ಬೆಂಗಳೂರು: ತೆಲುಗಿನ ಗೀತಾಂಜಲಿ ಚಿತ್ರ ಸೇರಿದಂತೆ ಅನೇಕ ಸುಪ್ರಸಿದ್ದ ಚಿತ್ರಗಳಲ್ಲಿ ನಟಿಸಿರುವ ಗಿರಿಜಾ ಶೆಟ್ಟರ್ ‘ಇಬ್ಬನಿ ತಬ್ಬಿದ ಇಳೆಯಲಿ’ (Ibbani Thabbida Ileyali) ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಗಿರಿಜಾ ಶೆಟ್ಟರ್ (Girija Shettar) ಅವರ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಅವರಿಗೆ ಸ್ವಾಗತ ಕೋರಿದೆ. ಈ ಚಿತ್ರದ ನಾಯಕ – ನಾಯಕಿಯಾಗಿ ವಿಹಾನ್ ಹಾಗೂ ಅಂಕಿತಾ ಅಮರ್ ಅಭಿನಯಿಸಿದ್ದಾರೆ.
ʻಕಾಲ್ ಕೆಜಿ ಪ್ರೀತಿʼ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ವಿಹಾನ್ ಪದಾರ್ಪಣೆ ಮಾಡಿದ್ದರು. ಯೋಗರಾಜ್ ಭಟ್ ನಿರ್ದೇಶನದ ʻಪಂಚತಂತ್ರʼ ಸಿನಿಮಾದ ಮೂಲಕ ಗಮನ ಸೆಳೆದಿದ್ದರು. ನಂತರ ಅವರಿಗೆ ಅವಕಾಶ ದೊರೆತಿರಲಿಲ್ಲ. ಈ ಹೊಸ ಚಿತ್ರದಲ್ಲಿ ಅವರು ಕಾಲೇಜ್ ವಿದ್ಯಾರ್ಥಿ, ಕ್ರಿಕೆಟ್ ಆಟಗಾರ, ಉದ್ಯಮಿಯಾಗಿ ಮಿಂಚಲಿದ್ದಾರೆ. ಈ ಮೂರು ಹಂತದ ಕಥಾ ಹಂದರವನ್ನು ಚಿತ್ರ ಹೊಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಪರಂವಃ ಸ್ಟುಡಿಯೋಸ್ ಲಾಂಛನದಲ್ಲಿ ಜಿ.ಎಸ್ ಗುಪ್ತ ಹಾಗೂ ರಕ್ಷಿತ್ ಶೆಟ್ಟಿ (Rakshit Shetty) ನಿರ್ಮಿಸಿದ್ದಾರೆ.
ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಅಂಕಿತಾ ಅಮರ್ ಬಾನದಾರಿಯಲ್ಲಿ ಸಿನಿಮಾಗೆ ನಾಯಕಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಇನ್ನೂ ನಡೆಯುತ್ತಿದ್ದು, ಅಷ್ಟರಲ್ಲಿಯೇ ಅವರಿಗೆ ಮತ್ತೊಂದು ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ.
ಇದನ್ನೂ ಓದಿ: ರಕ್ಷಿತ್ ಶೆಟ್ಟಿ ನಿರ್ಮಾಣದ ಹೊಸ ಸಿನಿಮಾದಲ್ಲಿ ನಮ್ಮನೆ ಯುವರಾಣಿ ಅಂಕಿತಾ ಅಮರ್
ನಿರ್ದೇಶಕ ಚಂದ್ರಜಿತ್ ಬೆಳ್ಳಿಯಪ್ಪ ರಕ್ಷಿತ್ ಶೆಟ್ಟಿ ಅವರ ಸೆವೆನ್ ಆಡ್ಸ್ ತಂಡದಲ್ಲಿ ಬರಹರಾಗಿ ಗುರುತಿಸಿಕೊಂಡಿದ್ದರು. ರಿಷಬ್ ಶೆಟ್ಟಿ ಅವರ ಕಥಾ ಸಂಗಮ ಚಿತ್ರಕ್ಕೆ ಇವರೇ ನಿರ್ದೇಶನ ಮಾಡಿದ್ದರು. ಅವರ ಹೊಸ ಚಿತ್ರಕ್ಕೆ ಶ್ರೀವಾತ್ಸವನ್ ಛಾಯಾಗ್ರಹಣ ಮಾಡಲಿದ್ದಾರೆ. ಗಗನ್ ಬದೇರಿಯಾ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಚಿತ್ರ ತಂಡವು ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲು ಪ್ಲಾನ್ ಮಾಡಿದ್ದು, 2023ರ ಬೇಸಿಗೆಯಲ್ಲಿ ಸಿನಿಮಾ ಬಿಡುಗಡೆ ಮಾಡುವ ಗುರಿ ಹೊಂದಿದೆ.