Site icon Vistara News

IIFA 2023 Winners Full List: ಹೃತಿಕ್ ರೋಷನ್, ಆಲಿಯಾ ಭಟ್‌ಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ; ವಿಜೇತರ ಪಟ್ಟಿ ಇಲ್ಲಿದೆ!

IIFA 2023 Winners Hrithik Roshan and anil Kapoor

ಬೆಂಗಳೂರು: ಅಬುಧಾಬಿಯಲ್ಲಿ ಮೇ 27ರಂದು ನಡೆದ ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (IIFA 2023)ರಲ್ಲಿ (IIFA 2023 Winners Full List) ಹೃತಿಕ್ ರೋಷನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಸೈಫ್ ಅಲಿ ಖಾನ್ ನಟಿಸಿದ ವಿಕ್ರಮ್ ವೇದಾದಲ್ಲಿ ಅವರ ಸಾಹಸಮಯ ಅಭಿನಯಕ್ಕಾಗಿ ಟ್ರೋಫಿಯನ್ನು ಪಡೆದರು. ಅಷ್ಟೇ ಅಲ್ಲದೇ ʻಗಂಗೂಬಾಯಿ ಕಥಿಯಾವಾಡಿʼಗಾಗಿ ಆಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆಲಿಯಾ ಸಮಾರಂಭದಲ್ಲಿ ಗೈರಾದ ಕಾರಣ ನಿರ್ಮಾಪಕ ಜಯಂತಿಲಾಲ್ ಗಡಾ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಬಾರಿ ʻಗಂಗೂಬಾಯಿ ಕಥಿಯಾವಾಡಿ ಸಿನಿಮಾಗೆ ಹಲವು ಪ್ರಶಸ್ತಿಗಳು ಸಂದಿವೆ.

ಹಿರಿಯ ನಟ ಅನಿಲ್ ಕಪೂರ್ ಅವರು IIFA 2023ರಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದರು. ʻಜಗ್‌ಜಗ್ ಜೀಯೋದಲ್ಲಿʼನ ಅವರ ಪಾತ್ರಕ್ಕಾಗಿ ಪ್ರಶಸ್ತಿ ಸ್ವೀಕರಿಸಿದರು.

ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆಗಾಗಿ ಕಮಲ್ ಹಾಸನ್‌ಗೆ ಪ್ರಶಸ್ತಿ

ಹಿರಿಯ ನಟ ಕಮಲ್ ಹಾಸನ್ ಅವರು ಐಐಎಫ್‌ಎ 2023ರಲ್ಲಿ (IIFA 2023) ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆಗಾಗಿ ಪ್ರಶಸ್ತಿಯನ್ನು ನೀಡಿದಾಗ ಭಾರೀ ಕರತಾಡನದ ಪಡೆದರು. ಗಾಯಕ ಮತ್ತು ಸಂಗೀತ ಸಂಯೋಜಕ ಎಆರ್ ರೆಹಮಾನ್ ಅವರು ಕಮಲ್‌ ಹಾಸನ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಮಲ್ ಹಾಸನ್ ಟ್ರೋಫಿ ಸ್ವೀಕರಿಸಿದ ತಕ್ಷಣ, ಸಲ್ಮಾನ್ ಖಾನ್ ಸೇರಿದಂತೆ ಎಲ್ಲರೂ ತಮ್ಮ ಸ್ಥಾನದಿಂದ ಎದ್ದು ನಿಂತು ನಟನನ್ನು ಶ್ಲಾಘಿಸಿದರು.

ವಿಕ್ರಮ್ ವೇದಾ ತಮಿಳು ಚಿತ್ರದ ರಿಮೇಕ್ ಆಗಿದೆ. ತಮಿಳಿನಲ್ಲಿ ಆರ್ ಮಾಧವನ್ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಹಿಂದಿಯಲ್ಲಿ ಹೃತಿಕ್‌ ಹಾಗೂ ಸೈಫ್‌ ನಟಿಸಿದ್ದರು.

ಇದನ್ನೂ ಓದಿ: Aahana Kumra: ಐಫಾ ಕಾರ್ಯಕ್ರಮದಲ್ಲಿ ನಟಿ ಅಹಾನಾ ಕುಮ್ರಾಳ ಡ್ರೆಸ್‌ ಜಾರುವುದರಲ್ಲಿತ್ತು, ಆಗ? ವಿಡಿಯೊ ವೈರಲ್​

ಬ್ರಹ್ಮಾಸ್ತ್ರ ಮತ್ತು ಗಂಗೂಬಾಯಿ ಕಾಠಿಯಾವಾಡಿಗೆ ದೊಡ್ಡ ಗೆಲುವು

ಬಾಲಿವುಡ್ ಫ್ಯಾಂಟಸಿ ಚಿತ್ರ ಬ್ರಹ್ಮಾಸ್ತ್ರ: ಭಾಗ ಒಂದು – ಶಿವ, ಮತ್ತು ಜೀವನಚರಿತ್ರೆ ಗಂಗೂಬಾಯಿ ಕಾಠಿಯಾವಾಡಿ ಈ ವರ್ಷದ IIFAನಲ್ಲಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಶ್ರೇಯಾ ಘೋಷಾಲ್ ಮತ್ತು ಅರಿಜಿತ್ ಸಿಂಗ್ ಅತ್ಯುತ್ತಮ ಹಿನ್ನೆಲೆ ಗಾಯಕಿ, ಗಾಯಕಿ ವಿಭಾಗ, ಹಾಗೆಯೇ ಮೌನಿ ರಾಯ್‌ ಅತ್ಯುತ್ತಮ ಪೋಷಕ ನಟಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ದಿವಂಗತ ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ಮಗ, ಬಾಬಿಲ್ ಖಾನ್, ʻಕಾಲಾʼ ಚಿತ್ರಕ್ಕಾಗಿ ಬೆಸ್ಟ್‌ ಡೆಬ್ಯೂಟ್‌ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಧೋಕಾ ಅರೌಂಡ್ ದಿ ಕಾರ್ನರ್‌ಗಾಗಿ ಖುಶಾಲಿ ಕುಮಾರ್ ಬೆಸ್‌ ಡೆಬ್ಯೂಟ್‌ ಫಿಮೇಲ್‌ ಅವಾರ್ಡ್‌ ಪಡೆದುಕೊಂಡರು.

ಗಂಗೂಬಾಯಿ ಕಾಠಿಯಾವಾ ಡಿಸಿನಿಮಾದ ತಾಂತ್ರಿಕ ವಿಭಾಗಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಛಾಯಾಗ್ರಹಣ, ಚಿತ್ರಕಥೆ ಮತ್ತು ಸಂಭಾಷಣೆಗಾಗಿ ಟ್ರೋಫಿಗಳನ್ನು ಗೆದ್ದುಕೊಂಡಿತು. ಈ ಚಿತ್ರದಲ್ಲಿ ಆಲಿಯಾ ಭಟ್ ನಾಯಕಿಯಾಗಿ ನಟಿಸಿದ್ದರು.

ಇದನ್ನೂ ಓದಿ: Pavan Wadeyar: ರಾಷ್ಟ್ರಪ್ರಶಸ್ತಿ ಪುರಸ್ಕೃತ ಡೊಳ್ಳು ಸಿನಿಮಾ ನಿರ್ಮಾಪಕ ಪವನ್ ಒಡೆಯರ್‌ಗೆ ದುಬೈನಲ್ಲಿ ಸನ್ಮಾನ

ಪ್ರಶಸ್ತಿಗಳ ವಿವರ ಇಲ್ಲಿದೆ!

Exit mobile version