ಬೆಂಗಳೂರು: ರೈತರ ದಿನದ ಅಂಗವಾಗಿ ‘ಕಾಟೇರ’ ಸಿನಿಮಾದ ಈವೆಂಟ್ (ಡಿ.23) ಮಂಡ್ಯದಲ್ಲಿ ಅದ್ಧೂರಿಯಾಗಿ ನೆರವೇರಿದೆ . ಕಾಟೇರ ಸಿನಿಮಾದಲ್ಲಿ ನಟಿಸಿದ ಕಲಾವಿದರ ಜತೆಗೆ ಸುಮಲತಾ ಅಂಬರೀಶ್, ಶ್ರುತಿ, ಪದ್ಮಾವಾಸಂತಿ, ಅವಿನಾಶ್ ಸೇರಿದಂತೆ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು ಭಾಗವಹಿಸಿದ್ದರು. ವೇದಿಕೆಯಲ್ಲಿ ದರ್ಶನ್ ಅವರನ್ನು ನೋಡುತ್ತಿದ್ದಂತೆ ಫ್ಯಾನ್ಸ್ ಶಿಳ್ಳೆ ಹೊಡೆದು, ಚಪ್ಪಾಳೆ ಮೂಲಕ ಸ್ವಾಗತಿಸಿದ್ದಾರೆ.
ಅಭಿಮಾನಿಗಳ ಕುರಿತು ದರ್ಶನ್ ವೇದಿಕೆಯಲ್ಲಿ ಮಾತನಾಡಿದ್ದು ಹೀಗೆ. ʻʻಕಾಟೇರ ಸಿನಿಮಾದಲ್ಲಿ ಪ್ರತಿಯೊಬ್ಬ ಕಲಾವಿದನಿಂದ ಹಿಡಿದು ತಂತ್ರಜ್ಞ ಪ್ರತಿಯೊಬ್ಬರ ಶ್ರಮ ಇಲ್ಲಿದೆ. ನಮ್ಮ ಹಾಡನ್ನು ರಿಲೀಸ್ ಮಾಡಿಕೊಟ್ಟ ಸುಮಲತಾ ಅವರಿಗೆ ಧನ್ಯವಾದ. ಈ ಸಿನಿಮಾ ಯಾವುದೇ ಆಡಂಬರದ ಸಿನಿಮಾ ಅಲ್ಲ. ನಾನು ಈಗಲೇ ಹೇಳುತ್ತಿದ್ದೇನೆ. ನಾನು ಅವತ್ತು ಹೇಳೋದು ಇದೆ. ಇವತ್ತು ಹೇಳೋದು ಇದೆ. ಈ ಹಸರು ಶಾಲು ಎಷ್ಟು ಪವರ್‌ಫುಲ್ ಇದೆ ಎಂಬುದನ್ನು ತೋರಿಸಲು ಬಂದಿದ್ದೇನೆ. ಇವತ್ತು ರೈತರ ದಿನಾಚರಣೆ. ರೈತರಿಗೆ ಅಯ್ಯೋ ಪಾಪ ಬೇಡ. ಅವರಿಗೆ ಸಿಂಪಥಿ ಬೇಡ. ನ್ಯಾಯವಾದ ಬೆಲೆ ಕೊಟ್ಟುಬಿಡಿ ಸಾಕು. ಒಬ್ಬ ರೈತ ರೈತ ಎಷ್ಟು ಮುಖ್ಯ ಆಗ್ತಾನೆ ಅಂದರೆ, ಇವತ್ತು ಯಾರೆಲ್ಲ ಜಾಗ ಹಿಡಿದುಕೊಂಡಿದ್ದೀರ. ಅದಕ್ಕೆ ಇವತ್ತು ಕೋಟಿಗಟ್ಟಲೆ ಬೆಲೆ ಬಂದಿದೆ. ದಯವಿಟ್ಟು ಮಾರಿಕೊಳ್ಳುವುದಕ್ಕೆ ಹೋಗಬೇಡಿ. ಇವತ್ತು ಜಾಗಗಳನ್ನು ಮಾರಿಕೊಂಡರೆ, ನಾಳೆ ಜಾಗಗಳು ಸಿಗೋದಿಲ್ಲ ಅಣ್ಣ. ಅಕ್ಕಿ ಬೆಳೆಯೋಕೆ ಅಲ್ಲ. ಗೆಡ್ಡೆ ಗೆಣಸು ಬೆಳೆಯುವುದಕ್ಕೂ ಜಾಗ ಇರೋದಿಲ್ಲʼʼಎಂದರು.
ಕನ್ನಡ ಸಿನಿಮಾವನ್ನೇ ಮಾಡುವೆ!
ʻʻನನಗೂ 47 ವರ್ಷ ಆಯ್ತು. 56 ಸಿನಿಮಾ ಮಾಡಾಯ್ತು. ನಮಗೂ ವಯಸ್ಸಾಗ್ತಿದೆ. ಆದರೆ ಇವತ್ತು ಚಿತ್ರರಂಗದ ತುಂಬ ದೊಡ್ಡ ಕಲಾವಿದರು, ನಮ್ಮ ಕನ್ನಡ ಚಿತ್ರರಂಗದ ಹೀರೋಗಳು ಬಂದು ಬಂದು ಹಾರೈಸಿದ್ದಕ್ಕೆ ಚಿರಋಣಿ. ಅಷ್ಟು ಅಲ್ಲದೇ ಮಂಡ್ಯ ಜನತೆಗೆ ಒಂದು ಹೇಳ್ತೀನಿ. ರಾಜಕೀಯವಾಗಿ ಅಲ್ಲ. ಚಿತ್ರರಂಗದಲ್ಲಿ ಅಲ್ಲ. ಯಾರೇ ಏನೇ ಹೇಳಿದರೂ ಕೂಡ ನಾವು ಕೋಪ ಮಾಡಿಕೊಳ್ಳಲ್ಲ. ಬೇಜಾರು ಮಾಡಿಕೊಳ್ಳಲ್ಲ. ನೊಂದುಕೊಳ್ಳಲ್ಲ. ಸಿನಿಮಾ ಅಷ್ಟೇ ಮಾಡುತ್ತೇವೆ. ಅಪ್ಪಟ ಕನ್ನಡ ಸಿನಿಮಾ ಅಷ್ಟೇನೆ ನಾನು ಮಾಡೋದು. ಸಾಕು ಚೆನ್ನಾಗಿದ್ದೀನಿ. ತುಂಬಾ ಹೆಮ್ಮೆಯಿಂದ ಹೇಳುತ್ತೇನೆ. ಒಬ್ಬ ಲೂನಾದಲ್ಲಿ ಓಡಾಡುತ್ತಿರೋ ನನ್ನ ಲ್ಯಾಂಬೊರ್ಗಿನಿವರೆಗೂ ಕೂರಿಸಿದ್ದಾರೆ.ಇದಕ್ಕಿಂತ ಇನ್ನೇನು ಬೇಕುʼʼಎಂದರು.
ʻʻನಾನು ಮುಂದೆಯೂ ಪ್ರಯತ್ನ ಪಡುತ್ತೇನೆ. ನನ್ನ ಸಿನಿಮಾಗಳಲ್ಲಿ ಕನ್ನಡಿಗರಿಗೆ ಅವಕಾಶ ಕೊಡ್ತೀನಿ. ಈಗ ಮಾಲಾಶ್ರೀ ಪುತ್ರಿಯನ್ನು ಕರೆತಂದಿದ್ದೀವಿ. ಕನ್ನಡ ಸಿನಿಮಾ ನಟರಿಗೆ ಬೆಂಬಲಿಸಿ, ಇಲ್ಲಿಗೆ ಹೊಸ ಹೀರೋಗಳು ಇದ್ದಾರೆ, ಅವರನ್ನು ಬೆಂಬಲಿಸಿʼʼ ಎಂದರು.
ಇದನ್ನೂ ಓದಿ: Kaatera Movie: ʻಕಾಟೇರʼ ಸಿನಿಮಾ ಹೈದರಾಬಾದ್-ಕರ್ನಾಟಕ ವಿತರಣೆ ಹಕ್ಕು ಯಾರ ಪಾಲು?
‘ಕಾಟೇರ’ (Kaatera)ದ ಡಿಸೆಂಬರ್ 29ರಂದು ಬಿಡುಗಡೆಯಾಗಲಿದೆ. ದರ್ಶನ್ ಅವರಿಗೆ ಈ ಹಿಂದೆ ತರುಣ್ ಸುಧೀರ್ ರಾಬರ್ಟ್ ಸಿನಿಮಾ ನಿರ್ದೇಶಿಸಿದ್ದರು. ಇದೀಗ ಅವರು ಮತ್ತೊಮ್ಮೆ ದರ್ಶನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ದರ್ಶನ್ಗಾಗಿ ಉತ್ತಮ ಕಥೆಯೊಂದಿಗೆ ತರುಣ್ ಸುಧೀರ್ ಬಂದಿದ್ದಾರೆ ಎಂಬುದು ಸಿನಿ ಕ್ಷೇತ್ರ ಮಾತು.ದರ್ಶನ್ಗೆ ಜೋಡಿಯಾಗಿ ಹಿರಿಯ ನಟಿ ಮಾಲಾಶ್ರೀ ಮಗಳು ಆರಾಧನಾ ಕಾಣಿಸಿಕೊಂಡಿದ್ದಾರೆ. ಹಿರಿಯ ನಟಿ ಶ್ರುತಿ ಕುಮಾರ್ ಗೋವಿಂದ್, ವೈಜನಾಥ್ ಬಿರಾದಾರ, ಜಗಪತಿ ಬಾಬು ಸೇರಿದಂತೆ ಇನ್ನೂ ಅನೇಕರು ಮಿಂಚಲಿದ್ದಾರೆ. ಕಾಟೇರ ಸಿನಿಮಾದ 2 ಹಾಡುಗಳು ಕೂಡ ಈಗಾಗಲೇ ರಿಲೀಸ್ ಆಗಿದ್ದು ಸೂಪರ್ ಹಿಟ್ ಆಗಿದೆ. ಪಸಂದಾಗವ್ನೆ ಹಾಗೂ ಯಾವ ಜನುಮದ ಗೆಳತಿ ಹಾಡುಗಳು ಜನಮನ ಗೆದ್ದಿವೆ.
ಇದನ್ನೂ ಓದಿ: Kaatera Movie: ಕಾಟೇರ ಚಿತ್ರಕ್ಕೆ ಎದುರಾಯ್ತು ‘ಸರ್ಪ ದೋಷ’! ಅರಣ್ಯಾಧಿಕಾರಿಗೆ ದೂರು
ವರ್ಷಾರಂಭದಲ್ಲಿ ʼಕ್ರಾಂತಿʼ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಚಾಲೆಂಜಿಂಗ್ ಸ್ಟಾರ್ ವರ್ಷಾಂತ್ಯದಲ್ಲಿ ʼಕಾಟೇರʼ ಮೂಲಕ ದರ್ಶನ ನೀಡುತ್ತಿದ್ದಾರೆ.ಇದೆಲ್ಲದರ ನಡುವೆ ಜೀ ಸಂಸ್ಥೆ ‘ಕಾಟೇರ’ ಚಿತ್ರದ ಡಿಜಿಟಲ್, ಸ್ಯಾಟಲೈಟ್ ರೈಟ್ಸ್ ಕೊಂಡುಕೊಂಡಿದೆ ಎನ್ನಲಾಗುತ್ತಿದೆ. 48 ದಿನಗಳ ಬಳಿಕ ಜೀ5ನಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ. ಫೆಬ್ರವರಿ 16ಕ್ಕೆ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ಒಟಿಟಿಗೆ ಬರಬಹುದು. ಯುಗಾದಿ ಹಬ್ಬಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಸಿನಿಮಾ ಪ್ರೀಮಿಯರ್ ಆಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.