Site icon Vistara News

Actor Yash: ‘ಯಶ್ 19’ ಸಿನಿಮಾ ಸೆಟ್‌ನ ಫೋಟೊ ಲೀಕ್‌? ಹೊಸ ಅವತಾರದಲ್ಲಿ ರಾಕಿ ಭಾಯ್‌!

Is the photo of 'Yash 19' movie set leaked Rocky Boy in new Look

ಬೆಂಗಳೂರು: 2022ರ ಏಪ್ರಿಲ್‌ 14 ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ನಟಿಸಿ, ನಿರ್ದೇಶಕ ಪ್ರಶಾಂತ್‌ ನೀಲ್‌ ನಿರ್ದೇಶಿಸಿದ ಕೆಜಿಎಫ್‌ 2 ಸಿನಿಮಾ ಬಿಡುಗಡೆಗೊಂಡಿತ್ತು. ಮೂರು ವರ್ಷಗಳ ಕಠಿಣ ಪರಿಶ್ರಮದಿಂದ ಸಿದ್ಧವಾಗಿದ್ದ ಸಿನಿಮಾ ರಾಜ್ಯದಲ್ಲಿ ಮಾತ್ರವಲ್ಲದೆ, ದೇಶ, ವಿದೇಶದಲ್ಲಿಯೂ ತೆರೆ ಕಂಡು ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿಕೊಂಡಿತು. ಹೊಸ ದಾಖಲೆಗಳನ್ನು ಬರೆದ ಆ ಸಿನಿಮಾ ಬಿಡುಗಡೆಗೊಂಡು ಒಂದು ವರ್ಷವಾಗಿದೆ. ಇದರ ಬೆನ್ನಲ್ಲೇ ಯಶ್‌ ಅವರ ಮುಂದಿನ ಸಿನಿಮಾ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದೀಗ ಯಶ್‌ ಅವರ ಹೊಸ ಫೋಟೊವೊಂದು ವೈರಲ್‌ ಆಗುತ್ತಿದ್ದು, ‘ಯಶ್ 19’ (Yash 19) ಸಿನಿಮಾ ಸೆಟ್‌ನದ್ದು ಎನ್ನಲಾಗಿದೆ. ಈ ಫೋಟೊವನ್ನು ಯಶ್‌ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಯಶ್‌ 19 ಸಿನಿಮಾವನ್ನು ಮಲಯಾಳಂ ನಟಿ-ಚಿತ್ರ ನಿರ್ದೇಶಕಿ ಗೀತು ಮೋಹನ್‌ದಾಸ್ ( Geetu Mohandas  ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ. ಇದೀಗ ಏಕಾಏಕಿ ಹೊಸ ಫೋಟೊವೊಂದು ವೈರಲ್‌ ಆಗುತ್ತಿದೆ. . ಇತ್ತೀಚೆಗೆ ಶ್ರೀಲಂಕಾದಲ್ಲಿ ಶೂಟಿಂಗ್ ಸ್ಪಾಟ್ ಹುಡುಕುವುದಕ್ಕೆ ಯಶ್ ತೆರಳಿದ್ದರು ಎನ್ನುವುದು ಬಿಟ್ಟರೆ ಯಾವುದೇ ಅಪ್‌ಡೇಟ್ ಸಿಕ್ಕಿರಲಿಲ್ಲ. ಯಶ್ ತಮ್ಮ 19ನೇ ಸಿನಿಮಾ ಬಗ್ಗೆ ಸಾಕಷ್ಟು ಗುಟ್ಟು ಕಾಯ್ದುಕೊಂಡಿದ್ದಾರೆ. ಹೀಗಿರುವಾಗ ಸಿನಿಮಾ ಶೂಟಿಂಗ್ ಸ್ಥಳದ ಫೋಟೊ ಲೀಕ್ ಹೇಗಾಯ್ತು ಎಂಬುದೇ ನೆಟ್ಟಿಗರ ಪ್ರಶ್ನೆ.

ವೈರಲ್ ಆದ ಫೋಟೊದಲ್ಲಿ ಯಶ್ ಕೂದಲು ಈಗ ಮತ್ತಷ್ಟು ಉದ್ದಕ್ಕೆ ಬೆಳೆದಿದೆ. ಕೆಲವರು ಫೋಟೊ ನೋಡಿ ಕೆಜಿಎಫ್‌ ಸಿನಿಮಾದ್ದೇ ಇರಬೇಕು ಎಂದು ಕಮೆಂಟ್‌ ಮಾಡಿದರೆ, ಇನ್ನು ಕೆಲವರು ಇದು ಎಡಿಟೆಡ್ ಫೋಟೊ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Yash 19: ಯಶ್‌ ಮುಂದಿನ ಸಿನಿಮಾಗೆ ಗೀತು ಮೋಹನ್‌ದಾಸ್ ಡೈರೆಕ್ಟರ್? ಪೋಸ್ಟ್‌ ವೈರಲ್‌!

ವೈರಲ್‌ ಫೋಟೊ

ಅಭಿಮಾನಿಗಳು ಈಗ ಯಶ್ 19 ರಂದು ಅಧಿಕೃತ ಪ್ರಕಟಣೆಗಾಗಿ ಕಾಯುತ್ತಿದ್ದಾರೆ, ಕೆಜಿಎಫ್‌ ಸಿನಿಮಾ 2018ರಲ್ಲಿ ಬಿಡುಗಡೆಯಾಗಿತ್ತು. ಆ ಸಿನಿಮಾ ಕಂಡ ಯಶಸ್ಸಿನ ಬೆನ್ನಲ್ಲೇ ಸಿನಿಮಾ ತಂಡ ಕೆಜಿಎಫ್‌ 2 ಸಿನಿಮಾ ಮಾಡಿತ್ತು.

Exit mobile version