Site icon Vistara News

Ileana D’Cruz: ʻಮೇʼನಲ್ಲಿಯೇ ಇಲಿಯಾನಾ ಡಿಕ್ರೂಸ್‌ ಮದುವೆಯಾಗಿದ್ದರು! ಯಾರು ಆ ವ್ಯಕ್ತಿ?

Ileana D'Cruzis

ಬೆಂಗಳೂರು: ಬಹುಭಾಷಾ ನಟಿ ಇಲಿಯಾನಾ ಡಿಕ್ರೂಸ್‌ (Ileana D’Cruz) ಗಂಡು ಮಗುವಿನ ತಾಯಿಯಾಗಿದ್ದಾರೆ. ಆಗಸ್ಟ್‌ 1ರಂದು ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗನ ಫೋಟೊ ಹಾಗೂ ಆತನ ಹೆಸರನ್ನು ಇನ್‌ಸ್ಟಾಗ್ರಾಂನಲ್ಲಿ ರಿವೀಲ್‌ ಮಾಡಿದ್ದಾರೆ. ಇಷ್ಟಾದರೂ ನಟಿ ಪತಿಯ ಹೆಸರನ್ನಾಗಲಿ, ಮದುವೆ ಬಗ್ಗೆಯಾಗಲಿ ರಿವೀಲ್‌ ಮಾಡಿರಲಿಲ್ಲ. ಇದೀಗ ಹೊಸ ವರದಿಯ ಪ್ರಕಾರ, ಇಲಿಯಾನಾ ಅವರು ಮೈಕೆಲ್ ಡೋಲನ್ (Michael Dolan) ಎಂಬುವರನ್ನು ಮೇ 13ರಂದು ನಟಿ ವಿವಾಹವಾಗಿದ್ದರು ಎನ್ನಲಾಗಿದೆ.

ಆಗಸ್ಟ್‌ 1ರಂದು ನಟಿ ಇಲಿಯಾನಾ ಡಿಕ್ರೂಸ್‌ ಮಗುವಿನ ಫೋಟೊ ಹಂಚಿಕೊಂಡು, ಮಗನ ಹೆಸರನ್ನೂ ರಿವೀಲ್‌ ಮಾಡಿದ್ದಾರೆ. ತಮ್ಮ ಇನ್‌ಸ್ಟಾದಲ್ಲಿ ʻʻನನ್ನ ಮಗ ಕೋವಾ ಫಿನಿಕ್ಸ್‌ ಡೋಲನ್‌ನನ್ನು ನಿಮಗೆ ಪರಿಚಯ ಮಾಡುತ್ತಿದ್ದೇನೆ. ಈತ ಆಗಸ್ಟ್‌ 1ರಂದು ಜನಿಸಿದ್ದಾನೆ. ಜಗತ್ತಿಗೆ ನನ್ನ ಮಗನನ್ನು ಸ್ವಾಗತಿಸುವ ಭಾವುಕ ಕ್ಷಣದ ಕುರಿತು ವಿವರಿಸಲು ಪದಗಳೇ ಬರುತ್ತಿಲ್ಲ. ಹೃದಯ ತುಂಬಿ ಬಂದಿದೆ” ಎಂದು ಫೋಟೊ ಜತೆಗೆ ಇನ್‌ಸ್ಟಾಗ್ರಾಂನಲ್ಲಿ ನಟಿ ಬರೆದುಕೊಂಡಿದ್ದಾರೆ. ಆ ಮೂಲಕ ತಾಯ್ತನದ ಖುಷಿಯನ್ನು ಅವರು ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ.

ಇದೀಗ ಮತ್ತೆ ನಟಿಯ ಪತಿ ಯಾರಿರಬಹುದುದೆಂದು ಸೋಷಿಯಲ್‌ ಮೀಡಿಯಾಗಳಲ್ಲಿ ಚರ್ಚೆಯಾಗುತ್ತಿದೆ. ಇಲಿಯಾನಾ ಈ ವರ್ಷ ಮೇ 13ರಂದು ಮೈಕೆಲ್ ಡೋಲನ್ ಅವರೊಂದಿಗೆ ವಿವಾಹವಾಗಿದ್ದಾರೆ ಎಂದು ಡಿಎನ್‌ಎ ವರದಿ ಮಾಡಿದೆ. ತನ್ನ ಪ್ರೆಗ್ನೆನ್ಸಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸುವ ನಾಲ್ಕು ವಾರಗಳ ಮೊದಲು ಮದುವೆಯಾಗಿದ್ದರು ಎಂದು ವರದಿಯಾಗಿದೆ.

ಆ ಸಮಯದಲ್ಲಿ, ಇಲಿಯಾನಾ ಅವರು ಅಲಂಕರಿಸಿದ ಸ್ಥಳದ ಮುಂದೆ ಬಿಳಿ ವಧುವಿನ ಉಡುಪಿನಲ್ಲಿರುವ ಫೋಟೊ ಹಂಚಿಕೊಂಡಿದ್ದರು. ಆದರೆ ಆ ಫೋಟೊ ಅವರ ಮದುವೆಯ ಫೋಟೊವೇ ಅಥವಾ ಕೇವಲ ಫೋಟೊಶೂಟ್‌ ಇರಬಹುದೇ ಎಂಬ ಗಾಸಿಪ್‌ಗಳು ಹರಿದಾಡುತ್ತಿವೆ. ಮದುವೆ ಎಲ್ಲಿ ನಡೆಯಿತು, ಮೈಕೆಲ್ ಡೋಲನ್ ಯಾರು ಎಂಬುದರ ಬಗ್ಗೆ ಹೆಚ್ಚು ಮಾಹಿತಿ ತಿಳಿದು ಬಂದಿಲ್ಲ.

ಇದನ್ನೂ ಓದಿ: Ileana D’Cruz: ಗಂಡು ಮಗುವಿಗೆ ತಾಯಿಯಾದ ಇಲಿಯಾನಾ ಡಿಕ್ರೂಸ್;‌ ಮುದ್ದಾದ ಫೋಟೊ, ಹೆಸರು ರಿವೀಲ್‌

ಮಗನ ಹೆಸರ ಅರ್ಥವೇನು?

ಅವರು ಮಗನ ಫೋಟೊ ಹಾಗೂ ಹೆಸರು ರಿವೀಲ್‌ ಮಾಡುತ್ತಲೇ ಆ ಹೆಸರಿನ ಅರ್ಥ ಹುಡುಕಲಾಗಿದೆ. Bump.com ಪ್ರಕಾರ ಕೋವಾ ಎಂದರೆ ಯೋಧ ಅಥವಾ ಧೀರ ಎಂಬ ಅರ್ಥ ಇದೆ. ಇನ್ನು ಮಗನ ಫೋಟೊವನ್ನು ಅವರು ಪೋಸ್ಟ್‌ ಮಾಡುತ್ತಲೇ ಬಾಲಿವುಡ್‌ ಗಣ್ಯರು ಶುಭಕೋರಿದ್ದಾರೆ. “ಓಹ್‌ ಮೈ ಗಾಡ್.‌ ಕಂಗ್ರ್ಯಾಟ್ಸ್”‌ ಎಂದು ನಟಿ ಹುಮಾ ಖುರೇಷಿ ಕಮೆಂಟ್‌ ಮಾಡಿದ್ದಾರೆ. ಸುನೀಲ್‌ ಶೆಟ್ಟಿ ಪುತ್ರಿ, ಕೆ.ಎಲ್.ರಾಹುಲ್‌ ಪತ್ನಿ ಅಥಿಯಾ ಶೆಟ್ಟಿ ಕೂಡ ಶುಭ ಕೋರಿದ್ದಾರೆ.

ಇಲಿಯಾನಾ ಅವರಿಗೆ ಅವರ ಅಭಿಮಾನಿಗಳು ಕೂಡ ಶುಭಾಶಯ ತಿಳಿಸಿದ್ದಾರೆ. “ಕಂಗ್ರ್ಯಾಜುಲೇಷನ್ಸ್‌ ಇಲಿಯಾನಾ. ಮಗು ತುಂಬ ಮುದ್ದಾಗಿದೆ” ಎಂದು ಅಭಿಮಾನಿಯೊಬ್ಬರು ಕಮೆಂಟ್‌ ಮಾಡಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನಟಿಗೆ ಅಭಿನಂದನೆ ತಿಳಿಸಿದ್ದಾರೆ. ಇಲಿಯಾ ಡಿಕ್ರೂಸ್‌ ಅವರು ತಾವು ಗರ್ಭಿಣಿಯಾದ ಕುರಿತು ಕಳೆದ ಏಪ್ರಿಲ್‌ 18ರಂದು ಪೋಸ್ಟ್‌ ಮೂಲಕ ತಿಳಿಸಿದ್ದಾರೆ. ಅವರ ಬೇಬಿ ಬಂಪ್‌ ಫೋಟೊಗಳು ಕೂಡ ವೈರಲ್‌ ಆಗಿದ್ದವು.

Exit mobile version