Site icon Vistara News

Darshan Raval: ಐಎಎಸ್ ಆಗಬೇಕೆಂಬುದು ಅಪ್ಪನ ಕನಸು, ಸಂಗೀತ ಬಿಟ್ಟರೆ ನನಗೇನು ತಿಳಿದಿರಲಿಲ್ಲ: ದರ್ಶನ್ ರಾವಲ್

I Knew Nothing Other Than Music Darshan Raval

ಬೆಂಗಳೂರು: ಚೋಗಢಾ (Chogada), ಪಿಯಾ ರೇ ( Piya Re ) ಮತ್ತು ತೇರಿ ಆಂಖೋನ್ ಮೇ ( Teri Aankhon Mein)ಯಂತಹ ಹಿಟ್‌ ಹಾಡುಗಳನ್ನು ಹಾಡಿದ ಗಾಯಕ ದರ್ಶನ್ ರಾವಲ್ (Darshan Raval) ಯುವ ಪ್ರೇಕ್ಷಕರಲ್ಲಿ ಭಾರಿ ಜನಪ್ರಿಯತೆಯನ್ನು ಗಳಿಸಿದ್ದಾರೆ. ದರ್ಶನ್ ಅವರು ಗಾಯಕನಾಗಲು ನಿರ್ಧರಿಸಿದ್ದು 10ನೇ ತರಗತಿಯಲ್ಲಿದ್ದಾಗ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಮಾಧ್ಯಮದವೊಂದರ ವಿಶೇಷ ಸಂವಾದದಲ್ಲಿ, ದರ್ಶನ್ ಅವರು ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಈ ವೇಳೆ ದರ್ಶನ್ ಮಾತನಾಡಿ ʻʻಭಾರತದಲ್ಲಿ ಅನೇಕರು ಸಂಗೀತವನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಬಯಸುವುದಿಲ್ಲ ಆದರೆ ಹವ್ಯಾಸವಾಗಿ ಮಾತ್ರಬಯಸುತ್ತಾರೆʼʼಎಂದು ಹೇಳಿದರು.

ʻʻನಮ್ಮಲ್ಲಿ ಅನೇಕರು ಸಂಗೀತವನ್ನು ವೃತ್ತಿಯಾಗಿ, ಅತ್ಯಂತ ಗಂಭೀರವಾಗಿ ಪರಿಗಣಿಸುವುದಿಲ್ಲ. ಸಂಗೀತಗಾರರಕ್ಕಿಂತ ಎಂಜಿನಿಯರ್ ಅಥವಾ ಡಾಕ್ಟರ್ ಆಗಲು ಬಯಸುತ್ತಾರೆ. ಒಂದು ವೇಳೆ ಈ ರೀತಿಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೆ ಏನಾದರೂ ಉದ್ಯೋಗ ಸಿಗುತ್ತದೆ ಎಂಬ ಕಾರಣಕ್ಕೆ. ನಾನು ಕೂಡ ಇದೇ ಸಂದರ್ಭವನ್ನು ಎದುರಿಸಿದ್ದೆ. ನನ್ನ ಫ್ಯಾಮಿಲಿ ಕೂಡ ಇದೇ ರೀತಿ ನನಗೆ ಸಲಹೆ ನೀಡಿತ್ತು. ಆದರೆ ನನಗೆ ಸಂಗೀತ ಬಿಟ್ಟರೆ ಬೇರೆ ಏನೂ ತಿಳಿದಿರಲಿಲ್ಲ. 10ನೇ ತರಗತಿಯಲ್ಲಿದ್ದಾಗಲೇ ಸಂಗೀತವನ್ನೇ ನಾನು ಆಯ್ಕೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದೆʼʼಎಂದರು.

ಇದನ್ನೂ ಓದಿ: Mahesh Babu: ಮಹೇಶ್ ಬಾಬು ಸಿನಿಮಾಗೆ ಬಾಲಿವುಡ್‌ ನಟಿ ರೇಖಾ ಎಂಟ್ರಿ

ʻʻತನ್ನ ತಂದೆ ನಾನು ಐಎಎಸ್ ಅಧಿಕಾರಿಯಾಗಬೇಕೆಂದು ಬಯಸಿದ್ದರು. ಸಂಗೀತವನ್ನು ವೃತ್ತಿಯಾಗಿ ತೆಗೆದುಕೊಳ್ಳುವ ಮೊದಲು, ನಾನು ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದೆ. ಅಲ್ಲಿಂದ ಹೊರಹಾಕಲ್ಪಟ್ಟಾಗ, ನಾನು ಸಂಗೀತದಲ್ಲಿ ಮುಂದುವರಿಯಬೇಕೆಂದು ನಿರ್ಧರಿಸಿದೆ. ಈ ಬಗ್ಗೆ ನನ್ನ ತಂದೆ ನನ್ನ ಮೇಲೆ ಆರೇಳು ತಿಂಗಳುಗಳ ಕಾಲ ಅಸಮಾಧಾನಗೊಂಡಿದ್ದರು. ಆದರೆ ಇವತ್ತು ನನ್ನ ತಂದಗೆ ನನ್ನ ಮೇಲೆ ಹೆಮ್ಮೆ ಇದೆ. ಕೆಲವೊಮ್ಮೆ ಅವರು ಭಾವುಕರಾದಾಗ ಅವರು ನನಗೆ ಹೇಳುತ್ತಾರೆ, ‘ನೀನು ಮಾಡಿದ್ದು ಸರಿಯಿದೆ’ ಎಂದು ಹೇಳಿದರು.

“ತಮ್ಮ ಕುಟುಂಬಗಳು ಅಥವಾ ಪೋಷಕರು ತಮ್ಮಿಷ್ಟದ ವೃತ್ತಿ ಆಯ್ಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಬಹಳಷ್ಟು ಜನರು ಸಾಮಾಜಿಕ ಮಾಧ್ಯಮದಲ್ಲಿ ಬರೆಯುವುದನ್ನು ನಾನು ನೋಡುತ್ತೇನೆ. ಪೋಷಕರು ತಮ್ಮ ಮಕ್ಕಳಿಗೆ ಯಾವಾಗಲೂ ಸೇಫ್‌ ಆಗಿರಲಿ ಎನ್ನುವ ದೃಷ್ಟಿಯಿಂದ ಈ ರೀತಿ ಒತ್ತಡ ಹೇರುತ್ತಾರೆ. ಆದರೆ ನೀವು ಪ್ರಪಂಚದ ಮುಂದೆ, ನಿಮ್ಮಿಷ್ಟದ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಪೋಷಕರಲ್ಲಿ ವಿಶ್ವಾಸವನ್ನು ಮೂಡಿಸಬೇಕು, ”ಎಂದು ಅವರು ಹೇಳಿದರು.

Exit mobile version