Site icon Vistara News

Jailer Movie: `ಜೈಲರ್‌ 2’ನಲ್ಲಿ ಸೂಪರ್‌ ಸ್ಟಾರ್‌ ರಜನಿ ಜತೆ ದಳಪತಿ ವಿಜಯ್‌?

Rajini and vijay

ಬೆಂಗಳೂರು: ಭಾರೀ ನಿರೀಕ್ಷೆಗಳ ನಡುವೆ ಇತ್ತೀಚೆಗಷ್ಟೇ ತೆರೆಕಂಡಿರುವ ಜೈಲರ್‌ (Jailer Movie) ಸಿನಿಮಾ ಹಲವು ಸಿನಿಮಾಗಳ ಬಾಕ್ಸ್ ಆಫೀಸ್ ದಾಖಲೆಯನ್ನು ಉಡೀಸ್‌ ಮಾಡಿರುವುದು ಗೊತ್ತೇ ಇದೆ. ಸೂಪರ್ ಸ್ಟಾರ್ ರಜನಿಕಾಂತ್ ಜತೆ ಮಾಲಿವುಡ್ ಸ್ಟಾರ್ ಮೋಹನ್ ಲಾಲ್‌, ಸ್ಯಾಂಡಲ್‌ವುಡ್‌ ಸೆಂಚುರಿ ಸ್ಟಾರ್‌ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಇದೀಗ ಜೈಲರ್‌ ಮುಂದುವರಿದ (jailer 2) ಭಾಗಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಜತೆಗೆ ಕಾಲಿವುಡ್ ಪವರ್ ಸ್ಟಾರ್ ದಳಪತಿ ವಿಜಯ್ (thalapathy Vijay) ಕೂಡ ಕಣಕ್ಕಿಳಿಯುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

‘ಜೈಲರ್’ ಬಗ್ಗೆ ದಳಪತಿ ವಿಜಯ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಸಿನಿಮಾ ಹಿಟ್ ಆಗಿದೆ ಎಂಬ ಮೊದಲ ಸಂದೇಶ ವಿಜಯ್ ಅವರಿಂದ ಬಂದಿತ್ತು. ಆದರೀಗ ನಿರ್ದೇಶಕ ನೆಲ್ಸನ್‌ ಅವರು ಮುಂದಿನ ಭಾಗವನ್ನು ದಳಪತಿ ಜತೆ ಮಾಡಲಿದ್ದಾರೆ ಎಂದು ತೆಲುಗು ಮಾಧ್ಯಮಗಳು ಪ್ರಕಟಿಸಿವೆ. ಸದ್ಯ ‘ಜೈಲರ್’ ತಂಡ ಯಶಸ್ಸಿನ ಖುಷಿಯಲ್ಲಿದೆ. ಯಶಸ್ಸಿನ ಸಂದರ್ಭದಲ್ಲಿ ರಜನಿ ಹಿಮಾಲಯಕ್ಕೆ ಹೋಗಿದ್ದಾರೆ. ಕೆಲ ದಿನಗಳ ಕಾಲ ವಿಶ್ರಾಂತಿ ಪಡೆದು ಮತ್ತೆ ಹೊಸ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ‘ಲಿಯೋ’ ಚಿತ್ರದಲ್ಲಿ ಸದ್ಯ ದಳಪತಿ ವಿಜಯ್ ಶೂಟಿಂಗ್‌ನಲ್ಲಿ ಇದ್ದಾರೆ.

ಇದನ್ನೂ ಓದಿ: Jailer Movie: ʻವಿಕ್ರಮ್‌ʼ ಲೈಫ್‌ಟೈಮ್‌ ಕಲೆಕ್ಷನ್‌ ಮೀರಿಸಿದ ʻಜೈಲರ್‌ʼ; ಅಲ್ಲಿ ಮಾತ್ರ 2 ಕೋಟಿ ರೂ. ಗಳಿಸಿಲ್ಲ!

ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂ.

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನ, ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ (Jailer Movie) ಕಲೆಕ್ಷನ್‌ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂ. ದಾಟಿದೆ ಎಂದು ವರದಿಯಾಗಿದೆ. ಭಾರತದಲ್ಲಿ ಆಗಸ್ಟ್ 16ರಂದು 15 ಕೋಟಿ ರೂ. ಗಳಿಕೆ ಕಂಡಿದೆ. ಕೇವಲ ಏಳು ದಿನಗಳಲ್ಲಿ ‘ವಿಕ್ರಮ್’ (Vikram lifetime collection) ಸಿನಿಮಾದ ಒಟ್ಟೂ ಕಲೆಕ್ಷನ್‌ ಮೀರಿಸಿದೆ.

ಆಗಸ್ಟ್ 10 ರಂದು ‘ಜೈಲರ್’ ವಿಶ್ವಾದ್ಯಂತ ತೆರೆಗೆ ಅಪ್ಪಳಿಸಿತು. ಟ್ರೇಡ್ ವರದಿಗಳ ಪ್ರಕಾರ, ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂ ಗಳಿಕೆ (400 crore at the box office) ಕಂಡಿದ್ದು, . ಭಾರತದಲ್ಲಿ, 225.65 ಕೋಟಿ ರೂ. ನಿವ್ವಳ ಗಳಿಸಿದೆ. ಆಗಸ್ಟ್ 16 ರಂದು, ಇದು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 15 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಅಂದಾಜಿಸಲಾಗಿದೆ. ಭಾರತದ ಹೊರತಾಗಿ, ಅಮೆರಿಕ, ಯುಎಇ, ಸಿಂಗಾಪುರ ಮತ್ತು ಮಲೇಷ್ಯಾದಲ್ಲೂ ‘ಜೈಲರ್’ ಒಳ್ಳೆಯ ಪ್ರದರ್ಶನ ನೀಡುತ್ತಿದೆ. ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಈ ಚಿತ್ರ ಯುಎಸ್ಎಯಲ್ಲಿ ‘ಕಬಾಲಿ’ ಕಲೆಕ್ಷನ್ ಮೀರಿಸಲಿದೆ ಎಂದು ಹೇಳಿದ್ದಾರೆ.

Exit mobile version