Site icon Vistara News

Pathaan Movie: ಪಠಾಣ್ ಸಿನಿಮಾ ಸೋತಿದ್ದರೆ ಅಡುಗೆ ಬಾಣಸಿಗ ಆಗುತ್ತಿದ್ದೆ; ಶಾರುಖ್‌ ಖಾನ್‌

Pathaan Movie Beats SS Rajamouli's Baahubali 2, KGF 2

ಬೆಂಗಳೂರು: ಪಠಾಣ್ (Pathaan Movie) ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಮಧ್ಯೆ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ ಸೇರಿ ‘ಪಠಾಣ್​’ ಚಿತ್ರತಂಡ ಸುದ್ದಿಗೋಷ್ಠಿಯನ್ನು ನಡೆಸಿ ತಮ್ಮ ಅನುಭವ ಹೇಳಿಕೊಂಡಿದೆ. ಹಾಗೇ, ಮಾಧ್ಯಮದವರು ಕೇಳಿದ ಪ್ರಶ್ನೆಗೂ ಉತ್ತರಿಸಿದೆ. ಶಾರುಖ್‌ ಪತ್ರಿಕಾಗೋಷ್ಠೀಯಲ್ಲಿ ಪಠಾಣ್ ಸಿನಿಮಾ ʻʻಒಂದು ವೇಳೆ ಸೋತಿದ್ದರೆ ತಾವು ಅಡುಗೆ ಬಾಣಸಿಗ ಆಗುತ್ತಿದ್ದೆʼʼ ಎನ್ನುವ ಮಾತುಗಳನ್ನು ಆಡಿದ್ದಾರೆ. ಅದಕ್ಕಾಗಿಯೇ ಅವರು ಹೋಟೆಲ್ ಉದ್ಯಮಕ್ಕೆ ಕಾಲಿಡುತ್ತಿದ್ದ ಸಂಗತಿಯನ್ನೂ ತಿಳಿಸಿದ್ದಾರೆ.

ನಾಲ್ಕು ವರ್ಷಗಳ ನಂತರ ಶಾರುಖ್‌ ಪಠಾಣ್‌ ಮೂಲಕ ತೆರೆಯಲ್ಲಿ ಮಿಂಚಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಸೋತ ಶಾರುಖ್‌ಗೆ ಪಠಾಣ್‌ ಮತ್ತೆ ಲಕ್‌ ತಂದುಕೊಟ್ಟಿದೆ. ಪಠಾಣ್‌ ಮೊದಲ ಹಾಡು ಬೇಷರಮ್‌ ರಂಗ್‌ ಹಾಡು ಬಿಡುಗಡೆಯಾಗುತ್ತಿದ್ದಂತೆ ವಿವಾದಕ್ಕೆ ಕಾರಣವಾಯಿತು. ಬಹಿಷ್ಕಾರ ಹಾಗೂ ಮತ್ತಿತರ ಕಾರಣದಿಂದಾಗಿ ಪಠಾಣ್ ಸೋತಿದ್ದರೆ ತಾವು ತಮ್ಮದೇ ಹೋಟೆಲ್‌ನಲ್ಲಿ ಅಡುಗೆ ಮಾಡುತ್ತಿರುವ ವಿಚಾರವನ್ನು ಶಾರುಖ್‌ ಹಂಚಿಕೊಂಡಿದ್ದಾರೆ. ಅಡುಗೆ ಮಾಡುವುದಕ್ಕಾಗಿಯೇ ಅವರು ತರಬೇತಿಯನ್ನು ಕೂಡ ಪಡೆದಿದ್ದರಂತೆ.

ಇದನ್ನೂ ಓದಿ: Pathaan Movie: ಪಠಾಣ್​ ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿದ ದೀಪಿಕಾ ಪಡುಕೋಣೆ; ಶಾರುಖ್​ ಇಲ್ದಿದ್ರೆ ನಾನು ಇಲ್ಲಿ ಇರ್ತಿರಲಿಲ್ಲ ಎಂದ ನಟಿ

ಇದನ್ನೂ ಓದಿ: Pathaan Movie : 600 ಕೋಟಿ ರೂ. ಗಳಿಕೆಯತ್ತ ‘ಪಠಾಣ್’ ಸಿನಿಮಾ, ಬಾಕ್ಸ್‌ಆಫೀಸ್ ದಾಖಲೆ!

ಸಿದ್ಧಾರ್ಥ್​ ಆನಂದ್ ನಿರ್ದೇಶನದ ಈ ಸಿನಿಮಾದಲ್ಲಿ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ಜಾನ್​ ಅಬ್ರಾಹಂ, ಡಿಂಪಲ್​ ಕಪಾಡಿಯಾ ಮತ್ತಿತರ ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ. ಸಿನಿಮಾದ ‘ಬೇಷರಮ್​ ರಂಗ್​’ ಹಾಡು ಬಿಡುಗಡೆಯಾದಾಗಿನಿಂದಲೂ ಪಠಾಣ್​ ಪ್ರತಿದಿನವೂ ವಿವಾದದ ಕೇಂದ್ರ ಬಿಂದುವಾಗಿತ್ತು. ಸಿನಿಮಾ ಬಹಿಷ್ಕಾರದ ಕೂಗು ಎದ್ದಿತ್ತು. ಆದರೆ ಬಿಡುಗಡೆಯಾದ ಮೇಲೆ ಸಿನಿಮಾ ಭರ್ಜರಿಯಾಗಿಯೇ ಓಡುತ್ತಿದೆ. ಬಿಡುಗಡೆಯಾದ 6 ದಿನಗಳಲ್ಲಿ ಹಿಂದಿ ಭಾಷೆಯೊಂದರಲ್ಲೇ 296 ಕೋಟಿ ರೂಪಾಯಿ ಕಲೆಕ್ಷನ್​ ಆಗಿದ್ದು, ವಿಶ್ವದಾದ್ಯಂತ ಸೇರಿ ಲೆಕ್ಕಾಚಾರ ಹಾಕಿದರೆ ಈಗಾಗಲೇ 542 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಆಗಿದ್ದಾಗಿ ವ್ಯಾಪಾರ ವಿಶ್ಲೇಷಕ ತರಣ್​ ಆದರ್ಶ್​ ಟ್ವೀಟ್ ಮಾಡಿದ್ದಾರೆ.

Exit mobile version