Site icon Vistara News

Jailer OTT Release: ಒಟಿಟಿಗೆ ಲಗ್ಗೆ ಇಡಲಿದೆ ತಲೈವಾ ಅಭಿನಯದ ಜೈಲರ್;‌ ಈ ದಿನಾಂಕ ಮರೆಯದಿರಿ

Rajanikanth Movie Jailer

Jailer OTT Release: Watch Rajinikanth's Movie On This Date

ಚೆನ್ನೈ: ಸೂಪರ್‌ ಸ್ಟಾರ್‌ ರಜನಿಕಾಂತ್‌ (Rajinikanth) ಅಭಿನಯದ ಜೈಲರ್‌ ಸಿನಿಮಾವು ಭಾರತ ಸೇರಿ ಜಗತ್ತಿನಾದ್ಯಂತ ಹಿಟ್‌ ಆಗಿದೆ. ಗಳಿಕೆಯಲ್ಲೂ ಜೈಲರ್‌ ಸಿನಿಮಾ ಹಲವು ದಾಖಲೆ ಮಾಡಿದೆ. ಸಿನಿಮಾ ಹಿಟ್‌ ಆದ ಹಿನ್ನೆಲೆಯಲ್ಲಿ ನಿರ್ಮಾಪಕ ಕಲಾನಿಧಿ ಮಾರನ್‌ ಅವರು ರಜನಿಕಾಂತ್‌ ಅವರಿಗೆ ಸಂಭಾವನೆ ಜತೆಗೆ ಲಾಭದ ಭಾಗವಾಗಿ 100 ಕೋಟಿ ರೂಪಾಯಿಯನ್ನು ಕೂಡ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ, ಜೈಲರ್‌ ಸಿನಿಮಾ ಸೆಪ್ಟೆಂಬರ್‌ 7ರಂದು ಒಟಿಟಿಯಲ್ಲಿ (Jailer OTT Release) ರಿಲೀಸ್‌ ಆಗುವುದು ಪಕ್ಕಾ ಆಗಿದೆ.

ಸೆಪ್ಟೆಂಬರ್‌ 7ರಂದು ಜೈಲರ್‌ ಸಿನಿಮಾವು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ. ಜೈಲರ್‌ ಸಿನಿಮಾ ಜಗತ್ತಿನಾದ್ಯಂತ ಹಿಟ್‌ ಆಗಿ, 500 ಕೋಟಿ ರೂ.ಗಿಂತ ಹೆಚ್ಚು ಹಣ ಗಳಿಸಿದೆ. ಭಾರತದಲ್ಲಿಯೇ 300 ಕೋಟಿ ರೂ.ಗಿಂತ ಹೆಚ್ಚು ಹಣ ಬಾಚಿದೆ. ಹಾಗಾಗಿ, ಅಭಿಮಾನಿಗಳು ಸಿನಿಮಾ ಒಟಿಟಿಯಲ್ಲಿ ಯಾವಾಗ ರಿಲೀಸ್‌ ಆಗುತ್ತದೆ ಎಂದು ಕಾತುರದಿಂದ ಕಾಯುತ್ತಿದ್ದರು. ಮೊದಲಿಗೆ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಆಗುತ್ತದೆ ಎಂದು ಹೇಳಲಾಗುತ್ತಿದೆ. ಈಗ ಕೊನೆಗೆ ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗುವುದು ದೃಢಪಟ್ಟಿದೆ. ಇನ್ನು ಸೆಪ್ಟೆಂಬರ್‌ 7ರಂದೇ ಶಾರುಖ್‌ ಖಾನ್‌ ನಟನೆಯ ಜವಾನ್‌ ಸಿನಿಮಾ ಕೂಡ ಒಟಿಟಿಯಲ್ಲಿಯೇ ರಿಲೀಸ್‌ ಆಗಲಿದೆ.

ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶನ ಮಾಡಿರುವ ಜೈಲರ್‌ ಸಿನಿಮಾದಲ್ಲಿ ತಲೈವಾ ಜತೆಯಲ್ಲಿ ನಟಿ ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ವಸಂತ್‌ ರವಿ, ವಿನಾಯಕನ್‌ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರೂ ಸಿನಿಮಾದಲ್ಲಿ ನಟಿಸಿದ್ದು, ಅವರ ಪಾತ್ರ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ಅವರಲ್ಲದೆ ಸಿನಿಮಾದಲ್ಲಿ ಜಾಕಿ ಶರಾಫ್‌, ಮಲಯಾಳಂನ ನಟ ಮೋಹನ್‌ಲಾಲ್‌ ಕೂಡ ನಟಿಸಿದ್ದಾರೆ. ಸನ್‌ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ಸಿದ್ಧವಾಗಿರುವ ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರ ಅವರ ಸಂಗೀತ ನಿರ್ದೇಶನವಿದೆ.

ಇದನ್ನೂ ಓದಿ: Actor Rajinikanth: ಬೆಂಗಳೂರಿನ ಬಿಎಂಟಿಸಿ ಡಿಪೋಗೆ ರಜನಿಕಾಂತ್‌ ದಿಢೀರ್‌ ಭೇಟಿ; ಸ್ನೇಹಿತನ ಜತೆ ಹಳೆಯ ನೆನಪು ಮೆಲುಕು ಹಾಕಿದ ತಲೈವಾ!

ʼಜೈಲರ್‌ʼ ಚಿತ್ರವು ತಮಿಳು ಸಿನಿಮಾಗಳಲ್ಲಿ 500 ಕೋಟಿ ರೂ. ಗಳಿಕೆ ಮಾಡಿಕೊಂಡ ಮೂರನೇ ಸಿನಿಮಾವಾಗಿದೆ. ಈ ಹಿಂದೆ ರಜನಿಕಾಂತ್‌ ಹಾಗೂ ಅಕ್ಷಯ್‌ ಕುಮಾರ್‌ ನಟನೆಯ 2.0 ಸಿನಿಮಾ ಅತಿ ವೇಗವಾಗಿ 500 ಕೋಟಿ ರೂ. ಕ್ಲಬ್‌ ಸೇರಿಕೊಂಡಿತ್ತು. ಅದಾದ ನಂತರ ಅತಿ ಬೇಗ 500 ಕೋಟಿ ರೂ. ಗಳಿಸಿಕೊಂಡ ಸಿನಿಮಾವಾಗಿ ಜೈಲರ್‌ ಸಿನಿಮಾ ಹೊರಹೊಮ್ಮಿದೆ.

Exit mobile version