Site icon Vistara News

Actor Yash: ಯಶ್‌ ಸಿನಿಮಾ ಅಪ್​ಡೇಟ್ ಕೊಡದಿದ್ದರೆ ಸ್ಟ್ರೈಕ್! ರಾಧಿಕಾ ಪಂಡಿತ್‌ಗೆ ಫ್ಯಾನ್ಸ್‌ ಧಮ್ಕಿ

If Yash movie is not updated Fans asked go on strike

ಬೆಂಗಳೂರು: ಈ ಹಿಂದೆಯಷ್ಟೇ ರಾಮ್‌ಚರಣ್‌ ಅವರ ʻಗೇಮ್‌ ಚೇಂಜರ್‌ʼʼ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆಗೊಂಡಿದೆ. ಯಶ್‌ (Actor Yash) ಅಭಿಮಾನಿಗಳು ರಾಮ್‌ಚರಣ್‌ ಅವರ ಲುಕ್‌ ನೋಡಿ ಯಶ್‌ ರೀತಿ ಕಾಣುತ್ತಿದ್ದಾರೆ ಎಂದು ಕಮೆಂಟ್‌ ಮೂಲಕ ವ್ಯಕ್ತಪಡಿಸಿದ್ದಾರೆ. ಆದರೆ ಇದೀಗ ಯಶ್‌ ಅಭಿಮಾನಿಗಳು ರಾಧಿಕಾ ಅವರ ಪೋಸ್ಟ್‌ಗೆ ನೇರವಾಗಿ ಆವಾಜ್‌ ಹಾಕಿದ್ದಾರೆ! ರಾಧಿಕಾ ಪಂಡಿತ್ ಹುಟ್ಟುಹಬ್ಬದ ಸಂದರ್ಭದಲ್ಲಿ ಕುಟುಂಬದ ಜತೆ ವಿದೇಶಕ್ಕೆ ವೆಕೇಶನ್‌ಗೆ ಹೋಗಿದ್ದರು. ಅಂದು ವಿದೇಶದಲ್ಲಿ ಕ್ಲಿಕ್ಕಿಸಿದ ಫೋಟೊವನ್ನು ನಟಿ ಹಂಚಿಕೊಂಡಿದ್ದಾರೆ. ಆದರೆ ಈ ಫೋಟೊಗೆ ಯಶ್‌ ಅಭಿಮಾನಿಯೊಬ್ಬರು ʻʻಅತ್ತಿಗೆ.. ಯಶ್ 19ನೇ ಸಿನಿಮಾ ಬಗ್ಗೆ ಅಪ್​ಡೇಟ್ ಕೊಡಿ. ಇಲ್ಲದಿದ್ದರೆ ಸ್ಟ್ರೈಕ್ ಮಾಡ್ತೀವಿ’ ಎಂದು ನೇರವಾಗಿಯೇ ಧಮ್ಕಿ ಹಾಕಿದ್ದಾರೆ!

ಕೆಜಿಎಫ್‌ ಸಿನಿಮಾ ಬಳಿಕ ಯಶ್‌ ಯಾವುದೇ ಸಿನಿಮಾ ಬಗ್ಗೆ ಅಪ್‌ಡೇಟ್‌ ಹಂಚಿಕೊಂಡಿಲ್ಲ. ವಿಶ್ಯಾದ್ಯಂತ ಬಾಕ್ಸ್ ಆಫೀಸ್​ನಲ್ಲಿ ಈ ಚಿತ್ರ 1,400 ಕೋಟಿ ರೂ. ಗಳಿಕೆ ಕಂಡಿದೆ. ಈ ಸಿನಿಮಾ ತೆರೆಗೆ ಬರುತ್ತಿದ್ದಂತೆ ಯಶ್ ಮುಂದಿನ ಸಿನಿಮಾ ಬಗ್ಗೆ ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಇದಕ್ಕೆ ಈವರೆಗೆ ಉತ್ತರ ಸಿಕ್ಕಿಲ್ಲ. ಅಭಿಮಾನಿಗಳು ಕೂಡ ಕಾದು ಕಾದು ಸುಸ್ತಾಗಿದ್ದಾರೆ. ಹೀಗಾಗಿ, ರಾಧಿಕಾ ಅವರನ್ನು ಈ ಬಗ್ಗೆ ಕೇಳಲಾಗುತ್ತಿದೆ. ರಾಧಿಕಾ ಸದ್ಯ ಕುಟುಂಬದ ಕಡೆ ಗಮನ ನೀಡುತ್ತಿದ್ದಾರೆ. ನಟನೆಯಿಂದ ದೂರವೇ ಇದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಇದನ್ನೂ ಓದಿ: Actor Yash: ಎಲ್ಲ ಗೇಲಿಗೂ ಹೊಡಿ ಗೋಲಿ, ನೀನು ನೀನಾಗಿರು ಎಂದ ಯಶ್‌!

ಯಶ್‌ ಯಾವುದೇ ಹೊಸ ಸಿನಿಮಾ ಬಗ್ಗೆ ಘೋಷಣೆ ಮಾಡಿಲ್ಲ. ನಟ ಇದೀಗ ಬ್ರ್ಯಾಂಡ್‌ಗಳ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಯಶ್‌ ಪಾನೀಯ ಸಂಸ್ಥೆ ಪೆಪ್ಸಿಗೆ ರಾಯಭಾರಿ ಆಗಿದ್ದಾರೆ. ಇದರ ಪ್ರಚಾರದಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ. ಬಾಲಿವುಡ್​ನಿಂದ ರಣವೀರ್ ಸಿಂಗ್ ಅವರನ್ನು ಈ ಸಂಸ್ಥೆ ಆಯ್ಕೆ ಮಾಡಿಕೊಂಡರೆ, ಕನ್ನಡದಿಂದ ಯಶ್ ಇದ್ದಾರೆ.

ಸಲಾರ್‌ನಲ್ಲೂ ರಾಕಿ ಭಾಯ್‌?

ಕೆಜಿಎಫ್‌ ಸಿನಿಮಾದಂತೆಯೇ ಇರಲಿರುವ ʼಸಲಾರ್‌ʼ ಸಿನಿಮಾದಲ್ಲಿ ಪ್ರಭಾಸ್‌ ಜತೆ ಯಶ್‌ (Yash) ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

Exit mobile version