ಬೆಂಗಳೂರು: ಮಲೈಕಾದಿಂದ ಹಿಡಿದು ಸನ್ನಿ ಲಿಯೋನ್‌ವರೆಗೆ (India Highest Paid Item Girl ) ಅನೇಕ ನಟಿಯರು ಚಿತ್ರಗಳಲ್ಲಿ ಐಟಂ ಹಾಡುಗಳನ್ನು ಮಾಡಿದ್ದಾರೆ. 4ರಿಂದ 5 ನಿಮಿಷದ ಹಾಡಿಗೆ ಹೆಜ್ಜೆ ಹಾಕುವುದಕ್ಕೆ ಕೋಟಿಗಟ್ಟಲೆ ಸಂಭಾವನೆ ಪಡೆದ ಅನೇಕ ಹೀರೋಯಿನ್ಗಳು ಇದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಐಟಂ ಸಾಂಗ್‌ಗಳು ಸಿನಿಮಾದಲ್ಲಿ ವಿಶೇಷ ಸ್ಥಾನ ಪಡೆದುಕೊಳ್ಳುತ್ತಿವೆ. ಈ ಹಿಂದೆ ಕೆಲವೇ ಕೆಲವು ನಟಿಯರು ಮಾತ್ರ ಅದರಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಟಾಪ್ ನಟಿಯರೂ ಈ ರೀತಿಯ ಹಾಡಿಗೆ ಹೆಜ್ಜೆ ಹಾಕುತ್ತಾರೆ. ಐಟಂ ಸಾಂಗ್‌ಗಳನ್ನು ಮಾಡಲು ಹೀರೋಗಿಂತ ಹೆಚ್ಚಿನ ಸಂಭಾವನೆ ಪಡೆದ ಉದಾಹರಣೆ ಸಾಕಷ್ಟಿದೆ.
ಐಟಂ ಸಾಂಗ್‌ಗೆ ಹೆಜ್ಜೆ ಹಾಕುವವರ ಸಂಭಾವನೆ ಗಗನಕ್ಕೇರಿದೆ. ಈ ಒಬ್ಬ ‘ಐಟಂ ಗರ್ಲ್’ ಈಗ ಅನೇಕ ನಾಯಕ ನಟಿಯರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಪುಷ್ಪಾ ದಿ ರೈಸ್ ಸಿನಿಮಾದ ಊ ಅಂಟವಾ ಹಾಡಿಗೆ ಚಿತ್ರದಲ್ಲಿ ಐದು ನಿಮಿಷಗಳ ಕಾಲ ಕಾಣಿಸಿಕೊಂಡಿದ್ದಕ್ಕಾಗಿ ದಕ್ಷಿಣದ ಸೂಪರ್‌ಸ್ಟಾರ್ ಸಮಂತಾ ರುತ್ ಪ್ರಭು 5 ಕೋಟಿ ರೂ. ಸಂಭಾವನೆ ಪಡೆದುಕೊಂಡರು. ಭಾರತೀಯ ಚಿತ್ರರಂಗದ ಯಾವ ನಟಿಯರೂ ಈ ರೀತಿ ಹಣ ಗಳಿಕೆ ಮಾಡಿಲ್ಲ. ಐಟಂ ಸಾಂಗ್‌ಗಳಿಗಾಗಿ ಹೆಚ್ಚು ಸಂಭಾವನೆ ಪಡೆಯುವ ಇತರ ನಟಿಯರೆಂದರೆ ನೋರಾ ಫತೇಹಿ ಮತ್ತು ಸನ್ನಿ ಲಿಯೋನ್. ಇಬ್ಬರೂ ಪ್ರತಿ ಹಾಡಿಗೆ 2 ಕೋಟಿ ರೂ ಪಡೆದುಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್ ಐಟಂ ಸಾಂಗ್‌ಗಳ ರಾಣಿ ಮಲೈಕಾ ಅರೋರಾ ಇಂದು 50 ಲಕ್ಷದಿಂದ 1 ಕೋಟಿ ರೂ. ಚಾರ್ಚ್ ಮಾಡುತ್ತಾರೆ.
ವಿಚಿತ್ರವೆಂದರೆ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರು ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಕಡಿಮೆ ಸಂಭಾವನೆ ಪಡೆದುಕೊಂಡಿದ್ದಾರೆ. ಪುಷ್ಪಾ ದಿ ರೈಸ್ ಚಿತ್ರದಲ್ಲಿ ಶ್ರೀವಲ್ಲಿ ಪಾತ್ರಕ್ಕಾಗಿ ರಶ್ಮಿಕಾ ಕೇವಲ 2 ಕೋಟಿ ರೂ. ಸಂಭಾವನೆ ಪಡೆದರೆ, ಜಾನ್ವಿ ಕಪೂರ್, ತಮನ್ನಾ ಭಾಟಿಯಾ ಮತ್ತು ಪೂಜಾ ಹೆಗ್ಡೆಯಂತಹ ಇತರ ಜನಪ್ರಿಯ ನಟಿಯರೆಲ್ಲರೂ ಪ್ರತಿ ಚಿತ್ರಕ್ಕೆ 5 ಕೋಟಿ ರೂ.ಗಿಂತ ಕಡಿಮೆ ಸಂಭಾವನೆ ಪಡೆಯುತ್ತಾರೆ ಕೇವಲ ಒಂದು ಹಾಡಿಗೆ ಸಮಂತಾ ಗಳಿಸಿದ ಗಳಿಸಿದ್ದು ಬರೋಬ್ಬರಿ 5 ಕೋಟಿ ರೂ.
ಇದನ್ನೂ ಓದಿ: Kannada New Movie: ಶಶಿಕುಮಾರ್ ಪುತ್ರನ ‘ಕಾದಾಡಿ’ ಸಿನಿಮಾದ ಲಿರಿಕಲ್ ಸಾಂಗ್ ಔಟ್!
ಕರೀನಾ ಕಪೂರ್ ಐಟಂ ಡ್ಯಾನ್ಸ್ಗೆ 1.5 ಕೋಟಿ ರೂಪಾಯಿ ಪಡೆಯುತ್ತಾರೆ. ತಮನ್ನಾ ಭಾಟಿಯಾ ಒಂದು ಹಾಡಿಗೆ ರೂ. 1 ಕೋಟಿ ರೂ., ಕತ್ರಿನಾ ಕೈಫ್ ವಿಶೇಷ ಸಾಂಗ್ನಲ್ಲಿ ಕಾಣಿಸಿಕೊಳ್ಳಲು 2 ಕೋಟಿ ರೂಪಾಯಿ ಪಡೆಯುತ್ತಾರೆ. ಸಮಂತಾ ಆರಂಭದಲ್ಲಿ ಐಟಂ ಸಾಂಗ್ ಮಾಡಲು ಹಿಂಜರಿದಿದ್ದರು. ನಂತರ ಒಪ್ಪಿ ಖುಷಿಯಿಂದ ಡ್ಯಾನ್ಸ್ ಮಾಡಿದರು ಎಂದು ವರದಿಯಾಗಿದೆ.