Site icon Vistara News

IMDb 2023 Movies | 2023ರ IMDb ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ ಬಿಡುಗಡೆ: ಕನ್ನಡದ ಏಕೈಕ ಚಿತ್ರ ಯಾವುದು?

IMDb 2023 Movies

ಬೆಂಗಳೂರು : 2022ರಲ್ಲಿ ಕೆಜಿಎಫ್‌, ಕಾಂತಾರ, ವಿಕ್ರಾಂತ್‌ ರೋಣ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಕಂಡಿದ್ದವು. ಇದೀಗ 2023ರಲ್ಲಿ ಐಎಮ್‌ಡಿಬಿ (IMDb 2023 Movies ) ಬಹು ನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಕನ್ನಡದಿಂದ ಕಬ್ಜ ಮಾತ್ರ ಸೇರಿಕೊಂಡಿದೆ.

ಏನಿದು IMDb?
ಇಂಟರ್ನೆಟ್ ಮೂವಿ ಡೇಟಾಬೇಸ್ (IMDb) – ಇದು ಚಲನಚಿತ್ರಗಳು, ಟಿವಿ ಶೋಗಳು, ವಿಡಿಯೋ ಗೇಮ್‌ಗಳು, ನಟರು, ನಿರ್ದೇಶಕರು ಮತ್ತು ಇತರ ಚಲನಚಿತ್ರ ಉದ್ಯಮದ ವೃತ್ತಿಪರರ ಬಗ್ಗೆ ಮಾಹಿತಿ ಮತ್ತು ಅಂಕಿ ಅಂಶಗಳನ್ನು ಒಳಗೊಂಡಿರುವ ಆನ್‌ಲೈನ್ ಡೇಟಾಬೇಸ್ ಆಗಿದೆ.

ಪ್ರತಿಷ್ಠಿತ IMDb ಸಂಸ್ಥೆ 2023ರಲ್ಲಿ ಸದ್ದು ಮಾಡುತ್ತಿರುವ ಸಿನಿಮಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸುಮಾರು 20 ಸಿನಿಮಾಗಳಲ್ಲಿ ಕನ್ನಡದ ಏಕೈಕ ಸಿನಿಮಾ ಕಬ್ಜ ಸ್ಥಾನ ಪಡೆದುಕೊಂಡಿದೆ. ಇನ್ನು ಉಳಿದಂತೆ ಬಹುಪಾಲು ಬಾಲಿವುಡ್‌ ಸಿನಿಮಾಗಳೇ ಇವೆ. ಇದರಲ್ಲಿ ಮೊದಲ ಸ್ಥಾನದಲ್ಲಿ ಶಾರುಖ್ ಖಾನ್ ಅಭಿನಯದ ‘ಪಠಾಣ್’. ಉಪೇಂದ್ರ ಹಾಗೂ ಸುದೀಪ್ ಅಭಿನಯದ ‘ಕಬ್ಜ’ 7ನೇ ಸ್ಥಾನದಲ್ಲಿದೆ.

ಇದನ್ನೂ ಓದಿ | IMDb top 10 films | IMDb ಪಟ್ಟಿ ಬಿಡುಗಡೆ : ಕಾಂತಾರ ಸಿನಿಮಾಗೆ ಎಷ್ಟನೇ ಸ್ಥಾನ?

  1. ಪಠಾಣ್‌
  2. ಪುಷ್ಪ- 2
  3. ಜವಾನ್
  4. ಆದಿಪುರುಷ್
  5. ಸಲಾರ್
  6. ವಾರಿಸು
  7. ಕಬ್ಜ
  8. ದಳಪತಿ 67
  9. ದಿ ಆರ್ಚಿಸ್
  10. ಡಂಕಿ

11 ಬಾಲಿವುಡ್‌ ಸಿನಿಮಾಗಳಿದ್ದು, 5 ತಮಿಳು, 3 ತೆಲುಗು ಹಾಗೂ 1 ಕನ್ನಡ ಸಿನಿಮಾವಿದೆ. ನಾಲ್ಕು ವರ್ಷಗಳ ಬಳಿಕ ಸೂಪರ್ ಸ್ಟಾರ್ ಶಾರುಖ್‌ ಖಾನ್‌ ನಟನೆಯ ‘ಪಠಾಣ್‌’, ‘ಜವಾನ್’ ಮತ್ತು ‘ಡಂಕಿ’ ಸಿನಿಮಾಗಳು ಸದ್ದು ಮಾಡುತ್ತಿವೆ. ಹಾಗೇ ಶಾರುಖ್‌ ಖಾನ್ ಪುತ್ರಿ ಸುಹಾನಾ ಖಾನ್‌ ನಟನೆಯ ಮೊದಲ ಸಿನಿಮಾ ಜೋಯಾ ಅಖ್ತರ್ ನಿರ್ದೇಶನದ ‘ದಿ ಆರ್ಚಿಸ್‌’ ಕೂಡ ಪಟ್ಟಿಯಲ್ಲಿದೆ.

ಶಾರುಖ್‌ ಖಾನ್‌-ದೀಪಿಕಾ ಪಡುಕೋಣೆ ಜೋಡಿಯ ಪಠಾಣ್‌ ಸಿನಿಮಾ (Pathaan Film) ಟ್ರೈಲರ್‌ ಜನವರಿ 10ರಂದು ಬಿಡುಗಡೆಗೊಳ್ಳುತ್ತಿದೆ. ಚಿತ್ರತಂಡ ಅಧಿಕೃತ ಪೋಸ್ಟ್‌ ಮೂಲಕ ಮಾಹಿತಿ ಹಂಚಿಕೊಂಡಿದೆ. ಜನವರಿ 10 ಬೆಳಗ್ಗೆ 11 ಗಂಟೆಗೆ ಪಠಾಣ್‌ ಟ್ರೈಲರ್ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಇದನ್ನೂ ಓದಿ | IMDb top 10 films | ಜನಪ್ರಿಯ ಭಾರತೀಯ ಫಿಲಂಗಳ ರೇಟಿಂಗ್: ಮೊದಲ ಸ್ಥಾನದಲ್ಲಿ ಯಾವ ಸಿನಿಮಾ?

Exit mobile version