Site icon Vistara News

James Wan: ಜೇಮ್ಸ್‌ ವಾನ್‌ ನಿರ್ದೇಶನದ ಈ 6 ಥ್ರಿಲ್ಲರ್‌ ಚಿತ್ರಗಳನ್ನು ತಪ್ಪದೇ ನೋಡಿ!

James Wan

ಜೇಮ್ಸ್‌ ವಾನ್‌ (James Wan) ಹಾಲಿವುಡ್ ಸಿನಿಮಾಗಳ (Hollywood ) ಖ್ಯಾತ ನಿರ್ದೇಶಕ. ಇವರು ಹಾರರ್ ಮತ್ತು ಸಸ್ಪೆನ್ಸ್ ಚಿತ್ರ ಮಾಡುವುದರಲ್ಲಿ ನಿಸ್ಸೀಮರು. ಇವರು ತಮ್ಮ ಹಾರರ್ ಚಿತ್ರಗಳ ಮೂಲಕ ಪ್ರೇಕ್ಷಕರಲ್ಲಿ ಭಯ ಹುಟ್ಟಿಸುವಲ್ಲಿ ಪರಿಣತರು. ಇವರು ಹಾರರ್ ಚಿತ್ರಗಳ ಮೂಲಕವೇ ಹೆಚ್ಚು ಜನಪ್ರಿಯರಾಗಿದ್ದಾರೆ. ಜೇಮ್ಸ್ ವಾನ್ ನಿರ್ದೇಶಿಸಿದ 6 ಸೂಪರ್ ಹಿಟ್ ಚಲನಚಿತ್ರಗಳ ವಿವರ ಇಲ್ಲಿವೆ. ಸಾಧ್ಯವಾದರೆ ನೀವೂ ನೋಡಿ.

ಸಾ (2004)

ಇದು ಒಂದು ಭಯ ಹುಟ್ಟಿಸುವಂತಹ ಕುತೂಹಲಕಾರಿ ಅಮೆರಿಕನ್ ಚಲನಚಿತ್ರವಾಗಿದೆ. ಇದನ್ನು ಜೇಮ್ಸ್ ವಾನ್ ನಿರ್ದೇಶನ ಮಾಡಿದ್ದು, ಇದು ಅವರ ಚೊಚ್ಚಲ ಚಿತ್ರವಾಗಿದೆ. ಇದು 2004ರಲ್ಲಿ ತೆರೆಕಂಡಿತ್ತು. ಇದರ ಕಥೆ ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆದಿದೆ. ಈ ಚಿತ್ರದ ಕಥೆಯನ್ನು ಲೇಗ್ ವಾನ್ನೆಲ್ ಬರೆದಿದ್ದಾರೆ. ಈ ಚಿತ್ರವು ಒಬ್ಬ ಕೊಲೆಗಾರನ ರಹಸ್ಯದ ಸುತ್ತ ಸುತ್ತುತ್ತದೆ. ಈ ಚಿತ್ರ ಜೇಮ್ಸ್ ವಾನ್ ಅವರಿಗೆ ಪ್ರಶಂಸೆಯನ್ನು ತಂದುಕೊಟ್ಟ ಚಿತ್ರ ಎಂಬುದರಲ್ಲಿ ಸಂಶಯವಿಲ್ಲ.

ಅಕ್ವಾಮನ್ ಅಂಡ್ ದಿ ಲಾಸ್ಟ್ ಕಿಂಗ್‌ಡಮ್

2023ರಲ್ಲಿ ತೆರೆಕಂಡ ಅಮೆರಿಕನ್ ಸೂರ್ ಹಿಟ್ ಚಿತ್ರ ಇದಾಗಿದ್ದು, ಅಕ್ವಾಮನ್ ಪಾತ್ರವನ್ನು ಒಳಗೊಂಡಿದೆ. ಈ ಚಿತ್ರವನ್ನು ಡಿಸಿ ಸ್ಟುಡಿಯೋಸ್, ಅಟಾಮಿಕ್ ಮಾನ್ಸ್ಟರ್, ಸಫ್ರಾನ್ ಕಂಪೆನಿ ಮತ್ತು ಡೊಮೇನ್ ಎಂಟರ್ ಟೈನ್ಮೆಂಟ್ ನಿರ್ಮಿಸಿದೆ. ಈ ಚಿತ್ರ ಅಕ್ವಾಮನ್ (2018)ರ ಮುಂದುವರಿದ ಭಾಗವಾಗಿದೆ. ಡೇವಿಡ್ ಲೆಸ್ಲಿ ಜಾನ್ಸನ್ ಮೆಕ್ಗೋಲ್ಡ್ರಿಕ್ ಚಿತ್ರಕಥೆ ಬರೆದ ಈ ಚಿತ್ರವನ್ನು ಜೇಮ್ಸ್ ವಾನ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಜೇಸನ್ ಮೊಮೊವಾ ಆರ್ಥರ್ ಅಕ್ವಾಮನ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರು ತಮ್ಮ ಕುಟುಂಬವನ್ನು ಕೊಲ್ಲುವುದನ್ನು ತಡೆಯಲು ಮತ್ತು ಕಳೆದುಹೋದ ಏಳನೇ ಸಾಮ್ರಾಜ್ಯವನ್ನು ಹುಡುಕುವುದು ಇದರಲ್ಲಿ ಕಂಡುಬರುತ್ತದೆ. ಇದು ಜಿಯೋ ಸಿನಿಮಾದಲ್ಲಿ ಲಭ್ಯವಿದೆ.

ಡೆಡ್ ಸೈಲೆನ್ಸ್

ಇದು ಒಂದು ಅಮೆರಿಕನ್ ಸೂಪರ್ ಹಿಟ್ ಹಾರರ್ ಚಿತ್ರವಾಗಿದೆ. ಇದನ್ನು ಜೇಮ್ಸ್ ವಾನ್ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಹೀರೊ ನಿಗೂಢವಾಗಿ ಕಾಣೆಯಾದ ತನ್ನ ಪತ್ನಿಯನ್ನು ಹುಡುಕಿಕೊಂಡು ಹೋಗುವ ಕಥಾಹಂದರವನ್ನು ಹೊಂದಿದೆ. ಇದರಲ್ಲಿ ಹೀರೊ ಪಾತ್ರದಲ್ಲಿ ರಯಾನ್ ಕ್ವಾಂಟೆನ್ ನಟಿಸಿದ್ದಾರೆ. ಈ ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿದೆ.

ಇನ್ಸಿಡಿಯಸ್ 1:

ಇದು ಕೂಡ ಜೇಮ್ಸ್ ವಾನ್ ನಿರ್ದೇಶಿಸಿರುವ ಹಾರರ್ ಚಿತ್ರವಾಗಿದೆ. ಇದು ಇನ್ಸಿಡಿಯಸ್ ಫ್ರಾಂಚೈಸಿಯ ಮೊದಲ ಸರಣಿಯಾಗಿದೆ. ಈ ಚಿತ್ರದಲ್ಲಿ ದಂಪತಿಯ ಪುತ್ರನೊಬ್ಬ ಕೋಮಾ ಸ್ಥಿತಿಗೆ ಹೋಗುತ್ತಾನೆ. ಆತ ಕೋಮಾ ಸ್ಥಿತಿಗೆ ಹೋಗಲು ಕಾರಣವೇನು ಎಂಬುದನ್ನು ಹುಡುಕುವುದೇ ಇದರ ಕಥೆಯಾಗಿದೆ. ಈ ಚಿತ್ರದಲ್ಲಿ ಪ್ಯಾಟ್ರಿಕ್ ವಿಲ್ಸನ್, ರೋಸ್ ಬೈರ್ನೆ ಮತ್ತು ಬಾರ್ಬರಾ ಹರ್ಷೇ ನಟಿಸಿದ್ದಾರೆ. ಇದು ನೆಟ್ ಫ್ಲಿಕ್ಸ್ ನಲ್ಲಿ ಲಭ್ಯವಿದೆ.

ದಿ ಕಾಂಜ್ಯೂರಿಂಗ್ 1:

2013ರಲ್ಲಿ ಬಿಡುಗಡೆಯಾದ ಜೇಮ್ಸ್ ವಾನ್ ನಿರ್ದೇಶನದ ಅಮೆರಿಕನ್ ಸೂಪರ್ ಹಿಟ್ ಹಾರರ್ ಚಿತ್ರವಾಗಿದೆ. ಈ ಚಿತ್ರ ಉತ್ತಮ ಯಶಸ್ಸನ್ನು ಕಂಡಿದ್ದು,ಪ್ರೇಕ್ಷಕರಿಂದ ಉತ್ತಮವಾದ ಪ್ರತಿಕ್ರಿಯೆ ಕೂಡ ದೊರಕಿತ್ತು. ಚಾಡ್ ಹೇಯ್ಸ್ ಮತ್ತು ಕ್ಯಾರಿ ಡಬ್ಲ್ಯೂ ಹೇಯ್ಸ್ ಈ ಚಿತ್ರವನ್ನು ಬರೆದಿದ್ದಾರೆ. ಈ ಚಿತ್ರದಲ್ಲಿ ಪ್ಯಾಟ್ರಿಕ್ ವಿಲ್ಸನ್ ಮತ್ತು ವೆರಾ ಫಾರ್ಮಿಂಗಾ ಅವರು ಪ್ಯಾರಾ ನಾರ್ಮಲ್ ತನಿಖಾಧಿಕಾರಿ ಹಾಗೂ ಲೇಖಕರ ಪಾತ್ರದಲ್ಲಿ ನಟಿಸಿದ್ದಾರೆ. ಇದು ನೆಟ್ ಫ್ಲಿಕ್ಸ್ ನಲ್ಲಿ ಲಭ್ಯವಿದೆ.

ಇದನ್ನೂ ಓದಿ: Head Shave: ಪೋಷಕರು ಬಿಜೆಪಿಯನ್ನು ಬೆಂಬಲಿಸಿದ್ದಕ್ಕೆ ದಲಿತ ಹುಡುಗನ ತಲೆ ಬೋಳಿಸಿದರು!

ಫಾಸ್ಟ್ ಅಂಡ್ ಫ್ಯೂರಿಯಸ್ 7:

ಇದು ಒಂದು ಆ್ಯಕ್ಷನ್ ಸಿನಿಮಾವಾಗಿದೆ. ಬರೀ ಹಾರರ್ ಚಿತ್ರವನ್ನು ನಿರ್ದೇಶಿಸುತ್ತಿರುವ ಜೇಮ್ಸ್ ವಾನ್ ಈ ಆ್ಯಕ್ಷನ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಫಾಸ್ಟ್ ಅಂಡ್ ಫ್ಯೂರಿಯಸ್ ನ 7ನೇ ಸರಣಿಯಾಗಿದೆ. ಇದರಲ್ಲಿ ವಿನ್ ಡೀಸೆಲ್, ಡ್ವಾಯ್ನೆ ಜಾನ್ಸನ್ , ಮಿಷೆಲ್ ರೋಡ್ರಗಸ್, ಪಾಲ್ ವಾಕರ್, ಸೇರಿದಂತೆ ಹಲವರು ನಟಿಸಿದ್ದಾರೆ. ಇದು ಝೀ5 ನಲ್ಲಿ ಲಭ್ಯವಿದೆ.

Exit mobile version