ್​ ಬಂದವರು ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಮಾಂಸಖಂಡಗಳು ಬಲದ ಕಳೆದುಕೊಳ್ಳುವುದು, ಮುಖ ಕಳೆಗುಂದುವುದು ಈ ರೋಗದ ಲಕ್ಷಣಗಳಾಗಿವೆ. ಹೀಗಾಗಿ ಸಮಂತಾ ಅವರ ಮುಖವೂ ವಿಲಕ್ಷಣವಾಗಿದೆ ಎಂದು ಟ್ರೋಲಿಗರು ಬರೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ | Samantha | ಹ್ಯಾಶ್‌ ಮತ್ತು ಸಶಾ: ತಮ್ಮ ಮುದ್ದು ನಾಯಿಗಳ ಜತೆ ಇರುವ ಫೋಟೊ ಹಂಚಿಕೊಂಡ ಸಮಂತಾ!

Exit mobile version