Site icon Vistara News

IFFM Awards 2023: ಫಿಲ್ಮ್‌ ಫೆಸ್ಟಿವಲ್‌ ಆಫ್‌ ಮೆಲ್ಬೋರ್ನ್‌ನಲ್ಲಿ ಪ್ರಶಸ್ತಿ ಪಡೆದ ʻಸೀತಾ ರಾಮಂʼ, ʻಪಠಾಣ್‌ʼ!

IFFM Awards 2023

ಆಗಸ್ಟ್‌ 11ರಂದು ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ 14 ನೇ (IFFM Awards 2023) ಇಂಡಿಯನ್‌ ಫಿಲ್ಮ್‌ ಫೆಸ್ಟಿವಲ್‌ ಆಫ್‌ ಮೆಲ್ಬೋರ್ನ್‌ (IFFM 2023) (Indian Film Festival of Melbourne) ಪ್ರಶಸ್ತಿ ಸಮಾರಂಭ ಆಯೋಜಿಸಲಾಗಿತ್ತು. ಶಾರುಖ್ ಖಾನ್ ಅವರ ಪಠಾಣ್‌ ( Pathaan), ಮಿಸೆಸ್‌ ಚಟರ್ಜಿ Vs ನಾರ್ವೆಗಾಗಿ ರಾಣಿ ಮುಖರ್ಜಿ (Mrs Chatterjee Vs Norway), ಮತ್ತು ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ಅವರ ಸೀತಾ ರಾಮಂ (Sita Ramam ) ಸಿನಿಮಾ ಈ ವರ್ಷದ IFFMನಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿವೆ.

ಮೃಣಾಲ್‌ ಠಾಕೂರ್‌ ಮತ್ತು ದುಲ್ಕರ್‌ ಸಲ್ಮಾನ್‌ ಅಭಿನಯದ ತೆಲುಗು ಚಿತ್ರ ‘ಸೀತಾ ರಾಮಂ’ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಶಾರುಖ್‌ ಖಾನ್‌ ಅವರ ‘ಪಠಾಣ್‌’ ಪೀಪಲ್ಸ್‌ ಚಾಯ್ಸ್ ಪ್ರಶಸ್ತಿ ಗೆದ್ದುಕೊಂಡಿದೆ. ಮಿಸೆಸ್‌ ಚಟರ್ಜಿ Vs ನಾರ್ವೆಗಾಗಿ ರಾಣಿ ಮುಖರ್ಜಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ

ಪ್ರಶಸ್ತಿಗಳ ಪಟ್ಟಿ ಇಲ್ಲಿವೆ

ಇದನ್ನೂ ಓದಿ: Sita Ramam Film | ಅರಬ್‌ ರಾಷ್ಟ್ರಗಳಲ್ಲಿ ಬ್ಯಾನ್‌ ಆಗಲಿದೆಯಾ ಸೀತಾ ರಾಮಂ?

ಗೌರವ ಪ್ರಶಸ್ತಿಗಳು

ಪಠಾಣ್‌ ಸಿನಿಮಾ

ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ಪಠಾಣ್‌ ಸಿನಿಮಾ ಜನವರಿ 25ರಂದು ಬಿಡುಗಡೆ ಆಗಿ ಭಾರತೀಯ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿತ್ತು. ಜಾನ್‌ ಅಬ್ರಹಾಂ, ದೀಪಿಕಾ ಪಡುಕೋಣೆ, ಡಿಂಪಲ್‌ ಕಪ್ಪಾಡಿಯಾ ಮತ್ತು ಅಶುತೋಷ್‌ ರಾಣಾ ಸೇರಿದಂತೆ ಇತರರು ಸಿನಿಮಾದಲ್ಲಿ ನಟಿಸಿದ್ದಾರೆ. ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 1050 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಹಲವಾರು ಬಾಕ್ಸ್‌ ಆಫೀಸ್‌ ದಾಖಲೆಗಳನ್ನು ಮುರಿದಿದೆ. ಜತೆಗೆ, ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಇದು ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿದೆ. ಶ್ರೀಧರ್‌ ರಾಘವನ್‌ ಚಿತ್ರಕಥೆ ಬರೆದಿರುವ ಸಿನಿಮಾವನ್ನು ಯಶ್‌ ರಾಜ್‌ ಫಿಲ್ಮ್ಸ್‌ ನಿರ್ಮಿಸಿದೆ.

ಇದನ್ನೂ ಓದಿ; Mrs Chatterjee Vs Norway: ರಾಣಿ ಮುಖರ್ಜಿ ಅಭಿನಯದ ಮಿಸೆಸ್‌ ಚಟರ್ಜಿ Vs ನಾರ್ವೆ ಟ್ರೈಲರ್‌ ಔಟ್‌!

ಮಿಸೆಸ್‌ ಚಟರ್ಜಿ Vs ನಾರ್ವೆ (Mrs Chatterjee Vs Norway)

ಮಿಸೆಸ್‌ ಚಟರ್ಜಿ Vs ನಾರ್ವೆ ಸಿನಿಮಾವನ್ನು ನಿಖಿಲ್ ಆಡ್ವಾಣಿ ನಿರ್ಮಿಸಿದ್ದಾರೆ. ನಾರ್ವೆ ದೇಶದಲ್ಲಿ ಭಾರತೀಯ ದಂಪತಿಯ ಮಕ್ಕಳನ್ನು ಸರ್ಕಾರ ವಶಕ್ಕೆ ಪಡೆಯುತ್ತದೆ. ಬಳಿಕ ಭಾರತೀಯ ದಂಪತಿ ಮಕ್ಕಳನ್ನು ವಾಪಸ್ ಪಡೆಯಲು ಹೇಗೆಲ್ಲ ಕಾನೂನು ಹೋರಾಟ ಮಾಡುತ್ತಾರೆ ಎಂಬುದೇ ಚಿತ್ರದ ಒನ್‌ಲೈನ್‌ ಸ್ಟೋರಿ.ರಾಣಿ ಮುಖರ್ಜಿ ಪಾತ್ರಕ್ಕೆ ಜೀವ ತುಂಬಿದ್ದರು.

Exit mobile version