Site icon Vistara News

Indrajit Lankesh: ಮಗನ ಸಿನಿಮಾಗೆ ʻಗೌರಿʼ ಎಂಬ ಟೈಟಲ್‌ ಇಟ್ಟಿರುವ ಬಗ್ಗೆ ಇಂದ್ರಜಿತ್​ ಲಂಕೇಶ್ ಹೇಳಿದ್ದೇನು?

Indrajit Lankesh Samarjit Film Muhurtha

ಬೆಂಗಳೂರು: ಇಂದ್ರಜಿತ್​ ಲಂಕೇಶ್ (Indrajit Lankesh)​ ಅವರ ಪುತ್ರ ಸಮರ್ಜಿತ್​ ಲಂಕೇಶ್​ (Samarjit Lankesh) ಅವರು ಹೀರೊ ಆಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಇಂದ್ರಜಿತ್‌ ಲಂಕೇಶ್ ಅವರು ತಮ್ಮ ಮಗನ ಮೊದಲ ಸಿನಿಮಾಕ್ಕೆ ‘ಗೌರಿ’ ಎಂದು ಟೈಟಲ್ ಇಟ್ಟಿದ್ದಾರೆ. ಈ ಸಿನಿಮಾದ ಮುಹೂರ್ತ ಸಮಾರಂಭ ಆಗಸ್ಟ್ 31ರಂದುಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನೆರವೇರಿತು.ಸಿನಿಮಾ ತಂಡದ ಸದಸ್ಯರು, ಗಣ್ಯರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ಚಿತ್ರಕ್ಕೆ ‘ಗೌರಿ’ ಎನ್ನುವ ಶೀರ್ಷಿಕೆ ಇಟ್ಟಿದ್ದು ಏಕೆ ಎನ್ನುವ ಪ್ರಶ್ನೆಗೆ ಇಂದ್ರಜಿತ್ ಅವರು ಉತ್ತರ ನೀಡಿದ್ದಾರೆ.

ಈ ಬಗ್ಗೆ ಇಂದ್ರಜಿತ್‌ ಮಾಹಿತಿ ಹಂಚಿಕೊಂಡು ʻʻನನ್ನ ಅಕ್ಕನ ಮೇಲಿ ಪ್ರೀತಿ ಹಾಗೂ ಅಭಿಮಾನಕ್ಕಾಗಿ ಗೌರಿ ಎನ್ನುವ ಶೀರ್ಷಿಕೆ ಇಟ್ಟಿದ್ದೇನೆ. ಲಂಕೇಶ್ ಪತ್ರಿಕೆ ಹುಟ್ಟಿದ್ದು ಬಸವನಗುಡಿಯಲ್ಲಿ. ಈ ಕಾರಣದಿಂದ ಚಿತ್ರದ ಮುಹೂರ್ತ ವಿಶೇಷ ಎನಿಸಿದೆ. ನಾನು ಸಾಕಷ್ಟು ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿದ್ದೇನೆʼʼಎಂದರು.

ʻಐಶ್ವರ್ಯಾ’ ಚಿತ್ರದ ಮುಹೂರ್ತ ನೆರವೇರಿದ ಸ್ಥಳದಲ್ಲಿ ನಡೆಯಿತು ಮಗನ ಸಿನಿಮಾ ಶುಭಾರಂಭ

‘ನಾನು ಇಲ್ಲಿ ಸಿನಿಮಾ ಮುಹೂರ್ತ ನೆರವೇರಿಸಲು ಕಾರಣ ಇದೆ. ‘ಐಶ್ವರ್ಯಾ’ ಚಿತ್ರದ ಮುಹೂರ್ತ ಇಲ್ಲಿಯೇ ನೆರವೇರಿತ್ತು. 2005ರಲ್ಲಿ ಮುಹೂರ್ತ ಆಗಿತ್ತು. ಈ ಚಿತ್ರಕ್ಕೆ ಉಪೇಂದ್ರ ಹೀರೊ, ದೀಪಿಕಾ ಪಡುಕೋಣೆ ನಾಯಕಿ. ಇದು ದೀಪಿಕಾ ಅವರ ಮೊದಲ ಸಿನಿಮಾ. ಅವರು ಇಂಟರ್​ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಅದೇ ರೀತಿ ಇಂದು ಸಮರ್ಜಿತ್ ಲಂಕೇಶ್ ಹಾಗೂ ಸಾನ್ಯಾ ಐಯ್ಯರ್ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರು ಚಿತ್ರರಂಗದಲ್ಲಿ ಬೆಳೆಯುತ್ತಾರೆ ಎನ್ನುವ ನಂಬಿಕೆ ಇದೆ’ ಎಂದರು ಇಂದ್ರಜಿತ್.

ಇದನ್ನೂ ಓದಿ: Indrajit Lankesh: ಇಂದ್ರಜಿತ್​ ಲಂಕೇಶ್ ಪುತ್ರನ ಸಿನಿಮಾಗೆ ʻಗೌರಿʼ ಟೈಟಲ್‌ ಫಿಕ್ಸ್‌;ಮುಹೂರ್ತಕ್ಕೆ ಸಿದ್ದರಾಮಯ್ಯ ಅತಿಥಿ

ಈ ಸಿನಿಮಾಗಾಗಿ ಸಮರ್ಜಿತ್​ ಲಂಕೇಶ್​ ಅವರು ಡ್ಯಾನ್ಸ್​, ಫೈಟಿಂಗ್​, ಕುದುರೆ ಸವಾರಿ ಸೇರಿದಂತೆ ಅನೇಕ ಕಲೆಗಳನ್ನು ಕಲಿತು ಬಂದಿದ್ದಾರೆ. ಜಾಹೀರಾತು ಕ್ಷೇತ್ರದಲ್ಲಿ ಅವರಿಗೆ ಅನುಭವ ಇದೆ.

ʻಗೌರಿ’ ಚಿತ್ರದಲ್ಲಿ ಸಮರ್ಜಿತ್​ ಲಂಕೇಶ್​ಗೆ ಜೋಡಿಯಾಗಿ ‘ಬಿಗ್​ ಬಾಸ್​’ ಖ್ಯಾತಿಯ ಸಾನ್ಯಾ ಅಯ್ಯರ್​ ಅವರು ನಟಿಸಲಿದ್ದಾರೆ. ಇನ್ನು, ಈ ಸಿನಿಮಾದ ಹಾಡುಗಳಿಗೆ ಜೆಸ್ಸಿ ಗಿಫ್ಟ್ ಮತ್ತು ಚಂದನ್‌ ಶೆಟ್ಟಿ ಸಂಗೀತ ನೀಡುತ್ತಿದ್ದಾರೆ. ಎಜೆ ಶೆಟ್ಟಿ ಛಾಯಾಗ್ರಹಣ ಮಾಡುತ್ತಿದ್ದು, ಬಿ ಎ ಮಧು, ರಾಜಶೇಖರ್, ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ಕೆ ಕಲ್ಯಾಣ್, ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ ಬರೆಯುತ್ತಿದ್ದಾರೆ.

Exit mobile version