Site icon Vistara News

Shiva Rajkumar: ಜೈಲರ್‌ ಬಳಿಕ ಡಿಮ್ಯಾಂಡ್, ಬಾಲಿವುಡ್‌ನತ್ತ ಹೊರಟ ಶಿವಣ್ಣ

shiva rajkumar with sudepto sen

ಬೆಂಗಳೂರು: ಈ ವರ್ಷದ ಬ್ಲಾಕ್‌ಬಸ್ಟರ್‌ ತಮಿಳು ಸಿನೆಮಾ, ರಜನಿಕಾಂತ್‌ (Rajinikanth) ನಟನೆಯ ಜೈಲರ್ ಸಿನಿಮಾದಲ್ಲಿ (Jailer movie) ಕಾಣಿಸಿಕೊಂಡ ಬಳಿಕ ಶಿವ ರಾಜ್‌ಕುಮಾರ್‌ (shiva rajkumar) ಅವರಿಗೆ ಇತರ ಭಾಷೆಗಳ ಚಿತ್ರರಂಗಗಳಿಂದಲೂ ಬಲು ಬೇಡಿಕೆ ಸೃಷ್ಟಿಯಾಗಿದೆ. ಅವರೀಗ ಬಾಲಿವುಡ್‌ (bollywood film) ಚಿತ್ರವೊಂದರ ಮಾತುಕತೆ ನಡೆಸಿದ್ದಾರೆ.

ಜೈಲರ್‌ ಸಿನಿಮಾದಲ್ಲಿ ಕ್ಯಾಮಿಯೋ ರೋಲ್‌ನಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದರು. ಅವರ ಈ ಪಾತ್ರದ ಎಂಟ್ರಿ ಹಾಗೂ ನಿರ್ವಹಣೆ ಸಕತ್‌ ಸಂಚಲನ ಸೃಷ್ಟಿಸಿತ್ತಲ್ಲದೆ, ದಕ್ಷಿಣ ಭಾರತೀಯ ಚಿತ್ರರಂಗವಿಡೀ ಒಂದು ಕ್ಷಣ ತಿರುಗಿ ನೋಡುವಂತೆ ಮಾಡಿತ್ತು. ರಜನಿಕಾಂತ್‌ ಅವರಿಗಿಂತಲೂ ಶಿವಣ್ಣ ಪಾತ್ರವೇ ಹೆಚ್ಚು ಸದ್ದು ಮಾಡಿತ್ತು. ಇದೀಗ ಬಾಲಿವುಡ್‌ ನಿರ್ಮಾಪಕರ ಗಮನವನ್ನೂ ಸೆಳೆದಿದೆ.

ʼದಿ ಕೇರಳ ಸ್ಟೋರಿʼ ಸಿನಿಮಾ ನಿರ್ದೇಶಕ ಸುದಿಪ್ತೋ ಸೇನ್ ಅವರು ಶಿವಣ್ಣ ಅವರನ್ನು ಭೇಟಿಯಾಗಿದ್ದಾರೆ. ಹಿಂದಿ ಸಿನಿಮಾದಲ್ಲಿ ಅವರು ನಟಿಸುವುದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಸುದೀಪ್ತೋ ಹೇಳಿದ ಕತೆ ಶಿವಣ್ಣಂಗೆ ಓಕೆ ಆಗಿದೆ ಎಂಬ‌ ಮಾಹಿತಿ ಇದೆ. ಶಿವಣ್ಣನ ಮನೆಯಲ್ಲೇ ನಡೆದ ಚರ್ಚೆಯಲ್ಲಿ ಸುದೀಪ್ತೋ‌ ಜೊತೆ ನಿರ್ಮಾಪಕ‌ ರಾಜಕುಮಾರ್ ಕೂಡ ಉಪಸ್ಥಿತರಿದ್ದರು.

ಈಗಾಗಲೇ ತಮಿಳು, ತೆಲುಗು ಸಿನಿಮಾಗಳಲ್ಲಿ ಶಿವ ರಾಜ್‌ಕುಮಾರ್‌ ನಟಿಸಿದ್ದಾರೆ. ಕನ್ನಡದಲ್ಲಿ ಅವರು ಬಹು ಬೇಡಿಕೆಯ ಮತ್ತು ನಿರ್ಮಾಪಕರ ಗ್ಯಾರಂಟಿ ನಟ ಎನಿಸಿಕೊಂಡಿದ್ದಾರೆ. ಅವರ ʼಘೋಸ್ಟ್‌ʼ ಮತ್ತು ʼಕ್ಯಾಪ್ಟನ್‌ ಮಿಲ್ಲರ್‌ʼ ಚಿತ್ರಗಳು ತಯಾರಿಕೆ ಹಂತದಲ್ಲಿವೆ. ಇದೀಗ ಕನ್ನಡ, ತಮಿಳು, ತೆಲುಗು ದಾಟಿ ಬಾಲಿವುಡ್‌ನತ್ತ ಹೊರಟಿದ್ದಾರೆ.

ಇದನ್ನೂ ಓದಿ: Shiva Rajkumar: ಆ ಕ್ಯೂಟ್‌ ತಮಿಳು ಹೀರೊ ಜತೆ ನಟಿಸುವಾಸೆಯಂತೆ ಶಿವಣ್ಣನಿಗೆ!

Exit mobile version