Site icon Vistara News

Salaar Movie: ವಿಶೇಷ ಚೇತನ ಗಾಯಕಿಗೆ ಬಂಪರ್‌ ಆಫರ್‌ ಕೊಟ್ಟ ಪ್ರಶಾಂತ್‌ ನೀಲ್‌!

indian idol 14 this contestant Menuka

ಬೆಂಗಳೂರು: ಈ ವರ್ಷದ ಬಹು ನಿರೀಕ್ಷಿತ ಚಿತ್ರ ಸಲಾರ್: ಭಾಗ 1-ಸೀಸ್‌ಫೈರ್‌ (Salaar: Part 1 – Ceasefire)ನ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಕೆಜಿಎಫ್‌ (KGF) ಸರಣಿ ಚಿತ್ರಗಳ ಮೂಲಕ ದೇಶದ ಗಮನ ಸೆಳೆದ ಪ್ರಶಾಂತ್‌ ನೀಲ್‌ (Prashanth Neel) ನಿರ್ದೇಶನದ ಈ ಪ್ಯಾನ್‌ ಇಂಡಿಯಾ ಚಿತ್ರಕ್ಕಾಗಿ ಕೋಟ್ಯಂತರ ಅಭಿಮಾನಿಗಳು ತುದಿಗಾಲಿನಲ್ಲಿ ಕಾದು ನಿಂತಿದ್ದಾರೆ. ಇದೆಲ್ಲದರ ನಡುವೆ ನೇಪಾಳ ಮೂಲಕ ವಿಶೇಷ ಚೇತನ ಗಾಯಕಿಗೆ ಚಿತ್ರದಲ್ಲಿ ಹಾಡುವ ಅವಕಾಶ ಸಿಕ್ಕಿದೆ. ʻಇಂಡಿಯನ್ ಐಡೆಲ್ ಸೀಸನ್ 14′ ರಿಯಾಲಿಟಿ ಶೋನಲ್ಲಿ ಮೋಡಿ ಮಾಡುತ್ತಿರುವ ಮೆನುಕಾಗೆ ‘ಸಲಾರ್’ ಚಿತ್ರದಲ್ಲಿ ಹಾಡುವ ಅವಕಾಶ ಸಿಕ್ಕಿದೆ.

ಈಗಾಗಲೇ ರೆಕಾರ್ಡಿಂಗ್ ಕೂಡ ಮುಗಿದಿದೆ ಎಂದು ವರದಿಯಾಗಿದೆ. ಮೆನುಕಾ ಗಾಯನ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಶೋ ತೀರ್ಪುಗಾರರಾಗಿದ್ದಾರೆ. ಕಾರ್ಯಕ್ರಮಕ್ಕೆ ಬರುವ ಅತಿಥಿಗಳು ಕೂಡ ಮೆನುಕಾ ಕಂಠವನ್ನು ಹಾಡಿ ಹೊಗಳುತ್ತಿದ್ದಾರೆ. ʻಇಂಡಿಯನ್ ಐಡೆಲ್ ಸೀಸನ್ 14′ ಕಳೆದ ವಾರದ ಎಪಿಸೋಡ್‌ನಲ್ಲಿ ಈ ವಿಚಾರವನ್ನು ವೇದಿಕೆಯಲ್ಲಿ ಘೋಷಣೆ ಮಾಡಲಾಗಿದೆ. ಈ ವಿಚಾರ ಕೇಳಿ ಶ್ರೇಯಾ ಘೋಷಾಲ್ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ʻಅಂತಹ ದೊಡ್ಡ ಸಿನಿಮಾದಲ್ಲಿ ರವಿ ಬಸ್ರೂರು ಸಂಗೀತದಲ್ಲಿ ಹಾಡುವ ಅವಕಾಶ ಸಿಕ್ಕಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: Salaar Movie: ದೀಪಾವಳಿಗೆ ಡಬಲ್‌ ಗುಡ್‌ನ್ಯೂಸ್‌ ಹಂಚಿಕೊಂಡ ಹೊಂಬಾಳೆ ಫಿಲ್ಮ್ಸ್‌!

ಟಾಲಿವುಡ್‌ ಸೂಪರ್‌ ಸ್ಟಾರ್‌ ಪ್ರಭಾಸ್‌ ಈ ಚಿತ್ರದಲ್ಲಿ ಅಬ್ಬರಿಸಿರುವುದು ಟ್ರೈಲರ್‌ ಮೂಲಕ ಕಂಡು ಬಂದಿದೆ. ಜತೆಗೆ ಮಾಲಿವುಡ್‌ ಸ್ಟಾರ್‌ ಪೃಥ್ವಿರಾಜ್‌ ಸುಕುಮಾರನ್‌ ಕೂಡ ಮಿಂಚು ಹರಿಸಿದ್ದಾರೆ. ರವಿ ಬಸ್ರೂರ್‌ ಸಂಗೀತ ಮತ್ತೊಮ್ಮೆ ಮ್ಯಾಜಿಕ್‌ ಮಾಡಿದೆ. ಛಾಯಾಗ್ರಾಹಕ ಭವನ್‌ ಗೌಡ್‌ ‘ಸಲಾರ್‌’ನ ಬೇರೆಯದೇ ಪ್ರಪಂಚವನ್ನು ಕಟ್ಟಿಕೊಟ್ಟಿದ್ದಾರೆ. ಖಾನ್‌ಸಾರ್‌ ಸಾಮ್ರಾಜ್ಯದಲ್ಲಿ ಕಥೆ ನಡೆಯಲಿದೆ.

ʼಕೆಜಿಎಫ್‌ʼ ಸರಣಿ ಚಿತ್ರಗಳನ್ನು ನಿರ್ಮಿಸಿದ್ದ ಫಿಲ್ಮ್ಸ್‌ ನ ವಿಜಯ್‌ ಕಿರಂಗದೂರು ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಈ ಚಿತ್ರ ತೆರೆಕಾಣಲಿದೆ. ಶ್ರುತಿ ಹಾಸನ್‌, ಜಗಪತಿ ಬಾಬು ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Salaar Movie: ಪ್ರಭಾಸ್ ಜತೆ ಐಟಂ ಸಾಂಗ್‌ಗೆ ಸೊಂಟ ಬಳುಕಿಸುತ್ತಿದ್ದಾರೆ ಗದರ್ 2 ನಟಿ?

2014ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ತೆರೆಕಂಡ ಮುರಳಿ-ಹರಿಪ್ರಿಯಾ ಅಭಿನಯದ ʼಉಗ್ರಂʼ ಚಿತ್ರ ನಿರ್ದೇಶನದ ಮೂಲಕ ಪ್ರಶಾಂತ್‌ ನೀಲ್‌ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್‌ ಮಾಡುವ ಜತೆಗೆ ವಿಮರ್ಶಕರ ಮೆಚ್ಚುಗೆಯೂ ಗಳಿಸಿತ್ತು. ಬಳಿಕ ಅವರು ರಾಕಿಂಗ್‌ ಸ್ಟಾರ್‌ ಯಶ್‌ ಜತೆ ʼಕೆಜಿಎಫ್‌ʼ ಚಿತ್ರ ಮಾಡುವ ಮೂಲಕ ತೆರೆ ಮೇಲೆ ಮ್ಯಾಜಿಕ್‌ ಸೃಷ್ಟಿಸಿದ್ದರು. ʼಉಗ್ರಂʼ ಚಿತ್ರ ಕೂಡ ಸ್ನೇಹಿತರಿಬ್ಬರ ಕಥೆಯನ್ನೊಳಗೊಂಡಿತ್ತು. ಇತ್ತ ʼಕೆಜಿಎಫ್‌ʼನಲ್ಲಿ ತಾಯಿ-ಮಗನ ಸೆಂಟಿಮೆಂಟ್‌ ಗಮನ ಸೆಳೆದಿತ್ತು. ʼಸಲಾರ್‌ ಪಾರ್ಟ್‌ 1ʼ ಡಿಸೆಂಬರ್‌ 22ರಂದು ವಿಶ್ವಾದ್ಯಂತ ತೆರೆ ಕಾಣಲಿದ್ದು, ದಾಖಲೆಯ ಕಲೆಕ್ಷನ್‌ ಮಾಡುವ ನಿರೀಕ್ಷೆ ಇದೆ.

Exit mobile version