Site icon Vistara News

RRR Movie | ಎರಡು ಬಾರಿ ಆರ್‌ಆರ್‌ಆರ್‌ ಸಿನಿಮಾ ವೀಕ್ಷಿಸಿದ ಜೇಮ್ಸ್ ಕ್ಯಾಮರೂನ್: ಪೋಸ್ಟ್‌ ಹಂಚಿಕೊಂಡ ರಾಜಮೌಳಿ!

RRR Movie

ಬೆಂಗಳೂರು : 28ನೇ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್‌ನಲ್ಲಿ ಎಸ್‌ಎಸ್‌ ರಾಜಮೌಳಿ ಅವರು, ಹಾಲಿವುಡ್‌ನ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಹಾಗೂ ಅವರ ಪತ್ನಿಯನ್ನು ಭೇಟಿಯಾದ ಫೋಟೊಗಳನ್ನು ಸೋಮವಾರ ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಎಸ್ಎಸ್ ರಾಜಮೌಳಿ ಅವರು ಜೇಮ್ಸ್ ಕ್ಯಾಮರೂನ್ ಅವರೊಂದಿಗೆ ಸಂತೋಷದಿಂದ ಮಾತನಾಡುತ್ತಿದ್ದಾರೆ. ಫೋಟೊಗಳ ಜತೆಗೆ, ಅವತಾರ್ ಖ್ಯಾತಿಯ ನಿರ್ದೇಶಕ ಜೇಮ್ಸ್ ಕ್ಯಾಮರೂನ್ RRR ಸಿನಿಮಾವನ್ನು (RRR Movie) ಎರಡು ಬಾರಿ ವೀಕ್ಷಿಸಿರುವ ಮಾಹಿತಿಯನ್ನು ರಾಜಮೌಳಿ ಬಹಿರಂಗಪಡಿಸಿದ್ದಾರೆ.

ʻʻಅತ್ಯುತ್ತಮ ನಿರ್ದೇಶಕರಾದ ಜೇಮ್ಸ್ ಕ್ಯಾಮರೂನ್ RRR ಸಿನಿಮಾವನ್ನು ಎರಡು ಬಾರಿ ವೀಕ್ಷಿಸಿದ್ದಾರೆ. ಸಿನಿಮಾ ನೋಡಿ ತುಂಬ ಇಷ್ಟಪಟ್ಟಿದ್ದಾರೆ. ಅವರ ಪತ್ನಿ ಸುಜಿಗೆ ಸಿನಿಮಾ ನೋಡುವಂತೆ ಶಿಫಾರಸು ಮಾಡಿದ್ದಾರೆ. ಸರ್, ನಮ್ಮ ಚಲನಚಿತ್ರವನ್ನು ವಿಶ್ಲೇಷಿಸಲು, ನೀವು ನಮ್ಮೊಂದಿಗೆ 10 ನಿಮಿಷಗಳ ಕಾಲ ಕಳೆದಿದ್ದೀರಿ ಎಂದು ನನಗೆ ಇನ್ನೂ ನಂಬಲಾಗುತ್ತಿಲ್ಲ. “ನೀವು ಹೇಳಿದಂತೆ ನಾನು ಪ್ರಪಂಚದ ಅಗ್ರಸ್ಥಾನದಲ್ಲಿದ್ದೇನೆʼ. ಇಬ್ಬರಿಗೂ ಧನ್ಯವಾದಗಳು.” ಎಂದು ರಾಜಮೌಳಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | RRR Movie | ಆರ್‌ಆರ್‌ಆರ್‌ಗೆ ಮತ್ತೊಂದು ಜಾಗತಿಕ ಗರಿ, ದಿ ಚೆಲ್ಲೊ ಶೋಗೂ ಇಂಟರ್‌ನ್ಯಾಷನಲ್‌ ಪ್ರೆಸ್‌ ಅಕಾಡೆಮಿ ಪುರಸ್ಕಾರ

ರಾಜಮೌಳಿ ಅವರು ಈ ಪೋಸ್ಟ್ ಹಂಚಿಕೊಂಡ ಕೂಡಲೇ, ಅಭಿಮಾನಿಗಳು ಕಮೆಂಟ್ ಮೂಲಕ “ಇನ್‌ಕ್ರೆಡಿಬಲ್. ನಿನ್ನೆ ಸ್ಪೀಲ್‌ಬರ್ಗ್, ಇಂದು ಕ್ಯಾಮರೂನ್! ಈ ಮೆಚ್ಚುಗೆ ಪ್ರಶಸ್ತಿಗಿಂತ ಹೆಚ್ಚಾಗಿದೆ” ಎಂದು ಬರೆದರೆ, ಇನ್ನೊಬ್ಬರು “ಜೇಮ್ಸ್ ಕ್ಯಾಮರೂನ್ ಅವರೊಂದಿಗೆ ವಿಶ್ವದ ಅತ್ಯುತ್ತಮ ನಿರ್ದೇಶಕ” ಎಂದು ಬರೆದಿದ್ದಾರೆ.

ಎಸ್‌ಎಸ್ ರಾಜಮೌಳಿ ಟ್ವೀಟ್ ಮಾಡಿದ ಕೂಡಲೇ, ಆಲಿಯಾ ಭಟ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಅನ್ನು ರಿ ಪೋಸ್ಟ್‌ ಮಾಡಿ “ಐಕಾನ್ಸ್ ಮಾತ್ರ” ಎಂದು ಶೀರ್ಷಿಕೆ ನೀಡಿದ್ದಾರೆ. ಆಲಿಯಾ ಭಟ್ ಟ್ವೀಟ್ ಅನ್ನು ಮತ್ತೊಮ್ಮೆ ಶೇರ್ ಮಾಡಿದ್ದಾರೆ. ʻʻವಾಟ್ ಎ ಬ್ಯೂಟಿಫುಲ್ ಮಾರ್ನಿಂಗ್ʼʼ ಎಂದು ಶೀರ್ಷಿಕೆ ನೀಡಿದ್ದಾರೆ.

ಕಳೆದ ವಾರ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನದಲ್ಲಿ ʼನಾಟು…ನಾಟುʼ ಗೀತೆಗೆ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿ ಬಂದಿತ್ತು. ಇದೀಗ ಕ್ರಿಟಿಕ್ಸ್‌ ಚಾಯ್ಸ್‌ನಲ್ಲೂ ಅತ್ಯುತ್ತಮ ಮೂಲ ಗೀತೆ ಪುರಸ್ಕಾರ ಗೆದ್ದುಕೊಂಡಿದೆ. ವಿದೇಶಿ ಭಾಷೆಯ ಚಿತ್ರ ವಿಭಾಗದಲ್ಲಿ ಅತ್ಯುತ್ತಮ ಪ್ರಶಸ್ತಿಯನ್ನು ಗೆದ್ದಿದೆ.

ಕಳೆದ ರಾತ್ರಿ ಲಾಸ್ ಏಂಜಲೀಸ್‌ನಲ್ಲಿ ನಡೆದ ವಿಮರ್ಶಕರ ಆಯ್ಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಚಲನಚಿತ್ರವು “ನಾಟು ನಾಟು” ಎಂಬ ಅತ್ಯುತ್ತಮ ಮೂಲ ಗೀತೆಗಾಗಿ ಪ್ರಶಸ್ತಿಯನ್ನು ಪಡೆದುಕೊಂಡಿತು, ಅಲ್ಲದೆ ವಿದೇಶಿ ಭಾಷೆಯ ಅತ್ಯುತ್ತಮ ಪ್ರಶಸ್ತಿ ಕೂಡ ತನ್ನದಾಗಿಸಿಕೊಂಡಿತು.

ಇದನ್ನೂ ಓದಿ | RRR Movie | ಮತ್ತೆ 2 ಪ್ರಶಸ್ತಿ RRR Movie| ಕ್ರಿಟಿಕ್ಸ್‌ ಚಾಯ್ಸ್‌ ಅವಾರ್ಡ್‌ | ಅತ್ಯುತ್ತಮ ವಿದೇಶಿ ಚಿತ್ರ ಮತ್ತು ಅತ್ಯುತ್ತಮ ಹಾಡು

Exit mobile version