Site icon Vistara News

Independence Day | ಸ್ಯಾಂಡಲ್‌ವುಡ್‌ ಟ್ರಿಬ್ಯೂಟ್ ವಿಡಿಯೊ ಸಾಂಗ್‌ ಔಟ್‌: ಇದು ಒಗ್ಗಟ್ಟಿನ ವಂದೇ ಮಾತರಂ!

Amrit Mahotsav

ಬೆಂಗಳೂರು: 75ನೇ ಸ್ವಾತಂತ್ರ್ಯ ದಿನಾಚರಣೆಯ (Independence Day) ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್‌ ಒಗ್ಗಟ್ಟಿನ ʻವಂದೇ ಮಾತರಂʼ ಗೀತೆಯ ಹಾಡು ಬಿಡುಗಡೆಗೊಂಡಿದೆ. ಈ ಹಾಡಿನಲ್ಲಿ ಸ್ಯಾಂಡಲ್‌ವುಡ್‌ ನಟರು ಅಭಿನಯಿಸಿದ್ದು, ಕನ್ನಡ ಚಿತ್ರರಂಗದ ದೇಶಭಕ್ತಿಯ ಮಂತ್ರವಾಗಿದೆ.

ಗಾಯಕ ವಿಜಯ್ ಪ್ರಕಾಶ್ ಧ್ವನಿಯಲ್ಲಿ ಹಾಡು ಮೂಡಿಬಂದಿದ್ದು, ಸ್ವಾತಂತ್ರ್ಯ ಹೋರಾಟಗಾರರಿಗೆ ವಿಡಿಯೊ ಅರ್ಪಣೆ ಮಾಡಲಾಗಿದೆ. ನಟ ಅನಂತ್‌ ನಾಗ್‌, ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌, ಕ್ರೇಜಿ ಸ್ಟಾರ್‌ ರವಿಚಂದ್ರನ್, ಕಿಚ್ಚ ಸುದೀಪ್‌, ನವರಸ ನಾಯಕ ಜಗ್ಗೇಶ್, ರಮೇಶ್ ಅರವಿಂದ್, ಅರ್ಜುನ್ ಸರ್ಜಾ, ಗೋಲ್ಡನ್‌ ಸ್ಟಾರ್‌ ಗಣೇಶ್ ಹಾಗೂ ಡಾಲಿ ಧನಂಜಯ್‌, ರಿಷಬ್‌ ಶೆಟ್ಟಿ ಮತ್ತು ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ. ಜತೆಗೆ ಖ್ಯಾತ ಸಾಹಿತಿ ಎಸ್‌.ಎಲ್. ಭೈರಪ್ಪ‌, ಖ್ಯಾತ ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್‌, ಸಾಲುಮರದ ತಿಮ್ಮಕ್ಕ , ಜೋಗತಿ ಮಂಜಮ್ಮ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ | Amrit Mahotsav | ವಂದೇ ಮಾತರಂ ಗೀತೆ ಚಿತ್ರೀಕರಣ ಪೂರ್ಣ; ಸ್ಯಾಂಡಲ್‌ವುಡ್‌ ನಟರು ಭಾಗಿ

ಸಂತೋಷ್‌ ಆನಂದ್ ರಾಮ್ ʻವಂದೇ ಮಾತರಂʼ ಹಾಡಿಗೆ ನಿರ್ದೇಶನ ಮಾಡಿದ್ದು, ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಹಾಡಿನ ಚಿತ್ರೀಕರಣ ನೆರವೇರಿದೆ. ಅಂದಾಜು ಏಳು ಲಕ್ಷ ರೂಪಾಯಿಯಲ್ಲಿ ಹಾಡಿನ ಚಿತ್ರೀಕರಣವಾಗಿದೆ ಎನ್ನಲಾಗಿದೆ. ʻಹರ್ ಘರ್ ತಿರಂಗಾʼ ಅಭಿಯಾನದ ಹಿನ್ನೆಲೆಯಲ್ಲಿ, ಖ್ಯಾತ ನಟರಿಂದ ರಾಷ್ಟ್ರಧ್ವಜಕ್ಕೆ ಗೌರವ ನೀಡುವ ಹಾಡಿನ ಚಿತ್ರೀಕರಣ ಇದಾಗಿದೆ.

ಇದನ್ನೂ ಓದಿ | Video: ವಂದೇ ಮಾತರಂ ಹಾಡುವಾಗ ಎದ್ದು ನಿಲ್ಲದ ಶಾಸಕ ಸೌದ್‌ ಆಲಂ; ಅದು ಹಿಂದುಗಳ ಗೀತೆಯಂತೆ !

Exit mobile version