Site icon Vistara News

Jaggesh | ನವರಸ ನಾಯಕ ಜಗ್ಗೇಶ್‌ ನಟನೆಯ ರಾಘವೇಂದ್ರ ಸ್ಟೋರ್ಸ್‌ ರಿಲೀಸ್‌ ಡೇಟ್‌ ಮುಂದಕ್ಕೆ

Jaggesh

ಬೆಂಗಳೂರು: ನವರಸ ನಾಯಕ ಜಗ್ಗೇಶ್ (Jaggesh) ಅಭಿನಯದ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಇದೀಗ ಹೊಸ ಅಪಡೇಟ್‌ ನೀಡಿದೆ. ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನದಲ್ಲಿ ಹೊಂಬಾಳೆ ಪ್ರೊಡಕ್ಷನ್‌ ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ ಈ ಸಿನಿಮಾ ಬಿಡುಗಡೆಯು ಕಾರಣಾಂತರದಿಂದ ಮುಂದೂಡಲ್ಪಟ್ಟಿದೆ.

ಕೆಜಿಎಫ್‌ಗೆ ಬಂಡವಾಳ ಹೂಡಿದ್ದ ಹೊಂಬಾಳೆ ಫಿಲ್ಮ್ಸ್‌ ಈ ಹಿಂದೆ ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನದ ರಾಜಕುಮಾರ ಹಾಗೂ ಯುವರತ್ನವನ್ನು ಸಹ ನಿರ್ಮಾಣ ಮಾಡಿತ್ತು. ಇದೀಗ ರಾಘವೇಂದ್ರ ಸ್ಟೋರ್ಸ್‌ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಇದು ಪಕ್ಕಾ ಹಾಸ್ಯ ಕೇಂದ್ರಿತವಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ | ವರಮಹಾಲಕ್ಷ್ಮಿ ಹಬ್ಬಕ್ಕೆ Raghavendra Storesಗೆ ಬನ್ನಿ: ʼನವರಸʼ ಸವಿಯಲು ಸಿದ್ಧರಾಗಿ

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಹಾಕಿರುವ ಹೊಂಬಾಳೆ ಫಿಲ್ಮ್ಸ್‌, ಕಾರಣಾಂತರಗಳಿಂದ ನಿಮ್ಮಿಷ್ಟದ ರಸದೌತಣ ಸ್ವಲ್ಪ ವಿಳಂಬವಾಗುತ್ತಿದೆ ಎಂದು ಹೇಳಿಕೊಂಡಿದೆ. ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ರಾಘವೇಂದ್ರ ಸ್ಟೋರ್ಸ್‌ ಹಾಸ್ಯಾಧಾರಿತ ಸಿನಿಮಾ ಆಗಿದ್ದು, ಇದರಲ್ಲಿ ಜಗ್ಗೇಶ್‌ 40 ವರ್ಷ ಪ್ರಾಯ ದಾಟಿದರೂ ಮದುವೆಯಾಗದ ಅಡುಗೆ ಭಟ್ಟರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಮ್ಯಾನರಿಸಂ, ನಟನೆ ಹಾಗೂ ಡೈಲಾಗ್‌ಗಳ ಮೂಲಕ ಸಿನಿಪ್ರಿಯರಿಗೆ ಕಚಗುಳಿ ಇಡಲು ಸಿದ್ಧರಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಇದೇ ಆಗಸ್ಟ್‌ 5ರ ವರಮಹಾಲಕ್ಷ್ಮೀ ಹಬ್ಬದ ದಿನದಂದು ಬಿಡುಗಡೆ ಆಗಬೇಕಿತ್ತು. ಆದರೆ, ಈಗ ಹೊಂಬಾಳೆ ಫಿಲ್ಮ್ಸ್‌ “ಕಾರಣಾಂತರಗಳಿಂದ ಮುಂದೂಡಲಾಗುತ್ತಿದೆ” ಎಂದು ಹೇಳಿಕೊಂಡಿದೆ. ರಾಘವೇಂದ್ರ ಸ್ಟೋರ್ಸ್‌ ಹೊಂಬಾಳೆ ಫಿಲ್ಮ್ಸ್‌ನ 12ನೇ ಸಿನಿಮಾ ಆಗಿದೆ.

ಇದನ್ನೂ ಓದಿ | Mata Film | ಸ್ಯಾಂಡಲ್‌ವುಡ್‌ಗೆ ಬರಲು ಮತ್ತೊಂದು ಮಠ ರೆಡಿ

Exit mobile version