Site icon Vistara News

Actor Yash: ನಾನ್ ಯಾವತ್ತೂ ಅನೌನ್ಸ್‌ಮೆಂಟ್‌ ಮಾಡಿಲ್ಲ, ತಾಳ್ಮೆ ಇರಲಿ ಎಂದ ಯಶ್‌!

Rocking Star Yash!

ಬೆಂಗಳೂರು: ದೀಪಾವಳಿಗೆ ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ಫ್ಯಾನ್ಸ್‌ ಯಶ್‌ ಅವರ ಮುಂದಿನ ಸಿನಿಮಾ ಅಪ್‌ಡೇಟ್‌ಗಾಗಿ ತುದಿಗಾಲಲ್ಲಿ ಕಾಯುತ್ತಿದ್ದರು. ಕೊನೆಗೂ ಯಶ್‌ ಅವರು ಸಿನಿಮಾ ಬಗ್ಗೆ ಏನನ್ನೂ ಅನೌನ್ಸ್‌ ಮಾಡದೇ ಇದ್ದಾಗ ನಿರಾಶೆ ವ್ಯಕ್ತಪಡಿಸಿದ್ದರು. ಆದರೀಗ ಯಶ್‌ ಬಿಜಿಎಸ್ ಕಾರ್ಯಕ್ರಮದಲ್ಲಿ ನಾನ್ ಯಾವತ್ತೂ ಸಿನಿಮಾ ಬಗ್ಗೆ ಅನೌನ್ಸ್ ಮೆಂಟ್ ಇದೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ ಎಂದು ಮುಂದಿನ ಸಿನಿಮಾ ಬಗ್ಗೆ ಸುಳಿವು ಕೊಟ್ಟಿದ್ದಾರೆ.

ವೈರಲ್‌ ಆಗಿರುವ ವಿಡಿಯೊದಲ್ಲಿ ಯಶ್‌ ಅವರು ʻʻನಾನು ಯಾವತ್ತೂ ಸಿನಿಮಾ ಬಗ್ಗೆ ಅನೌನ್ಸ್‌ಮೆಂಟ್‌ ಎಂದು ಹೇಳಿಲ್ಲ. ತುಂಬ ಜನ ಅವರ ಖುಷಿಗೆ ಪ್ರತಿ ಹಬ್ಬ ಬಂದಾಗ, ಈ ತಿಂಗಳು ಅಪ್‌ಡೇಟ್‌, ಈ ದಿನ ಅಪಡೇಟ್‌ ಎಂದು ಹೇಳಿ ಹೇಳಿ ಮಿಸ್‌ಗೈಡ್‌ ಆಗ್ತಿದೆ. ಅಡುಗೆ ಕರೆಕ್ಟ್‌ ಆದಮೇಲೆ ಬಡಿಸಬೇಕು. ಸ್ವಲ್ಪ ತಾಳ್ಮೆ ಇರಲಿ. ನೀವು ಇಷ್ಟ ಪಡುವ ಕೆಲಸ ಆಗುತ್ತೆ. ನಾನು ಸುಮ್ಮನೆ ರಿಲ್ಯಾಕ್ಸ್ ಆಗಿ ಕುಳಿತಿಲ್ಲ, ರೆಡಿಯಾಗ್ತೀದ್ದೇನೆ. ಆದಷ್ಟು ಬೇಗ ನಿಮಗೆ ಗುಡ್ ನ್ಯೂಸ್ ಕೊಡ್ತೀನಿʼʼ ಎಂದು ಹೇಳಿದರು.

ಇದನ್ನೂ ಓದಿ; Actor Yash: ಹಾಲಿವುಡ್‌ ಸ್ಟಂಟ್‌ ಡೈರೆಕ್ಟರ್‌ ಜತೆ ರಾಕಿಂಗ್‌ ಸ್ಟಾರ್‌ ಯಶ್‌!

ಮುಂದಿನ ಚಿತ್ರದ ಘೋಷಣೆಗಾಗಿ ಅಭಿಮಾನಿಗಳು, ಇಡೀ ಭಾರತೀಯ ಚಿತ್ರರಂಗ ಕಾಯುತ್ತಿದೆ. ಯಾಕೆಂದರೆ ಬಾಕ್ಸ್‌ ಆಫೀಸ್‌ ಧೂಳೀಪಟ ಮಾಡಿದ್ದ ʼಕೆಜಿಎಫ್‌ 2ʼ ಚಿತ್ರ ಬಿಡುಗಡೆಯಾಗಿ ಸುಮಾರು ಒಂದೂವರೆ ವರ್ಷವಾದರೂ ಯಶ್‌ ತಮ್ಮ ಮುಂದಿನ ಸಿನಿಮಾದ ಬಗ್ಗೆ ಸಣ್ಣ ಸುಳಿವನ್ನೂ ಬಿಟ್ಟು ಕೊಟ್ಟಿಲ್ಲ. ಈ ಮಧ್ಯೆ ಅವರು ಬಾಲಿವುಡ್‌ ನಿರ್ದೇಶಕ ನಿತೇಶ್‌ ತಿವಾರಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ʼರಾಮಾಯಣʼ (Ramayana) ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಯಶ್‌ ದಾಖಲೆಯ ಬರೋಬ್ಬರಿ 150 ಕೋಟಿ ರೂ. ಸಂಭಾವನೆ ಪಡಯುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.ಯಶ್‌ ʼರಾಮಾಯಣʼ ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಲು ನಿರ್ಧರಿಸಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ ಎನ್ನುತ್ತದೆ ಒಂದು ಮೂಲ. ಈ ಮಧ್ಯೆ ʼಕೆಜಿಎಫ್‌ʼ ಚಿತ್ರದ 3ನೇ ಭಾಗ ಆರಂಭವಾಗಲಿದೆ ಎನ್ನುವ ಸುದ್ದಿಯೂ ತೇಲಿ ಬಂದಿದೆ. ಯಶ್‌ ಈ ಎರಡೂ ಚಿತ್ರಗಳ ಭಾಗವಾಗಲಿದ್ದು, ಅದಕ್ಕಾಗಿ ಡೇಟ್‌ ಹೊಂದಿಸಲಿದ್ದಾರಂತೆ.

ರಾವಣ ಪಾತ್ರಕ್ಕಾಗಿ ಯಶ್‌ 100ರಿಂದ 150 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. 100 ಕೋಟಿ ರೂ. ಸಂಭಾವನೆ ಪಡೆಯುವುದು ಪಕ್ಕಾ. ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ದಿನಗಳು, ಪಾತ್ರ ನೋಡಿಕೊಂಡು ಸಂಭಾವನೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. 2025ರಲ್ಲಿ ʼಕೆಜಿಎಫ್‌ 3′ ತೆರೆಗೆ ಬರಲಿದ್ದು, ಮುಂದಿನ ವರ್ಷದ ಕೊನೆಗೆ ಶೂಟಿಂಗ್‌ ಆರಂಭವಾಗುವ ಸಾಧ್ಯತೆ ಇದೆ ಎನ್ನುವ ಮಾತುಗಳೂ ಕೇಳಿ ಬಂದಿವೆ.

Exit mobile version