Site icon Vistara News

Ileana D’cruz Pregnant: ಬೇಬಿ ಬಂಪ್‌ ಫೋಟೊ ಬೆನ್ನಲ್ಲೇ ಹೊಸ ಪೋಸ್ಟ್‌ ಹಂಚಿಕೊಂಡ ಇಲಿಯಾನಾ ಡಿಕ್ರೂಜ್

Ileana D’cruz Pregnant Struggles To Sleep

ಬೆಂಗಳೂರು: ನಟಿ ಇಲಿಯಾನಾ ಡಿಕ್ರೂಜ್ (Ileana D’cruz Pregnant) ತಾಯಿಯಾಗುತ್ತಿರುವ ಬಗ್ಗೆ ಈಗಾಗಲೇ ಹೇಳಿಕೊಂಡಿದ್ದಾರೆ. ಮದುವೆಯಾಗದೇ ಪ್ರೆಗ್ನೆನ್ಸಿ (Pregnancy) ಅನೌನ್ಸ್ ಮಾಡಿದ್ದಕ್ಕೆ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಅಂದಿನಿಂದ ನಟಿ ಹೊಸ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ರಾತ್ರಿ ನಿದ್ರೆಯ ಸಮಯದಲ್ಲಿ ಕೆಲವು ಸವಾಲುಗಳನ್ನು ಎದುರಿಸಿದ್ದೆ ಎಂದು ಫೋಟೊ ಮೂಲಕ ನಟಿ ಬಹಿರಂಗಪಡಿಸಿದ್ದಾರೆ.

ಇನ್‌ಸ್ಟಾದಲ್ಲಿ ನಟಿ ಸೆಲ್ಫಿಗಳನ್ನು ಹಂಚಿಕೊಂಡಿದ್ದಾರೆ. ನಟಿ ಇಲಿಯಾನಾ ಡಿಕ್ರೂಜ್ ಹಾಸಿಗೆಯ ಮೇಲೆ ಬೆಚ್ಚಗೆ ಮಲಗಿಕೊಂಡು ʻʻಮಲಗಲು ಬಯಸಿದಾಗ ಮಗು ಹೊಟ್ಟೆಯಲ್ಲಿ ಡ್ಯಾನ್ಸ್ ಪಾರ್ಟಿ ಮಾಡಲು ತಯಾರಾಗಿ ಬಿಡುತ್ತದೆʼʼ ಎಂದು ತಮ್ಮ ಪ್ರೆಗ್ನೆನ್ಸಿ ಕುರಿತಾಗಿ ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಲಾಂಗ್ ಧರಿಸಿ ವಿಶ್ರಾಂತಿ ಪಡೆಯುತ್ತಿರುವ ಫೋಟೊ ಹಂಚಿಕೊಂಡಿದ್ದರು. ಹಾಗೇ ಬೇಬಿ ಬಂಪ್ ತೋರಿಸಿ ಕಾಫಿ ಕಪ್ ಹಿಡಿದಿದ್ದಾರೆ. ಈ ವಿಡಿಯೊದಲ್ಲಿ ಮುದ್ದಿನ ನಾಯಿ ಕೂಡ ಸೆರೆಯಾಗಿತ್ತು.

ಇಲಿಯಾನಾ ಡಿಕ್ರೂಜ್ ಅವರಿಗೆ ಇನ್ನೂ ಮದುವೆ ಆಗಿಲ್ಲ. ಮದುವೆ ಆಗದೆಯೇ ಅವರು ಗರ್ಭಿಣಿ (Ileana D’cruz Pregnant) ಆಗಿದ್ದಾರೆ. ಸದ್ಯ ಅವರ ಪಾರ್ಟ್ನರ್​ ಯಾರು ಎಂಬುದನ್ನು ಕೂಡ ಅವರು ಬಹಿರಂಗ ಮಾಡಿಲ್ಲ.

ಇದನ್ನೂ ಓದಿ: Ileana D’Cruz: ಇಲಿಯಾನಾ ಡಿಕ್ರೂಜ್ ಗರ್ಭಿಣಿ

ಬೇಬಿ ಬಂಪ್‌ ಫೋಟೊ

ಕತ್ರೀನಾ ಕೈಫ್ ಸಹೋದರ ಜತೆ ಡೇಟಿಂಗ್‌!

ಇಲಿಯಾನಾ ಅವರು ಕತ್ರೀನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕಲ್ ಅವರನ್ನು ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಮಾಲ್ಡೀವ್ಸ್​ನಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್ ಜತೆ ಇಲಿಯಾನಾ ಹಾಗೂ ಕತ್ರೀನಾ ತಮ್ಮನೂ ಇದ್ದ ಕಾರಣ ಈ ಡೇಟಿಂಗ್ ವಿಚಾರ ರಿವೀಲ್ ಆಗಿತ್ತು. ಆದರೆ ಈ ಜೋಡಿ ಇನ್ನೂ ತಮ್ಮ ರಿಲೇಷನ್​ಶಿಪ್ ಬಗ್ಗೆ ಅಧಿಕೃತವಾಗಿ ಮಾತನಾಡಿಲ್ಲ. ಇಲಿಯಾನಾ ಡಿಕ್ರೂಜ್​ ಅವರು ಈ ಹಿಂದೆ ಆಸ್ಟ್ರೇಲಿಯಾದ ಫೋಟೊಗ್ರಾಫರ್​ ಆ್ಯಂಡ್ರ್ಯೂ ನೀಬೋನ್​ ಜತೆ ಡೇಟಿಂಗ್​ ನಡೆಸುತ್ತಿದ್ದರು. ಇಬ್ಬರು ಮದುವೆ ಆದ ಬಗ್ಗೆ ಸೂಕ್ತ ಪರಾವೆ ಸಿಗಲಿಲ್ಲ. ನಂತರ ಈ ಜೋಡಿ ಬ್ರೇಕಪ್​ ಮಾಡಿಕೊಂಡಿತು ಎಂದು ವರದಿ ಆಯಿತು.

ನಟಿ ಬಿಗ್​ ಬುಲ್ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಜತೆ ನಟಿಸಿದ್ದರು. ಇಲಿಯಾನಾ ಮೇ ತೇರಾ ಹೀರೋ, ರುಸ್ತಮ್, ಬರ್ಫಿ, ಪೋಕಿರಿ, ಬಾದ್ ಶೋ, ಪಾಗಲ್​ಪಂತಿ, ರೈಡ್, ಕಿಕ್​ನಲ್ಲಿ ನಟಿಸಿದ್ದಾರೆ.

Exit mobile version