ಬೆಂಗಳೂರು: ನಟಿ ಇಲಿಯಾನಾ ಡಿಕ್ರೂಜ್ ತಾಯಿಯಾಗುತ್ತಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ಆದರೆ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಯಾಕೆಂದರೆ ಇಲಿಯಾನಾ ಡಿಕ್ರೂಜ್ ಅವರಿಗೆ ಇನ್ನೂ ಮದುವೆ ಆಗಿಲ್ಲ. ಮದುವೆ ಆಗದೆಯೇ ಅವರು ಗರ್ಭಿಣಿ (Ileana D’cruz Pregnant) ಆಗಿದ್ದಾರೆ. ಸದ್ಯ ಅವರ ಪಾರ್ಟ್ನರ್ ಯಾರು ಎಂಬುದನ್ನು ಕೂಡ ಅವರು ಬಹಿರಂಗ ಮಾಡಿಲ್ಲ.
ಇನ್ಸ್ಟಾಗ್ರಾಮ್ನಲ್ಲಿ ಸಿಹಿಸುದ್ದಿ ಹಂಚಿಕೊಂಡ ನಟಿ ಎರಡು ಫೋಟೊಗಳನ್ನು ಶೇರ್ ಮಾಡಿದ್ದಾರೆ. ಒಂದರಲ್ಲಿ ಮಗುವಿನ ಶರ್ಟ್ ಇದ್ದು ʻಅಡ್ವೆಂಚರ್ʼ ಶುರುವಾಗಿದೆ ಎಂದು ಬರೆಯಲಾಗಿದೆ. ಇನ್ನೊಂದರಲ್ಲಿ ಪೆಂಡೆಂಟ್ ಫೋಟೊ ಇದ್ದು ʻಮಾಮಾ(MAMA)ʼ ಎಂದು ಬರೆದಿರುವುದನ್ನು ಕಾಣಬಹುದು. ತಮ್ಮ ಪೋಸ್ಟ್ಗೆ ನಟಿ ಕಮಿಂಗ್ ಸೂನ್.. ನಿನ್ನನ್ನು ನೋಡಲು ಕಾದಿದ್ದೇನೆ ಲಿಟ್ಲ್ ಡಾರ್ಲಿಂಗ್’ ಎಂದು ಇಲಿಯಾನಾ ಡಿಕ್ರೂಜ್ ಅವರು ಬರೆದುಕೊಂಡಿದ್ದಾರೆ. ಆದರೆ ನಟಿ ಮಗುವಿನ ತಂದೆ ಯಾರು ಎನ್ನುವುದನ್ನು ರಿವೀಲ್ ಮಾಡಿಲ್ಲ. ನಟಿ ಈ ಸಿಹಿಸುದ್ದಿಯನ್ನು ಶೇರ್ ಮಾಡಿಕೊಂಡ ಕೂಡಲೇ ಬಹಳಷ್ಟು ಜನರು ನಟಿಗೆ ಶುಭಾಶಯಗಳನ್ನು ತಿಳಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಮಗುವಿನ ತಂದೆ ಬಗ್ಗೆ ಕೇಳುತ್ತಿದ್ದಾರೆ. ಕೆಲವರು ಮದುವೆಯಾಗದೆ ಗರ್ಭಿಣಿಯಾದ ಬಗ್ಗೆ ಟೀಕಿಸಿದ್ದಾರೆ. ಇದಕ್ಕೆ ಇಲಿಯಾನಾ ಅವರ ತಾಯಿ ಸಮೀರಾ ಡಿಕ್ರೂಜ್ ಕೂಡ ಕಾಮೆಂಟ್ ಮಾಡಿದ್ದಾರೆ. ‘ನನ್ನ ಮೊಮ್ಮಗುವಿಗೆ ಶೀಘ್ರದಲ್ಲೇ ಈ ಪ್ರಪಂಚಕ್ಕೆ ಸ್ವಾಗತ ಕೋರುವೆ’ ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Manvita Kamath: ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ ತಾಯಿ ನಿಧನ
ಇಲಿಯಾನಾ ಡಿಕ್ರೂಜ್ ಪೋಸ್ಟ್
ಕತ್ರೀನಾ ಕೈಫ್ ಸಹೋದರ ಜತೆ ಡೇಟಿಂಗ್!
ಇಲಿಯಾನಾ ಅವರು ಕತ್ರೀನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕಲ್ ಅವರನ್ನು ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಮಾಲ್ಡೀವ್ಸ್ನಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್ ಜತೆ ಇಲಿಯಾನಾ ಹಾಗೂ ಕತ್ರೀನಾ ತಮ್ಮನೂ ಇದ್ದ ಕಾರಣ ಈ ಡೇಟಿಂಗ್ ವಿಚಾರ ರಿವೀಲ್ ಆಗಿತ್ತು. ಆದರೆ ಈ ಜೋಡಿ ಇನ್ನೂ ತಮ್ಮ ರಿಲೇಷನ್ಶಿಪ್ ಬಗ್ಗೆ ಅಧಿಕೃತವಾಗಿ ಮಾತನಾಡಿಲ್ಲ. ಇಲಿಯಾನಾ ಡಿಕ್ರೂಜ್ ಅವರು ಈ ಹಿಂದೆ ಆಸ್ಟ್ರೇಲಿಯಾದ ಫೋಟೊಗ್ರಾಫರ್ ಆ್ಯಂಡ್ರ್ಯೂ ನೀಬೋನ್ ಜತೆ ಡೇಟಿಂಗ್ ನಡೆಸುತ್ತಿದ್ದರು. ಇಬ್ಬರು ಮದುವೆ ಆದ ಬಗ್ಗೆ ಸೂಕ್ತ ಪರಾವೆ ಸಿಗಲಿಲ್ಲ. ನಂತರ ಈ ಜೋಡಿ ಬ್ರೇಕಪ್ ಮಾಡಿಕೊಂಡಿತು ಎಂದು ವರದಿ ಆಯಿತು.
ನಟಿ ಬಿಗ್ ಬುಲ್ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಜತೆ ನಟಿಸಿದ್ದರು. ಇಲಿಯಾನಾ ಮೇ ತೇರಾ ಹೀರೋ, ರುಸ್ತಮ್, ಬರ್ಫಿ, ಪೋಕಿರಿ, ಬಾದ್ ಶೋ, ಪಾಗಲ್ಪಂತಿ, ರೈಡ್, ಕಿಕ್ನಲ್ಲಿ ನಟಿಸಿದ್ದಾರೆ.