ಬೆಂಗಳೂರು : ಜೇಮ್ಸ್ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ಸೋಮವಾರ (ಜು.೪) ದಾಖಲಾಗಿದ್ದಾರೆ. ರಕ್ತದೊತ್ತಡದಿಂದ ಪ್ರಜ್ಞೆ ತಪ್ಪಿರುವ ನಿರ್ಮಾಪಕ ಕಿಶೋರ್‌ಗೆ ಹೃದಯ ಬಡಿತದಲ್ಲಿ ಏರುಪೇರಾಗಿತ್ತು ಎನ್ನುವ ಮಾಹಿತಿ ತಿಳಿದು ಬಂದಿದೆ.
ಸೋಮವಾರ ರಾತ್ರಿ (ಜು.4) ಸ್ನೇಹಿತ ಪ್ರಸಾದ್ ಅವರು ಕಿಶೋರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆನ್ನಲಾಗಿದೆ. ಕಿಶೋರ್ ಇಲ್ಲಿನ ವಿಜಯನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಿದ್ದರು. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ | ನಿರ್ಮಾಪಕ ಜಾಕ್ ಮಂಜು ಆರೋಗ್ಯದಲ್ಲಿ ಏರುಪೇರು