ಬೆಂಗಳೂರು; ಸನ್ ಗ್ರೂಪ್ನ ಅಧ್ಯಕ್ಷ ಮತ್ತು ಸಂಸ್ಥಾಪಕ ಕಲಾನಿಧಿ ಮಾರನ್ ( Kalanidhi Maran) ಅವರು ತಮ್ಮ ನಿರ್ಮಾಣದ ಜೈಲರ್ ಸಿನಿಮಾ (Jailer Movie) ಭರ್ಜರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಸೂಪರ್ಸ್ಟಾರ್ ರಜನಿಕಾಂತ್ (Superstar Rajnikant) ಮತ್ತು ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರನ್ನು ಭೇಟಿಯಾಗಿ ಬೋನಸ್ ಚೆಕ್ಗಳು ಮತ್ತು ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ ಕೆಲವು ದಿನಗಳ ನಂತರ, ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರಿಗೂ ಅದೇ ಮಾದರಿಯ ಗಿಫ್ಟ್ಗಳನ್ನು ಕೊಟ್ಟಿದ್ದರು. ಜೈಲರ್ನ ಐತಿಹಾಸಿಕ ಯಶಸ್ಸಿನ ಹಿನ್ನೆಲೆಯಲ್ಲಿ ತಂಡದ ಪ್ರಮುಖರಿಗೆ ನಿರ್ಮಾಪಕರು ಗಿಫ್ಟ್ಗಳನ್ನು ಕೊಡುವುದನ್ನು ಮುಂದುವರಿಸಿದ್ದಾರೆ. ಇದೀಗ ಭಾರತದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಅಪೋಲೊ ಆಸ್ಪತ್ರೆಗಳಿಗೆ (Apollo Hospitals) 1 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ.
ಜೈಲರ್ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರಿಸಿದೆ. ರಜನಿಕಾಂತ್ ಅಭಿನಯದ ಈ ಚಿತ್ರವು ದೇಶೀಯ ಗಳಿಕೆ 395 ಕೋಟಿ ರೂ ಮತ್ತು ವಿದೇಶದಲ್ಲಿ 195 ಕೋಟಿ ರೂ.ಗಳೊಂದಿಗೆ, ಜೈಲರ್ ಈಗ ವಿಶ್ವಾದ್ಯಂತ 590 ಕೋಟಿ ರೂ.ಗಳ ಬಾಕ್ಸ್ ಆಫೀಸ್ ಮೊತ್ತವನ್ನು ಸಾಧಿಸಿದೆ.
ಜೈಲರ್ನ ಐತಿಹಾಸಿಕ ಯಶಸ್ಸಿನ ಹಿನ್ನೆಲೆಯಲ್ಲಿ ತಂಡದ ಪ್ರಮುಖರಿಗೆ ನಿರ್ಮಾಪಕರು ಗಿಫ್ಟ್ಗಳನ್ನು ಕೊಡುವುದನ್ನು ಮುಂದುವರಿಸಿದ್ದಾರೆ. ಭಾರತದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಅಪೋಲೊ ಆಸ್ಪತ್ರೆಗಳಿಗೆ 1 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ. ಅಪೋಲೊದಲ್ಲಿ ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆಗೆ ನೆರವಾಗಲು ಈ ಹಣ ನೀಡಿದ್ದಾರೆ. ಸನ್ ಪಿಕ್ಚರ್ಸ್ ಪರವಾಗಿ ಶ್ರೀಮತಿ ಕಾವೇರಿ ಕಲಾನಿತಿ ಅವರು ಅಪೋಲೊ ಆಸ್ಪತ್ರೆ ಅಧ್ಯಕ್ಷ ಡಾ. ಪ್ರತಾಪ್ ರೆಡ್ಡಿ ಅವರಿಗೆ ರೂ.1 ಕೋಟಿ ಚೆಕ್ ಹಸ್ತಾಂತರಿಸಿದರು.
ಇದನ್ನೂ ಓದಿ: Jailer Movie : ಜೈಲರ್ ಸಿನಿಮಾದ ಮ್ಯೂಸಿಕ್ ಡೈರೆಕ್ಟರ್ಗೆ ಪ್ರೊಡ್ಯೂಸರ್ ಕೊಟ್ಟ ಗಿಫ್ಟ್ಗಳನ್ನು ಕೇಳಿದ್ರೆ ಅಚ್ಚರಿ ಖಾತರಿ
ಪ್ರಸ್ತುತ, ಜೈಲರ್ ಸಿನಿಮಾ “ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ತಮಿಳು ಚಿತ್ರ ಎನಿಸಿಕೊಂಡಿದೆ. ಎಸ್ ಶಂಕರ್ ಅವರ ಫ್ಯಾಂಟಸಿ ಆಕ್ಷನ್ ಚಿತ್ರ 2.0 (2018ರಲ್ಲಿ ಬಿಡುಗಡೆಯಾಗಿತ್ತು) 723.30 ಕೋಟಿ ರೂಪಾಯಿ ಗಳಿಸಿತ್ತು. ಆ ಸಿನಿಮಾದಲ್ಲೂ ರಜನಿಕಾಂತ್ ಕೂಡ ನಟಿಸಿದ್ದಾರೆ. ಜೈಲರ್ ಈ ಹಿಂದೆ ಮಣಿರತ್ನಂ ಅವರ ಐತಿಹಾಸಿಕ ಆಕ್ಷನ್ ಚಿತ್ರ ಪೊನ್ನಿಯಿನ್ ಸೆಲ್ವನ್ನ ಒಟ್ಟು ಸಂಗ್ರಹವನ್ನು ಮೀರಿಸಿದೆ . ಆ ಸಿನಿಮಾದ ಒಟ್ಟು ಸಂಗ್ರಹ 488.36 ಕೋಟಿ ರೂಪಾಯಿ.
ಜೈಲರ್ ಚಿತ್ರದಲ್ಲಿ ಮೋಹನ್ ಲಾಲ್, ಶಿವರಾಜ್ ಕುಮಾರ್ ಮತ್ತು ಜಾಕಿ ಶ್ರಾಫ್ ಪ್ರಮುಖ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕಾ ಮೋಹನ್, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ್ ರವಿ ಮತ್ತು ವಿನಾಯಕನ್ ನಟಿಸಿದ್ದಾರೆ.
ರಜನಿಕಾಂತ್ ಮತ್ತು ನೆಲ್ಸನ್ ದಿಲೀಪ್ ಕುಮಾರ್ ಜೈಲರ್ ಮೂಲಕ ಮತ್ತೊಂದು ಮಸಾಲಾ ಚಿತ್ರವನ್ನು ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ. ಜೈಲರ್ ಕಮಲ್ ಹಾಸನ್ ಅವರ ವಿಕ್ರಮ್ ನ ರಜನಿಕಾಂತ್ ಆವೃತ್ತಿಯಾಗಿದೆ ಎಂದೂ ಹೇಳಲಾಗುತ್ತಿದೆ.