Site icon Vistara News

Shah Rukh Khan: ಶಾರುಖ್‌ ಇದೀಗ ʻಅಮುಲ್‌ ಬೇಬಿʼ; ಪೋಸ್ಟ್‌ ವೈರಲ್‌!

Indian dairy brand Amul Shah Rukh Khan Jawan

ಬೆಂಗಳೂರು: ಶಾರುಖ್ ಖಾನ್ (Shah Rukh Khan) ಅಭಿನಯದ ‘ಜವಾನ್’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಲೇ ಇದೆ. ಭಾರತದಲ್ಲೇ 600 ಕೋಟಿ ರೂ. ಗಳಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿತ್ರ ಬಿಡುಗಡೆಯಾದ ಮೂರನೇ ವಾರದಲ್ಲಿಯೇ 1000 ಕೋಟಿ ರೂ. ಗಡಿ ದಾಟಿದೆ. ಇದೀಗ ಭಾರತೀಯ ಡೈರಿ ಬ್ರ್ಯಾಂಡ್‌ ʻಅಮುಲ್ʼ (Dairy brand Amul ) ಸಿನಿಮಾದ ಯಶಸ್ಸಿಗೆ ಪೋಸ್ಟರ್‌ ಮೂಲಕ ಗೌರವ ಸಲ್ಲಿಸಿದೆ. ಅಮುಲ್ ಇಂಡಿಯಾ ಡೆಲಿಷಿಯಸ್ ಪೋಸ್ಟ್‌ ಸಖತ್‌ ವೈರಲ್‌ ಆಗುತ್ತಿದ್ದು, ಅಮುಲ್ ಅಟ್ಲಿ ಬಟರ್ಲಿ ಡೆಲಿಷಿಯಸ್ (Atlee Butterly Delicious) ಎಂದು ಪೋಸ್ಟ್ ಮಾಡಿದೆ. ಇದರಲ್ಲಿ ಶಾರುಖ್​ ಅಮುಲ್​ ಬೇಬಿಯಾಗಿ ಮಿಂಚಿದ್ದಾರೆ.

ಶಾರುಖ್ ಖಾನ್ ಚಿತ್ರದಲ್ಲಿ ಅಮುಲ್‌ ಬೇಬಿಯಾಗಿ ಅರ್ಧ-ಮಾಸ್ಕ್ ಲುಕ್ ಜತೆಗೆ ಬೆಣ್ಣೆಯೊಂದಿಗೆ ಬ್ರೆಡ್ ಸ್ಲೈಸ್ ಹಿಡಿದು ಪೋಸ್‌ ಕೊಟ್ಟಿದ್ದಾರೆ. ಶಾರುಖ್ ಖಾನ್ ಅವರ ಮ್ಯಾನೇಜರ್, ಪೂಜಾ ದದ್ಲಾನಿ, ಇನ್‌ಸ್ಟಾದಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ,. “ಅದ್ಭುತ” ಕಲಾಕೃತಿಗಾಗಿ ಅಮುಲ್ ಇಂಡಿಯಾಕ್ಕೆ ಧನ್ಯವಾದ ಸೂಚಿಸಿದ್ದಾರೆ. ಅಮುಲ್ ಸಿನಿಮೀಯ ಯಶಸ್ಸನ್ನು ಹಲವು ಬಾರಿ ಈ ರಿತಿ ಕ್ರಿಯೇಟಿವ್‌ಆಗಿ ಆಚರಿಸಿಕೊಂಡಿದೆ. ಈ ಹಿಂದೆ, ರಜನಿಕಾಂತ್ ಅವರ “ಜೈಲರ್” ಚಿತ್ರಕ್ಕಾಗಿ ವಿಶೇಷ ಪೋಸ್ಟರ್ ರಚಿಸಿದ್ದರು. ಪೋಸ್ಟರ್‌ನಲ್ಲಿ ರಜನಿಕಾಂತ್ ಮತ್ತು ತಮನ್ನಾ ಭಾಟಿಯಾ ಅವರ ಕಾರ್ಟೂನ್ ಆವೃತ್ತಿಗಳನ್ನು ರಚಿಸಲಾಗಿತ್ತು.

ಇದನ್ನೂ ಓದಿ: Shah Rukh Khan: ಕೇವಲ ಸ್ಮಾರ್ಟ್‌ ಫೋನ್‌ ಬಳಸಿ ʻಜವಾನ್‌ʼ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್; ಶಾರುಖ್‌ ಫಿದಾ!

ಕೇವಲ 18 ದಿನಗಳಲ್ಲಿ 1,000 ಕೋಟಿ ಬಾಚಿದ ಜವಾನ್‌!

ಈ ವರ್ಷದ ಆರಂಭದಲ್ಲಿ, ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿದ ಪಠಾಣ್‌, ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂ. ಗಳಿಸಿತ್ತು. ಪಠಾಣ್‌ ಸಿನಿಮಾ ಜನವರಿ 25ರಂದು ಬಿಡುಗಡೆಯಾಗಿತ್ತು. ನಾಲ್ಕು ವಾರಗಳ ಬಳಿಕ ಅಂದರೆ ಫೆಬ್ರವರಿ 21 ರಂದು ವಿಶ್ವಾದ್ಯಂತ 1000 ಕೋಟಿ ರೂ. ಗಡಿ ದಾಟಿತು. ಈ ಸಿನಿಮಾಗೆ ಹೋಲಿಸಿದರೆ, ಜವಾನ್ ಕೇವಲ 18 ದಿನಗಳಲ್ಲಿ 1,000 ಕೋಟಿ ರೂ. ಗಡಿ ದಾಟಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಜವಾನ್‌ ಸೆಪ್ಟೆಂಬರ್ 7ರಂದು ಬಿಡುಗಡೆಯಾಗಿತ್ತು.

ಜವಾನ್ ತನ್ನ ಮೂರನೇ ವಾರಾಂತ್ಯದಲ್ಲಿ ಗಳಿಕೆಯಲ್ಲಿ ಮತ್ತಷ್ಟು ಏರಿಕೆ ಕಂಡಿದೆ. ಸೆ. 24ರಂದು ವಿಶ್ವಾದ್ಯಂತ ಒಟ್ಟು ಕಲೆಕ್ಷನ್ 979.08 ಕೋಟಿಯಾಗಿದೆ. ಸೆ. 25ರಂದು 25.84 ಕೋಟಿ ರೂ. ಗಳಿಸಿತ್ತು. ಇದೀಗ ಇಲ್ಲಿಯವರೆಗೆ 1,004 ಕೋಟಿ ರೂ,ಗಿಂತ ಹೆಚ್ಚು ವಿಶ್ವಾದ್ಯಂತ ಗಳಿಸಿದೆ. ವರದಿಯ ಪ್ರಕಾರ, ಜವಾನ್ ತನ್ನ ಮೂರನೇ ಭಾನುವಾರ ಭಾರತದಲ್ಲಿ 14.95 ಕೋಟಿ ರೂ. ಸಂಗ್ರಹಿಸಿದೆ. ಮೊದಲ ದಿನದಂದು ಎಲ್ಲಾ ಭಾಷೆಗಳಲ್ಲಿ ಭಾರತದಲ್ಲಿ 75 ಕೋಟಿ ರೂ. ಗಳಿಕೆ ಕಂಡಿತ್ತು.

ಶಾರುಖ್ ಖಾನ್, ನಯನತಾರಾ ಮತ್ತು ವಿಜಯ್ ಸೇತುಪತಿ ಅವರಲ್ಲದೆ, ಜವಾನ್ ಚಿತ್ರದಲ್ಲಿ ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ, ರಿಧಿ ಡೋಗ್ರಾ, ಲೆಹರ್ ಖಾನ್, ಗಿರಿಜಾ ಓಕ್ ಮತ್ತು ಸಂಜೀತಾ ಭಟ್ಟಾಚಾರ್ಯ ಕೂಡ ನಟಿಸಿದ್ದಾರೆ. ಸಂಜಯ್ ದತ್ ಮತ್ತು ದೀಪಿಕಾ ಪಡುಕೋಣೆ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Exit mobile version