Site icon Vistara News

IIFTC Award: ʻಗಾಳಿಪಟ 2ʼ,ʻರೇಮೊʼ ಸಿನಿಮಾಗಳಿಗೆ ಅತ್ಯುತ್ತಮ ವಿದೇಶಿ ಚಿತ್ರೀಕರಣ ಪ್ರಶಸ್ತಿ!

Pawan Odeyar and Ramesh Reddy

ಬೆಂಗಳೂರು: ಗೋಲ್ಡನ್‌ ಸ್ಟಾರ್‌ ಗಣೇಶ್‌ (Golden Star Ganesh) ಹಾಗೂ ಯೋಗರಾಜ್‌ ಭಟ್‌ (Yogaraj Bhat)ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಗಾಳಿಪಟ 2 ಸಿನಿಮಾ (Gaalipata 2) 2022ರ ಆಗಸ್ಟ್‌ 12ರಂದು ತೆರೆ ಕಂಡಿತ್ತು. ಯಶಸ್ವಿ ಪ್ರದರ್ಶನ ಕಂಡ ಈ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿತ್ತು. ಪವನ್ ಒಡೆಯರ್ ನಿರ್ದೇಶನದ ಇಶಾನ್ ಹಾಗೂ ಆಶಿಕಾ ರಂಗನಾಥ್ ನಟನೆಯ ‘ರೇಮೊ’ (Kannada New Film) ಸಿನಿಮಾ ಕೂಡ ಯಶಸ್ವಿ ಪ್ರದರ್ಶನ ಕಂಡಿತ್ತು. ಇದೀಗ ಈ ಎರಡು ಸಿನಿಮಾಗಳಿಗೆ ಮುಂಬೈನಲ್ಲಿ ನೆಡೆದ ಹತ್ತನೇ ವರ್ಷದ IIFTC ಪ್ರಶಸ್ತಿ ಸಮಾರಂಭದಲ್ಲಿ ವಿದೇಶಿ ಚಿತ್ರೀಕರಣ ಪ್ರಶಸ್ತಿ (IIFTC Award) ದೊರೆಕಿದೆ. ಪವನ್ ಒಡೆಯರ್ ಈ ಸುದ್ದಿಯನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ʻʻಮುಂಬೈನಲ್ಲಿ ನಡೆದ ಹತ್ತನೇ ವರ್ಷದ IIFTC ಪ್ರಶಸ್ತಿ ಸಮಾರಂಭದಲ್ಲಿ, ಈ ವರ್ಷ ಎರಡು ಕನ್ನಡ ಚಿತ್ರಗಳಿಗೆ ಅತ್ಯುತ್ತಮ ವಿದೇಶಿ ಚಿತ್ರೀಕರಣ ಪ್ರಶಸ್ತಿ ದೊರೆಕಿದೆ. “ಗಾಳಿಪಟ 2” ಮತ್ತು “ರೇಮೊ”ʼʼಎಂದು ಪವನ್ ಒಡೆಯರ್ ಅವರು ಗಾಳಿಪಟ 2 ನಿರ್ಮಾಪಕರು ಎಂ. ರಮೇಶ್‌ ರೆಡ್ಡಿ ಜತೆ ಪ್ರಶಸ್ತಿಯೊಂದಿಗೆ ಫೋಟೊ ಹಂಚಿಕೊಂಡಿದ್ದಾರೆ.

ಗಾಳಿಪಟ 2

ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಾಗೂ ಯೋಗರಾಜ್‌ ಭಟ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಗಾಳಿಪಟ 2 ಸಿನಿಮಾ (Gaalipata 2) ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಂಡಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿದ್ದ ಈ ಚಿತ್ರಕ್ಕೆ ಸಿನಿಮಾ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆಗಸ್ಟ್ 12ರಂದು ರಾಜ್ಯ ಸೇರಿದಂತೆ ಹೊರ ರಾಜ್ಯ ಹಾಗೂ ವಿದೇಶಗಳಲ್ಲಿಯೂ ಗಾಳಿಪಟ -2 ಸಿನಿಮಾ ತೆರೆ ಕಂಡು ಹೊಸ ದಾಖಲೆ ಬರೆದಿತ್ತು. ಸ್ನೇಹ, ಪ್ರೇಮ, ವಿರಹ, ತ್ಯಾಗ, ಭಾವನೆಯ ಜತೆಗೆ ಒಂದಿಷ್ಟು ಮಸಾಲೆ ಸೇರಿಸಿ ಯೋಗರಾಜ್‌ ಭಟ್‌ ತಯಾರಿಸಿದ್ದ ಸಿನಿಮಾ ಪ್ರೇಕ್ಷಕರನ್ನು ಸೆಳೆದಿತ್ತು. ಗೋಲ್ಡನ್‌ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಹಾಗೂ ನಿರ್ದೇಶಕ ಪವನ್ ಕುಮಾರ್ ನಾಯಕರಾಗಿ ನಟಿಸಿದ್ದರು. ಸೂರಜ್‌ ಪ್ರೊಡಕ್ಷನ್‌ ಅಡಿಯಲ್ಲಿ ಉಮಾ ಎಂ. ರಮೇಶ್‌ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣವಿದ್ದು, ಅರ್ಜುನ್‌ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.

ಹಿರಿಯ ನಟ ಅನಂತ್ ನಾಗ್ ಕನ್ನಡ ಮೇಷ್ಟ್ರು ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ, ನಿಶ್ವಿಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Actor Nagabhushan: ರಕ್ಷಿತ್‌ ಶೆಟ್ಟಿ ಸಿನಿಮಾ ಬಿಡುಗಡೆ ದಿನವೇ ನಾಗಭೂಷಣ್‌ ಅಭಿನಯದ ʻಟಗರು ಪಲ್ಯʼ ರಿಲೀಸ್‌!

ಪವನ್ ಒಡೆಯರ್ ಟ್ವೀಟ್‌

ರೇಮೊ

ಪವನ್ ಒಡೆಯರ್ ನಿರ್ದೇಶನದ ಇಶಾನ್ ಹಾಗೂ ಆಶಿಕಾ ರಂಗನಾಥ್ ನಟನೆಯ ‘ರೇಮೊ’ (Kannada New Film) ಸಿನಿಮಾ’ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ. ಶರತ್ ಕುಮಾರ್, ರಾಜೇಶ್ ನಟರಂಗ, ಅಚ್ಯುತ್ ಕುಮಾರ್, ಮಧು ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ. ಜಯಾದಿತ್ಯ ಬ್ಯಾನರ್ ನಡಿ ಸಿ. ಆರ್. ಮನೋಹ ಬಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸಿ. ಆರ್ ಗೋಪಿ ಸಹ ನಿರ್ಮಾಣವಿದೆ. ವೈದಿ ಕ್ಯಾಮೆರಾ ವರ್ಕ್, ಕೆ.ಎಂ. ಪ್ರಕಾಶ್ ಸಂಕಲನ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

Exit mobile version