Site icon Vistara News

Actor Prabhas | ಪ್ರಭಾಸ್‌ ನಟನೆಯ ಆದಿಪುರುಷ್‌ ಟೀಸರ್‌ ಲಾಂಚ್‌ ಮಾಡಲಿದ್ದಾರಾ ಯೋಗಿ ಆದಿತ್ಯನಾಥ್‌?

Actor Prabhas

ಬೆಂಗಳೂರು: ಪ್ರಭಾಸ್‌ ನಟನೆಯ (Actor Prabhas ) ಆದಿಪುರುಷ್‌ ಸಿನಿಮಾ ಬಗ್ಗೆ ಸಿನಿಪ್ರಿಯರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವದಂತಿಗಳ ಪ್ರಕಾರ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಟೀಸರ್‌ ಲಾಂಚ್‌ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಈವರೆಗೆ ಚಿತ್ರತಂಡ ಪೋಸ್ಟರ್‌ ಒಂದನ್ನು ಹಂಚಿಕೊಂಡಿದೆ. ಓಂ ರಾವತ್‌ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್‌ ರಾಮನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಟೀಸರ್‌ ಬಗ್ಗೆ ಕೆಲವು ಗಾಸಿಪ್‌ಗಳು ಕೇಳಿ ಬರುತ್ತಿವೆ. ರಾಮನ ಜನ್ಮ ಸ್ಥಳ ಅಯೋಧ್ಯೆಯಲ್ಲಿ ಚಿತ್ರತಂಡ ಟೀಸರ್‌ ಬಿಡುಗಡೆಗೊಳಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದಿಪುರುಷ್‌ ಚಿತ್ರದಲ್ಲಿ ಪ್ರಭಾಸ್‌ ರಾಮನ ಅವತಾರದಲ್ಲಿ ಕಾಣಿಸಿಕೊಂಡರೆ, ಸೈಫ್‌ ಅಲಿ ಖಾನ್‌ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೃತಿ ಸನನ್‌ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.

ಈ ಹಿಂದಷ್ಟೇ ಪ್ರಭಾಸ್‌ ಅವರ ದೊಡ್ಡಪ್ಪ ತೀರಿ ಕೊಂಡಿದ್ದು, ಅಂತ್ಯಕ್ರಿಯೆಲ್ಲಿ ಭಾಗಿ ಆಗಿದ್ದರು. ಇದೀಗ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಅವರ ಅಭಿಮಾನಿಗಳಿಗೆ ಟೀಸರ್‌ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ | Sita Ramam Film | ಸೀತಾ ರಾಮಂ ಪ್ರೀ ರಿಲೀಸ್‌ ಇವೆಂಟ್‌: ಚಿತ್ರಮಂದಿರ ದೇವಸ್ಥಾನ ಇದ್ದಂತೆ ಎಂದ ಪ್ರಭಾಸ್‌

Exit mobile version