ನಟಿ ಇಲಿಯಾನಾ ಡಿಕ್ರೂಜ್ (Ileana D’cruz Pregnant) ತಾಯಿಯಾಗುತ್ತಿರುವ ಬಗ್ಗೆ ಈಗಾಗಲೇ ಹೇಳಿಕೊಂಡಿದ್ದಾರೆ. ಮದುವೆಯಾಗದೇ ಪ್ರೆಗ್ನೆನ್ಸಿ (Pregnancy) ಅನೌನ್ಸ್ ಮಾಡಿದ್ದಕ್ಕೆ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು.
ನಟಿ ಮಗು ಪಡೆಯುತ್ತಿರುವುದು ಯಾರಿಂದ ಎಂಬ ವಿಷಯ ಕೂಡ ಬಹಿರಂಗ ಆಗಿಲ್ಲ. ಈ ಪ್ರಶ್ನೆಗೆ ಉತ್ತರ ಸಿಗುವುದಕ್ಕೂ ಮುನ್ನವೇ ಅವರು ಹೊಸ ಫೋಟೊ ಹಂಚಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಬೇಬಿ ಬಂಪ್ ಫೋಟೊ (Baby Bump Photo) ವೈರಲ್ ಆಗಿದೆ. ಬಂಪ್ ಅಲರ್ಟ್’ ಎಂಬ ಕ್ಯಾಪ್ಷನ್ ಜತೆಗೆಇಲಿಯಾನಾ ಡಿಕ್ರೂಜ್ ಅವರು ಈ ಫೋಟೊ ಹಂಚಿಕೊಂಡಿದ್ದಾರೆ.
ಇಲಿಯಾನಾ ಅವರು ಕತ್ರೀನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕಲ್ ಅವರನ್ನು ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಮಾಲ್ಡೀವ್ಸ್ನಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್ ಜತೆ ಇಲಿಯಾನಾ ಹಾಗೂ ಕತ್ರೀನಾ ತಮ್ಮನೂ ಇದ್ದ ಕಾರಣ ಈ ಡೇಟಿಂಗ್ ವಿಚಾರ ರಿವೀಲ್ ಆಗಿತ್ತು.
ಇಲಿಯಾನಾ ಡಿಕ್ರೂಜ್ ಅವರು ಈ ಹಿಂದೆ ಆಸ್ಟ್ರೇಲಿಯಾದ ಫೋಟೊಗ್ರಾಫರ್ ಆ್ಯಂಡ್ರ್ಯೂ ನೀಬೋನ್ ಜತೆ ಡೇಟಿಂಗ್ ನಡೆಸುತ್ತಿದ್ದರು. ಇಬ್ಬರು ಮದುವೆ ಆದ ಬಗ್ಗೆ ಸೂಕ್ತ ಪರಾವೆ ಸಿಗಲಿಲ್ಲ. ನಂತರ ಈ ಜೋಡಿ ಬ್ರೇಕಪ್ ಮಾಡಿಕೊಂಡಿತು ಎಂದು ವರದಿ ಆಯಿತು.