ಮುಂಬೈ: ಶಾರುಖ್ ಖಾನ್ (Shah Rukh Khan), ದೀಪಿಕಾ ಪಡುಕೋಣೆ (Deepika Padukone), ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ (Ranbir Kapoor) ಮುಂಬೈನ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನಲ್ಲಿ 141ನೇ (IOC Session 2023) ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ (Nita Mukesh Ambani Cultural Centre) ಭಾಗವಹಿಸಿದ್ದರು. ಇವೆಂಟ್ ವೀಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಶಾರುಖ್ ಖಾನ್ ಪಕ್ಕ ದೀಪಿಕಾ ಪಡುಕೋಣೆ ಕುಳಿತಿದ್ದರೆ, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ಹಿಂದೆ ಕುಳಿತಿದ್ದರು. ನಾಲ್ವರು ಒಟ್ಟಿಗೆ ಇರುವ ಫೋಟೊ ವೈರಲ್ ಆಗಿದ್ದು, ಚಿತ್ರದಲ್ಲಿ ಆಲಿಯಾ ಭಟ್ ನಿದ್ರೆ ಮಾಡುವಂತೆ ಕಂಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇವೆಂಟ್‌ಗಳ ಚಿತ್ರವೊಂದರಲ್ಲಿ, ಕಪ್ಪು ಬಣ್ಣದ ಸೂಟ್‌ನಲ್ಲಿ ಶಾರುಖ್ ಖಾನ್ ಕಂಡರೆ ದೀಪಿಕಾ ಅವರೊಂದಿಗೆ ಚಾಟ್ ಮಾಡಿದ್ದಾರೆ. ಆಲಿಯಾ ಭಟ್ ಮತ್ತು ರಣಬೀರ್ ಇಬ್ಬರೂ ಎಥ್ನಿಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ದೀಪಿಕಾ ಮತ್ತು ಶಾರುಖ್ ಅವರೊಂದಿಗೆ ಫೋಟೊದಲ್ಲಿ ಸೆರೆಹಿಡಿಯಲಾಗಿದೆ. ಆದರೆ ಫೋಟೊದಲ್ಲಿ ಹೈಲೈಟ್ ಆಗಿದ್ದು ಮಾತ್ರ ಆಲಿಯಾ. ಆಲಿಯಾ ಭಟ್ ನಿದ್ರೆ ಮಾಡಿರುವಂತೆ ಕಂಡಿದ್ದಾರೆ. ಈ ಫೋಟೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಮೂಲಕ ಬೇಸರ ಹೊರಹಾಕಿದ್ದಾರೆ. ʻʻಆಲಿಯಾ ಅಕ್ಷರಶಃ ನಿದ್ರಿಸುತ್ತಿದ್ದಾರೆ. ಆದರೆ ಅವರದ್ದು ತಪ್ಪಲ್ಲʼʼಎಂದು ಕಮೆಂಟ್ ಮಾಡಿದ್ದಾರೆ. “ಆಲಿಯಾ ತನಗೆ ಅರಿವಲ್ಲದೇ ಹೇಗೆ ಮಲಗಿದ್ದಾಳೆ. ರಣಬೀರ್ ಫೋನ್‌ನಲ್ಲಿ ಕಳೆದು ಹೊಂದಂತಿದೆʼʼಎಂದು ಕಮೆಂಟ್ ಮಾಡಿದ್ದಾರೆ. ʻʻಶಾರುಖ್ ಪೂರ್ಣ ಗಮನವನ್ನು ನೀಡುವಂತೆ ನಟಿಸಿದ್ದಾರೆ. ಆದರೆ ಅವರ ಮನಸ್ಸು ಬೇರೆಡೆ ಅಲೆದಾಡುತ್ತಿದೆ, ಆದರೆ ದೀಪಿಕಾ ಗಂಭೀರವಾಗಿದ್ದಾರೆʼʼಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: IOC Session 2023: ಭಾರತದಲ್ಲಿಯೇ 2036ರ ಒಲಿಂಪಿಕ್ಸ್ ಖಚಿತ; ಮೋದಿ ಮಹತ್ವದ ಘೋಷಣೆ!
ವೈರಲ್ ವಿಡಿಯೊ
[Video-2] Deepika Padukone and Shah Rukh Khan at the inauguration of the 141st International Olympic Committee Session pic.twitter.com/BJmZ9WMTRY
— Deepika Padukone FC (@DeepikaPFC) October 14, 2023
ಮುಂಬೈನಲ್ಲಿ ನಡೆದ 141ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧಿವೇಶನ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಐಒಸಿ ಅಧಿವೇಶನವು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸರ್ವೋಚ್ಚ ಸಂಸ್ಥೆಯಾಗಿದೆ. ಇದು ಒಲಿಂಪಿಕ್ ಚಾರ್ಟರ್ ಅನ್ನು ಅಳವಡಿಸಿಕೊಳ್ಳುವುದು ಅಥವಾ ಪರಿಷ್ಕರಿಸುವುದು, ಐಒಸಿ ಸದಸ್ಯರು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡುವುದು ಹಾಗೂ ಒಲಿಂಪಿಕ್ಸ್‌ನ ಆತಿಥೇಯ ನಗರವನ್ನು ಆಯ್ಕೆ ಮಾಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹೊಂದಿರುತ್ತದೆ.