Site icon Vistara News

IMDb top 10 films | IMDb ಪಟ್ಟಿ ಬಿಡುಗಡೆ : ಕಾಂತಾರ ಸಿನಿಮಾಗೆ ಎಷ್ಟನೇ ಸ್ಥಾನ?

IMDb top 10 films

ಬೆಂಗಳೂರು : IMDb ತನ್ನ 2022ರ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳ ಪಟ್ಟಿ (IMDb top 10 films ) ಬಿಡುಗಡೆ ಮಾಡಿದೆ. ಜೂನಿಯರ್ NTR, ರಾಮ್ ಚರಣ್, ಆಲಿಯಾ ಭಟ್ ಮತ್ತು ಅಜಯ್ ದೇವಗನ್ ನಟಿಸಿರುವ SS ರಾಜಮೌಳಿ ಅವರ ʻRRRʼ ಸಿನಿಮಾ ಮೊದಲ ಸ್ಥಾನ ಪಡೆದುಕೊಂಡಿದೆ.

ಏನಿದು IMDb?
ಇಂಟರ್ನೆಟ್ ಮೂವಿ ಡೇಟಾಬೇಸ್ (IMDb) – ಇದು ಚಲನಚಿತ್ರಗಳು, ಟಿವಿ ಶೋಗಳು, ವಿಡಿಯೋ ಗೇಮ್‌ಗಳು, ನಟರು, ನಿರ್ದೇಶಕರು ಮತ್ತು ಇತರ ಚಲನಚಿತ್ರ ಉದ್ಯಮದ ವೃತ್ತಿಪರರ ಬಗ್ಗೆ ಮಾಹಿತಿ ಮತ್ತು ಅಂಕಿ ಅಂಶಗಳನ್ನು ಒಳಗೊಂಡಿರುವ ಆನ್‌ಲೈನ್ ಡೇಟಾಬೇಸ್ ಆಗಿದೆ. IMDb ಇದುವರೆಗಿನ ವರ್ಷದ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳ ಪಟ್ಟಿಯನ್ನು (IMDb top 10 films) ಬಿಡುಗಡೆ ಮಾಡಿದೆ.

ಆರ್‌ಆರ್‌ಆರ್‌ ಸಿನಿಮಾ ಮೊದಲ ಸ್ಥಾನದಲ್ಲಿದ್ದರೆ, ವಿವೇಕ್ ಅಗ್ನಿಹೋತ್ರಿ ಅವರ ʻದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾ ಎರಡನೇ ಸ್ಥಾನದಲ್ಲಿದೆ. ರಾಕಿಂಗ್‌ ಸ್ಟಾರ್‌ ಯಶ್‌, ಸಂಜಯ್ ದತ್ ಮತ್ತು ರವೀನಾ ಟಂಡನ್ ಅಭಿನಯದ ಪ್ರಶಾಂತ್ ನೀಲ್ ಅವರ ʻಕೆಜಿಎಫ್-2ʼ ಮೂರನೇ ಸ್ಥಾನದಲ್ಲಿದೆ. ಲೋಕೇಶ್ ಕನಕರಾಜ್ ಅವರ ಆಕ್ಷನ್ ಥ್ರಿಲ್ಲರ್ ಸಿನಿಮಾ ʻವಿಕ್ರಮ್ʼ, ನಾಲ್ಕನೇ ಸ್ಥಾನದಲ್ಲಿದೆ. ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ʻಕಾಂತಾರʼ 5ನೇ ಸ್ಥಾನವನ್ನು ಪಡೆದುಕೊಂಡಿದೆ.

ಇದನ್ನೂ ಓದಿ | Anurag Kashyap | ಕಾಂತಾರ, ಪುಷ್ಪದಂತಹ ಸಿನಿಮಾಗಳಿಂದ ಬಾಲಿವುಡ್‌ ನಾಶ, ವಿವಾದ ಸೃಷ್ಟಿಸಿದ ನಿರ್ದೇಶಕ ಅನುರಾಗ್‌ ಕಶ್ಯಪ್

ಆರ್‌ ಮಾಧವನ್‌ ನಿರ್ದೇಶಿಸಿ ನಟಿಸಿರುವ ‘ರಾಕೆಟ್ರಿ’ (Rocketry: The Nambi Effect) ಸಿನಿಮಾ 6ನೇ ಸ್ಥಾನದಲ್ಲಿದೆ. ಮುಂಬಯಿ ಉಗ್ರ ದಾಳಿಯಲ್ಲಿ ಹುತಾತ್ಮರಾದ ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಅವರ ಕತೆಯನ್ನು ಆಧರಿಸಿದ ʼಮೇಜರ್‌ʼ ಸಿನಿಮಾ ಏಳನೇ ಸ್ಥಾನದಲ್ಲಿದೆ. ಮಲಯಾಳಂ ಖ್ಯಾತ ನಟ ದುಲ್ಕರ್ ಸಲ್ಮಾನ್ ಅಭಿನಯದ ʻಸೀತಾ ರಾಮಂʼ ಸಿನಿಮಾ 8 ನೇ ಸ್ಥಾನದಲ್ಲಿದೆ.

ಮಣಿರತ್ನಂ ನಿರ್ದೇಶನದ ಐತಿಹಾಸಿಕ ಚಿತ್ರ ʻಪೊನ್ನಿಯನ್ ಸೆಲ್ವನ್ ಭಾಗ-1 ಸಿನಿಮಾ 9ನೇ ಸ್ಥಾನವನ್ನು ಪಡೆದಿದೆ. ಪಟ್ಟಿಯಲ್ಲಿ 10 ನೇ ಸ್ಥಾನವನ್ನು ಕಿರಣರಾಜ್ ಕೆ ಅವರ ನಿರ್ದೇಶನ, ರಕ್ಷಿತ್‌ ಶೆಟ್ಟಿ ಅಭಿನಯದ 777 ಚಾರ್ಲಿ ಪಡೆದುಕೊಂಡಿದೆ.

ಇದನ್ನೂ ಓದಿ | Shahrukh Khan | ಶುರುವಾಯ್ತು ಬಾಯ್ಕಾಟ್‌ ಅಭಿಯಾನ: ʻಪಠಾಣ್‌ʼ ಸಿನಿಮಾ ವಿರುದ್ಧ ನೆಟ್ಟಿಗರ ಆಕ್ರೋಶ, ಏನಿದು ವಿವಾದ?

Exit mobile version