Site icon Vistara News

Ira Khan and Nupur Wedding: ಇಂದು ಉದಯಪುರದಲ್ಲಿ ಆಮೀರ್ ಪುತ್ರಿಯ ಅದ್ಧೂರಿ ವಿವಾಹ

Ira Khan-Nupur Shikhare Wedding

ಬೆಂಗಳೂರು: ಆಮೀರ್ ಖಾನ್ ಅವರ ಪುತ್ರಿ ಇರಾ ಖಾನ್ (Ira Khan Nupur Wedding) ಅವರು ತಮ್ಮ ಬಹುಕಾಲದ ಗೆಳೆಯ, ಫಿಟ್ನೆಸ್ ತರಬೇತುದಾರ ನೂಪುರ್ ಶಿಖರೆ ಅವರನ್ನು ಜನವರಿ 3ರಂದು ವಿವಾಹವಾದರು. ಈ ಯುವಜೋಡಿ ರಿಜಿಸ್ಟರ್ ಮದುವೆಯಾಗಿದೆ. ಇಂದು (ಜನವರಿ 10) ಉದಯಪುರದಲ್ಲಿ ಅದ್ಧೂರಿಯಾಗಿ ವಿವಾಹ ನೆರವೇರಲಿದೆ. ಸಂಜೆ 4ಗಂಟೆಗೆ ಪ್ರತಿಜ್ಞೆ ವಿನಿಮಯದೊಂದಿಗೆ ವಿವಾಹ ಮಹೋತ್ಸವ ಮುಕ್ತಾಯಗೊಳ್ಳಲಿದೆ.

ಜನವರಿ 8ರ ಬೆಳಗ್ಗೆ ಮೆಹಂದಿ ಕಾರ್ಯಕ್ರಮ ನೆರವೇರಿತ್ತು. ಮೆಹಂದಿ ಸಂಭ್ರಮದ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಮೆಹಂದಿ ಸಮಾರಂಭದಲ್ಲಿ ಇರಾ ಹಾಲ್ಟರ್ ನೆಕ್ ಉಡುಪನ್ನು ಧರಿಸಿದ್ದರು. ಜನವರಿ 13 ರಂದು, ಬಿಕೆಸಿ ಜಿಯೋ ಸೆಂಟರ್‌ನಲ್ಲಿ ಅದ್ಧೂರಿ ಆರತಕ್ಷತೆಯನ್ನು ಆಯೋಜಿಸಿದ್ದಾರೆ ಎನ್ನಲಾಗಿದೆ. ಅನೇಕ ಗಣ್ಯರನ್ನು ಇನ್ವೈಟ್‌ ಮಾಡಿದ್ದಾರೆ ಎನ್ನಲಾಗಿದೆ. ಸಲ್ಮಾನ್ ಖಾನ್, ಶಾರುಖ್ ಖಾನ್, ಅಜಯ್ ದೇವಗನ್, ಅಮಿತಾಭ್‌ ಬಚ್ಚನ್, ಕರಣ್ ಜೋಹರ್, ಅಕ್ಷಯ್ ಕುಮಾರ್, ಕರೀನಾ ಕಪೂರ್ ಖಾನ್, ರಾಜ್ ಕುಮಾರ್ ಹಿರಾನಿ, ಅಶುತೋಷ್ ಗೋವಾರಿಕರ್, ಜೂಹಿ ಚಾವ್ಲಾ, ರಾಕೇಶ್ ಓಂಪ್ರಕಾಶ್ ಮೆಹ್ರಾ ಸೇರಿ ಹಲವರು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ಆಮೀರ್‌ ಅಂಬಾನಿ ಕುಟುಂಬಕ್ಕೂ ಆಹ್ವಾನ ನೀಡಿದ್ದಾರೆ. ಜನವರಿ 3 ರಂದು ನಡೆದ ಆರತಕ್ಷತೆಯಲ್ಲಿ ಅಂಬಾನಿ ಕುಟುಂಬ ಉಪಸ್ಥಿತಿ ಇತ್ತು. ಇದರೊಂದಿಗೆ ಮುಂಬೈನಲ್ಲಿ ನಡೆದ ಅದ್ಧೂರಿ ಆರತಕ್ಷತೆಗೆ ದಕ್ಷಿಣ ಚಿತ್ರರಂಗದ ಸೆಲೆಬ್ರಿಟಿಗಳಿಗೂ ಆಹ್ವಾನ ನೀಡಲಾಗಿದೆ.

ಇದನ್ನೂ ಓದಿ: Ira Khan-Nupur Shikhare Wedding: ಆಮೀರ್‌ ಖಾನ್‌ ಮಗಳ ಮದುವೆ ಸಂಭ್ರಮದ ಫೋಟೊಗಳಿವು!

ಇನ್ನು ವಿವಾಹದ ಸಂದರ್ಭದಲ್ಲಿ ನೂಪುರ್ ತಮ್ಮ ವಿಚಿತ್ರ ವರ್ತನೆಯಿಂದಾಗಿ ಗಮನ ಸೆಳೆದಿದ್ದಾರೆ. ಮದುಮಗ ಸಾಮಾನ್ಯವಾಗಿ ಸುಂದರ ಬಟ್ಟೆಗಳನ್ನು ಧರಿಸಿಕೊಂಡು ಮಿಂಚುತ್ತಾನೆ. ಆದರೆ, ನೂಪುರ್ ಶಿಖರೆ ಅವರು, ಜಾಗಿಂಗ್ ಬಟ್ಟೆಯಲ್ಲಿ ಮದುವೆ ಮನೆಯ ತನಕ ಓಡಿಕೊಂಡು ಬಂದಿದ್ದರು. ವಿಶೇಷ ಎಂದರೆ, ಮದುವೆ ನೋಂದಣಿ ಸಮಯದಲ್ಲೂ ಅದೇ ಡ್ರೆಸ್‌ನಲ್ಲಿ ಅಂದರೆ ಜಾಗಿಂಗ್ ಉಡುಪಿನಲ್ಲಿ ಅವರಿದ್ದರು. ಈ ಕಾರಣಕ್ಕಾಗಿ ಮದುವೆ ವಿಶೇಷ ಗಮನ ಸೆಳೆದಿತ್ತು.

Exit mobile version