Site icon Vistara News

Jailer Box Office Day 1: ಹಲವು ದಾಖಲೆ ಬರೆದ ಜೈಲರ್‌ ಕಲೆಕ್ಷನ್‌, ಎಷ್ಟಾಯ್ತು ನೋಡಿ

jailor movie release

ಬೆಂಗಳೂರು: ಸೂಪರ್‌ಸ್ಟಾರ್‌ ರಜನಿಕಾಂತ್‌ (Rajinikanth) ಅಭಿನಯದ ಜೈಲರ್ (Jailer movie) ಬಾಕ್ಸ್ ಆಫೀಸ್‌ನಲ್ಲಿ ಜಾಕ್‌ಪಾಟ್‌ ಹೊಡೆದಿದೆ. ಇದರ ಮೊದಲ ದಿನದ ಬಾಕ್ಸ್‌ ಆಫೀಸ್‌ (Jailer Box Office Day 1) ಕಲೆಕ್ಷನ್‌ 52 ಕೋಟಿ ರೂಪಾಯಿ ದಾಟಿದೆ ಎಂದು ತಿಳಿದುಬಂದಿದೆ.

ರಜನಿ ಅವರ ಬಿಗ್ಗೆಸ್ಟ್‌ ಕಮ್‌ಬ್ಯಾಕ್‌ ಆಗಿರುವ ಜೈಲರ್‌ ಮೊದಲ ಪ್ರದರ್ಶನದಿಂದಲೂ ಮೆಚ್ಚುಗೆಯ ಪ್ರತಿಕ್ರಿಯೆ ಗಳಿಸಿದೆ. ಈ ಚಿತ್ರ ಭಾರತದಲ್ಲಿ 1ನೇ ದಿನ 52 ಕೋಟಿ ರೂಪಾಯಿಗಳ ಬೃಹತ್ ಕಲೆಕ್ಷನ್ ಮಾಡಿತು. ವರದಿಗಳ ಪ್ರಕಾರ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹಲವಾರು ದಾಖಲೆಗಳನ್ನು ಮುರಿದಿದೆ. ಇದು 2023ರಲ್ಲಿ ತಮಿಳುನಾಡಿನಲ್ಲಿ ಅತಿ ದೊಡ್ಡ ಓಪನಿಂಗ್ ಮತ್ತು 2023ರಲ್ಲಿ ದೇಶದಲ್ಲಿ ಬಿಡುಗಡೆಯ ಮೊದಲ ದಿನ ಕಾಲಿವುಡ್‌ ಚಿತ್ರವೊಂದು ಮಾಡಿದ ಅತ್ಯಧಿಕ ಮೊತ್ತ.

ಜೈಲರ್‌ ಚಿತ್ರ ತಮಿಳುನಾಡಿನಲ್ಲಿ 23 ಕೋಟಿ, ಕರ್ನಾಟಕ 11 ಕೋಟಿ, ಕೇರಳ 5 ಕೋಟಿ, ಎಪಿ-ಟಿಜಿ 10 ಕೋಟಿ, ಭಾರತದ ಉಳಿದ ಭಾಗಗಳಲ್ಲಿ 3 ಕೋಟಿ ಸಂಗ್ರಹಿಸಿದೆ.

ಜೈಲರ್ ತನ್ನ ಮೊದಲ ದಿನದ ಸಂಗ್ರಹದೊಂದಿಗೆ ಮುರಿದ ದಾಖಲೆಗಳು ಇವು:

2023ರಲ್ಲಿ ತಮಿಳುನಾಡಿನಲ್ಲಿ ಅತಿದೊಡ್ಡ ಓಪನಿಂಗ್.
ಕರ್ನಾಟಕದಲ್ಲಿ ಕಾಲಿವುಡ್‌ ಚಿತ್ರದ ಓಪನಿಂಗ್‌ನ ಸಾರ್ವಕಾಲಿಕ ದಾಖಲೆ.
2023ರಲ್ಲಿ ಕೇರಳದಲ್ಲಿ ಅತಿ ದೊಡ್ಡ ಓಪನಿಂಗ್.
2023ರಲ್ಲಿ ಎಪಿ/ಟಿಜಿಯಲ್ಲಿ ಕಾಲಿವುಡ್‌ನ ಅತಿ ದೊಡ್ಡ ಓಪನಿಂಗ್.
2023ರಲ್ಲಿ ಕಾಲಿವುಡ್‌ನ ಚಿತ್ರದ ಆರಂಭಿಕ ದಿನದ ಭಾರತದ ಒಟ್ಟಾರೆ ಅತ್ಯಧಿಕ ಮೊತ್ತ.

ಜೈಲರ್ ಅಮೇರಿಕಾದಲ್ಲಿಯೂ ಸಹ ಸಾಕಷ್ಟು ದೊಡ್ಡ ವ್ಯವಹಾರ ಮಾಡಿದೆ. ಟ್ರೇಡ್ ಎಕ್ಸ್‌ಪರ್ಟ್ ರಮೇಶ್ ಬಾಲಾ ಟ್ವೀಟ್ ಮಾಡಿದ್ದು, ʼʼಜೈಲರ್ ಯುಎಸ್‌ಎಯಲ್ಲಿ 1.450 ದಶಲಕ್ಷ ಡಾಲರ್‌ ಗಳಿಕೆ ಮಾಡಿದೆʼʼ ಎಂದಿದ್ದಾರೆ.

ತಮ್ಮ ಎರಡು ವರ್ಷಗಳ ವಿರಾಮದ ನಂತರ ಸೂಪರ್‌ಸ್ಟಾರ್ ರಜನಿಕಾಂತ್ ಬೆಳ್ಳಿ ಪರದೆಯ ಮೇಲೆ ಜೈಲರ್‌ ಮೂಲಕ ಮರಳಿದ್ದಾರೆ. ಅವರು ಕೊನೆಯದಾಗಿ ಕಾಣಿಸಿಕೊಂಡದ್ದು ʼಅಣ್ಣಾತ್ತೆʼಯಲ್ಲಿ. ಜೈಲರ್‌ನ ಪಾತ್ರವರ್ಗದಲ್ಲಿ ಶಿವ ರಾಜ್‌ಕುಮಾರ್‌, ಮೋಹನ್‌ಲಾಲ್‌, ರಮ್ಯಾ ಕೃಷ್ಣನ್, ಜಾಕಿ ಶ್ರಾಫ್, ವಸಂತ್ ರವಿ, ಯೋಗಿ ಬಾಬು ಮತ್ತು ರೆಡಿಂಗ್ ಕಿಂಗ್ಸ್‌ಲಿ ಕೂಡ ಇದ್ದಾರೆ. ಕಾವಾಲಯ್ಯಾ ಹಾಡಿನಲ್ಲಿ ತಮನ್ನಾ ಭಾಟಿಯಾ ಅವರ ಆಕರ್ಷಕ ನೃತ್ಯ ಚಲನೆಗಳು ಈಗಾಗಲೇ ಇಂಟರ್ನೆಟ್‌ನಲ್ಲಿ ಬಿರುಗಾಳಿಯಂತೆ ಆವರಿಸಿವೆ.

ಇದನ್ನೂ ಓದಿ: Jailer Movie: ʻಜೈಲರ್‌ʼ ಫೀವರ್;‌ ತಲೈವಾ ಸಿನಿಮಾ ನೋಡಲು ಚೆನ್ನೈಗೆ ಬಂದ ಜಪಾನ್‌ ದಂಪತಿ!

Exit mobile version