ನಟಿ ಇಲಿಯಾನಾ ಡಿಕ್ರೂಜ್ (Ileana D’cruz Pregnant) ತಾಯಿಯಾಗುತ್ತಿರುವ ಬಗ್ಗೆ ಈಗಾಗಲೇ ಹೇಳಿಕೊಂಡಿದ್ದಾರೆ. ಮದುವೆಯಾಗದೆ ಪ್ರೆಗ್ನೆನ್ಸಿ (Pregnancy) ಅನೌನ್ಸ್ ಮಾಡಿದ್ದಕ್ಕೆ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ತಮ್ಮ ‘ಡೇಟ್ ನೈಟ್’ ನಲ್ಲಿ ವ್ಯಕ್ತಿಯ ಜತೆಗಿರುವ ಫೋಟೊವನ್ನು ನಟಿ ಈ ಹಿಂದೆ ಹಂಚಿಕೊಂಡಿದ್ದರು. ಪ್ರಿಯಕರನ ಮುಖವನ್ನು ಇಲಿಯಾನಾ ರಿವೀಲ್ ಮಾಡಿದ್ದರು. ಆದರೆ ನಟಿ ಆ ವ್ಯಕ್ತಿಯ ಹೆಸರನ್ನು ಗುಟ್ಟಾಗಿಯೇ ಇಟ್ಟಿದ್ದರು .ಈಗ ಇಲಿಯಾನಾ ಅವರು ಹೊಸ ಫೋಟೊ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರ ಬೇಬಿ ಬಂಪ್ ಕಾಣಿಸಿದೆ. ಇದಕ್ಕೆ ಅವರು ಚೆಂದದ ಕ್ಯಾಪ್ಶನ್ ನೀಡಿದ್ದಾರೆ.
ಮರೂನ್ ಬಣ್ಣದ ಬಟ್ಟೆ ಧರಿಸಿ ಇಲಿಯಾನಾ ಅವರು ಮಿರರ್ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಫೋಟೊಗೆ ಅವರು ‘ಮೈ ಲಿಟಲ್ ವಾಟರ್ಮೆಲನ್’ ಎನ್ನುವ ಕ್ಯಾಪ್ಶನ್ ನೀಡಿದ್ದಾರೆ. ಬೇಬಿಬಂಪ್ಗೆ ಇಲಿಯಾನಾ ಕೊಟ್ಟ ಹೆಸರು ಇದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇಲಿಯಾನಾ ಗರ್ಭಿಣಿಯಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಮದುವೆ ಆಗದೆ ಪ್ರೆಗ್ನೆಂಟ್ ಆದ ವಿಚಾರವನ್ನು ಅವರು ರಿವೀಲ್ ಮಾಡಿದ್ದು ಅನೇಕರಿಗೆ ಅಚ್ಚರಿ ಆಗಿತ್ತು. ಏನೇ ಆದರೂ ಅವರು ಮಗುವಿಗೆ ತಂದೆ ಯಾರು ಎನ್ನುವ ವಿಚಾರ ರಿವೀಲ್ ಮಾಡಿರಲಿಲ್ಲ. ಇದನ್ನು ಆದಷ್ಟು ಬೇಗ ತಿಳಿಸಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಇದನ್ನೂ ಓದಿ: Ileana D’cruz: ಇಲಿಯಾನಾ ಮಗುವಿನ ತಂದೆ ಯಾರಂತ ಗೊತ್ತಾಯ್ತು; ಒಂದು ಸತ್ಯ ಮಾತ್ರ ಹೊರಗೆ ಬರಲೇ ಇಲ್ಲ!
ಕತ್ರೀನಾ ಕೈಫ್ ಸಹೋದರನ ಜತೆ ಡೇಟಿಂಗ್!
ಇಲಿಯಾನಾ ಅವರು ಕತ್ರೀನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕಲ್ ಅವರೊಂದಿಗೆ ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಮಾಲ್ಡೀವ್ಸ್ನಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್ ಜತೆ ಇಲಿಯಾನಾ ಹಾಗೂ ಕತ್ರೀನಾ ತಮ್ಮನೂ ಇದ್ದ ಕಾರಣ ಈ ಡೇಟಿಂಗ್ ವಿಚಾರ ರಿವೀಲ್ ಆಗಿತ್ತು. ಆದರೆ ಈ ಜೋಡಿ ಇನ್ನೂ ತಮ್ಮ ರಿಲೇಷನ್ಶಿಪ್ ಬಗ್ಗೆ ಅಧಿಕೃತವಾಗಿ ಮಾತನಾಡಿಲ್ಲ. ಇಲಿಯಾನಾ ಡಿಕ್ರೂಜ್ ಅವರು ಈ ಹಿಂದೆ ಆಸ್ಟ್ರೇಲಿಯಾದ ಫೋಟೊಗ್ರಾಫರ್ ಆ್ಯಂಡ್ರ್ಯೂ ನೀಬೋನ್ ಜತೆ ಡೇಟಿಂಗ್ ನಡೆಸುತ್ತಿದ್ದರು. ಆದರೆ ಇವರು ಮದುವೆ ಆದ ಬಗ್ಗೆ ಸೂಕ್ತ ಪರಾವೆ ಸಿಗಲಿಲ್ಲ. ನಂತರ ಈ ಜೋಡಿ ಬ್ರೇಕಪ್ ಮಾಡಿಕೊಂಡಿತು ಎಂದು ವರದಿ ಆಯಿತು.
ನಟಿ ಬಿಗ್ ಬುಲ್ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಜತೆ ನಟಿಸಿದ್ದರು. ಇಲಿಯಾನಾ ಮೇ ತೇರಾ ಹೀರೋ, ರುಸ್ತಮ್, ಬರ್ಫಿ, ಪೋಕಿರಿ, ಬಾದ್ ಶೋ, ಪಾಗಲ್ಪಂತಿ, ರೈಡ್, ಕಿಕ್ನಲ್ಲಿ ನಟಿಸಿದ್ದಾರೆ.