Site icon Vistara News

Ileana D’Cruz: ನಾನು ಸಿಂಗಲ್‌ ಪೇರೆಂಟ್‌ ಅಲ್ಲ ಎಂದು ಮಗುವಿನ ತಂದೆ ಫೋಟೊ ಹಂಚಿಕೊಂಡ ಇಲಿಯಾನಾ!

Ileana D'Cruz Replied With Single Parenting

ಬೆಂಗಳೂರು: ಬಹುಭಾಷಾ ನಟಿ ಇಲಿಯಾನಾ ಡಿಕ್ರೂಸ್‌ (Ileana D’Cruz) ಆಗಸ್ಟ್‌ 1ರಂದು ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗನ ಫೋಟೊ ಹಾಗೂ ಆತನ ಹೆಸರನ್ನು ಇನ್‌ಸ್ಟಾಗ್ರಾಂನಲ್ಲಿ ರಿವೀಲ್‌ ಮಾಡಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್‌ನಲ್ಲಿ ಕೆಲವು ಪ್ರಶ್ನೆಗಳಿಗೆ ಇದೀಗ ಉತ್ತರಿಸಿದ್ದಾರೆ.ಒಬ್ಬರು ನೀವು ʻʻಸಿಂಗಲ್‌ ಪೇರೆಂಟಾ?” ಎಂದು ಪ್ರಶ್ನೆ ಇಟ್ಟರು. ಪ್ರಶ್ನೆಗೆ ಪ್ರತಿಕ್ರಿಯಿಸಿದ ಇಲಿಯಾನಾ, ತನ್ನ ಸಂಗಾತಿಯೊಂದಿಗೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ. “ನಾನು ಸಿಂಗಲ್‌ ಪೇರೆಂಟ್‌ ಅಲ್ಲ” ಎಂದು ಬರೆದಿದ್ದಾರೆ. ಈ ಮೂಲಕ ಈ ಮುಂಚೆ ಹಂಚಿಕೊಂಡಿದ್ದ ಮೈಕೆಲ್ ಡೋಲನ್ ವ್ಯಕ್ತಿಯೇ ಮಗುವಿನ ತಂದೆ ಎಂದು ಸ್ಪಷ್ಟವಾಗಿದೆ.

ಮೈಕಲ್ ಡೋಲನ್ (Michael Dolan) ಎಂಬುವವರ ಜತೆ ಇಲಿಯಾನಾ ಮೇ 13, 2023ರಂದು ವಿವಾಹವಾಗಿದ್ದಾರೆ ಎಂದು ರಿವೀಲ್ ಆಗಿತ್ತು. ಆದರೆ ಅಧಿಕೃತ ಮದುವೆ ಬಗ್ಗೆ ಯಾವುದನ್ನ ನಟಿ ತಿಳಿಸಿರಲಿಲ್ಲ. ಕಳೆದ ತಿಂಗಳು ತನ್ನ ಮಸ್ಟರಿ ಮ್ಯಾನ್ ಮೈಕಲ್ ಫೋಟೊವನ್ನು ನಟಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ತನ್ನ ಪ್ರೆಗ್ನೆನ್ಸಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸುವ ನಾಲ್ಕು ವಾರಗಳ ಮೊದಲು ಮದುವೆಯಾಗಿದ್ದರು ಎಂದು ವರದಿಯಾಗಿತ್ತು. ಆ ಸಮಯದಲ್ಲಿ, ಇಲಿಯಾನಾ ಅವರು ಅಲಂಕರಿಸಿದ ಸ್ಥಳದ ಮುಂದೆ ಬಿಳಿ ವಧುವಿನ ಉಡುಪಿನಲ್ಲಿರುವ ಫೋಟೊ ಹಂಚಿಕೊಂಡಿದ್ದರು. ಆದರೆ ಆ ಫೋಟೊ ಅವರ ಮದುವೆಯ ಫೋಟೊವೇ ಅಥವಾ ಕೇವಲ ಫೋಟೊಶೂಟ್‌ ಇರಬಹುದೇ ಎಂಬ ಗಾಸಿಪ್‌ಗಳು ಹರಿದಾಡಿತ್ತು. ಮದುವೆ ಎಲ್ಲಿ ನಡೆಯಿತು, ಮೈಕಲ್ ಡೋಲನ್ ಯಾರು ಎಂಬುದರ ಬಗ್ಗೆ ಹೆಚ್ಚು ಮಾಹಿತಿ ತಿಳಿದು ಬಂದಿಲ್ಲ.

ಇದನ್ನೂ ಓದಿ: Ileana D’cruz Pregnant: ಬೇಬಿ ಬಂಪ್‌ ಫೋಟೊ ಹಂಚಿಕೊಂಡ ಇಲಿಯಾನಾ; ಮಗುವಿನ ತಂದೆ ಯಾರು?

ಇದನ್ನೂ ಓದಿ: Ileana D’cruz: ಬೇಬಿ ಬಂಪ್‌ಗೆ ಹೊಸ ಹೆಸರು ಕೊಟ್ಟ ನಟಿ ಇಲಿಯಾನಾ!

ತಮ್ಮ ಇನ್‌ಸ್ಟಾದಲ್ಲಿ ʻʻನನ್ನ ಮಗ ಕೋವಾ ಫಿನಿಕ್ಸ್‌ ಡೋಲನ್‌ನನ್ನು ನಿಮಗೆ ಪರಿಚಯ ಮಾಡುತ್ತಿದ್ದೇನೆ. ಈತ ಆಗಸ್ಟ್‌ 1ರಂದು ಜನಿಸಿದ್ದಾನೆ. ಜಗತ್ತಿಗೆ ನನ್ನ ಮಗನನ್ನು ಸ್ವಾಗತಿಸುವ ಭಾವುಕ ಕ್ಷಣದ ಕುರಿತು ವಿವರಿಸಲು ಪದಗಳೇ ಬರುತ್ತಿಲ್ಲ. ಹೃದಯ ತುಂಬಿ ಬಂದಿದೆ” ಎಂದು ಫೋಟೊ ಜತೆಗೆ ಇನ್‌ಸ್ಟಾಗ್ರಾಂನಲ್ಲಿ ನಟಿ ಬರೆದುಕೊಂಡಿದ್ದರು. ಆ ಮೂಲಕ ತಾಯ್ತನದ ಖುಷಿಯನ್ನು ಅವರು ಅಭಿಮಾನಿಗಳ ಜತೆ ಹಂಚಿಕೊಂಡಿದ್ದರು.

ಮಗನ ಹೆಸರ ಅರ್ಥವೇನು?

ಕೋವಾ ಎಂದರೆ ಯೋಧ ಅಥವಾ ಧೀರ ಎಂಬ ಅರ್ಥ ಇದೆ. ಇನ್ನು ಮಗನ ಫೋಟೊವನ್ನು ಅವರು ಪೋಸ್ಟ್‌ ಮಾಡುತ್ತಲೇ ಬಾಲಿವುಡ್‌ ಗಣ್ಯರು ಶುಭಕೋರಿದ್ದರು. “ಓಹ್‌ ಮೈ ಗಾಡ್.‌ ಕಂಗ್ರ್ಯಾಟ್ಸ್”‌ ಎಂದು ನಟಿ ಹುಮಾ ಖುರೇಷಿ ಕಮೆಂಟ್‌ ಮಾಡಿದ್ದರು. ಸುನೀಲ್‌ ಶೆಟ್ಟಿ ಪುತ್ರಿ, ಕೆ.ಎಲ್.ರಾಹುಲ್‌ ಪತ್ನಿ ಅಥಿಯಾ ಶೆಟ್ಟಿ ಕೂಡ ಶುಭ ಕೋರಿದ್ದರು.

ಇಲಿಯಾನಾ ಡಿಕ್ರೂಜ್ ಬಾಲಿವುಡ್ ಚಿತ್ರಗಳಾದ ಬರ್ಫಿ, ಫಟಾ ಪೋಸ್ಟರ್ ನಿಕ್ಲಾ ಹೀರೋ, ರುಸ್ತಮ್ ಮತ್ತು ಹ್ಯಾಪಿ ಎಂಡಿಂಗ್, ಹೀಗೆ ಅಹಲವು ಸಿನಿಮಾಗಳ ಮೂಲಕ ಹೆಸರುವಾಸಿಯಾಗಿದ್ದಾರೆ. ಮುಂದೆ ನಟಿ ರಣದೀಪ್ ಹೂಡಾ ಅವರೊಂದಿಗೆ ಅನ್‌ಫೇರ್ ಆ್ಯಂಡ್ ಲವ್ಲಿ ಸಿನಿಮಾಗೆ ಸಹಿ ಮಾಡಿದ್ದಾರೆ.

Exit mobile version