Site icon Vistara News

Janardhan Reddy Son | ಜನಾರ್ದನ ರೆಡ್ಡಿ ಪುತ್ರನ ಸಿನಿಮಾ ಟೈಟಲ್​​ ಲಾಂಚ್​​ಗೆ ಕ್ಷಣಗಣನೆ!

Janardhan Reddy Son

ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪುತ್ರ ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿದೆ. ಕಿರೀಟಿ ಗ್ರ್ಯಾಂಡ್ ಎಂಟ್ರಿಗೆ ವೇದಿಕೆ ಸಜ್ಜಾಗಿದ್ದು, ಇಂಟ್ರಡಕ್ಷನ್ ಟೀಸರ್ ಮೂಲಕ ಗಮನ ಸೆಳೆದಿರುವ ಕಿರೀಟಿ (Janardhan Reddy Son) ಇದೀಗ ಟೈಟಲ್ ಮೂಲಕ ಹವಾ ಎಬ್ಬಿಸಲು ಸಿದ್ಧರಾಗಿದ್ದಾರೆ. ಕಿರೀಟಿ ರೆಡ್ಡಿ ಹುಟ್ಟುಹಬ್ಬದ ದಿನವೇ ಸ್ಪೆಷಲ್ ಗಿಫ್ಟ್ ಕೊಡಲು ಸಿನಿಮಾ ತಂಡ ಸಿದ್ಧವಾಗಿದೆ.

ಸೆಪ್ಟೆಂಬರ್ 29ಕ್ಕೆ ಕಿರೀಟಿ ಹುಟ್ಟುಹಬ್ಬದ ಹಿನ್ನೆಲೆ ಸಿನಿಮಾ ಟೈಟಲ್ ಅನಾವರಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಿರೀಟಿ ಅಭಿನಯದ ಮೊದಲ ಚಿತ್ರದಲ್ಲೇ ಸ್ಟಾರ್​ಗಳ ದಂಡು ಇದೆ. ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಜೆನಿಲಿಯಾ, ಶ್ರೀಲೀಲಾ ಸೇರಿದಂತೆ ದೊಡ್ಡ ತಾರಾಬಳಗ ಇದೆ. ಚಿತ್ರದ ತಾಂತ್ರಿಕ ವರ್ಗ ಕೂಡ ಸಾಕಷ್ಟು ಗಮನ ಸೆಳೆಯುತ್ತಿದೆ. ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ, ಬಾಹುಬಲಿ ಖ್ಯಾತಿಯ ಸೆಂಥಿಲ್ ಕುಮಾರ್ ಕ್ಯಾಮೆರಾ ವರ್ಕ್, ರವೀಂದರ್ ಕಲಾ ನಿರ್ದೇಶನ, ಪೀಟರ್ ಹೆನ್ ಆಕ್ಷನ್ ಚಿತ್ರಕ್ಕಿದೆ.

ಜನಾರ್ದನ ರೆಡ್ಡಿ ಪುತ್ರ ಕಿರೀಟಿ.

ರಾಜಮೌಳಿ ಸಾಥ್
ಈ ಹಿಂದೆ ಅದ್ಧೂರಿಯಾಗಿ ನೆರವೇರಿದ್ದ ಕಿರೀಟಿ ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ಸಾಥ್ ನೀಡಿದ್ದರು. ಇಂಟ್ರಡಕ್ಷನ್ ಟೀಸರ್ ಮೂಲಕವೇ ಕಿರೀಟಿ ರೆಡ್ಡಿ ಒಂದೇ ನೋಟಕ್ಕೆ ಎಲ್ಲರ ಗಮನ ಸೆಳೆದಿದ್ದರು. ಸದ್ಯ ಕಿರೀಟಿ ಮೊದಲ ಚಿತ್ರದ ಬಗ್ಗೆ ಲೇಟೆಸ್ಟ್ ಅಪ್‌ಡೇಟ್ ಸಿಕ್ಕಿದ್ದು, ಟೈಟಲ್ ಅನಾವರಣಕ್ಕೆ ಕೌಂಟ್​ಡೌನ್ ಶುರುವಾಗಿದೆ. ಈ ಮೂಲಕ ನಟ ಕಿರೀಟಿ ಹುಟ್ಟುಹಬ್ಬಕ್ಕೆ ಗಿಫ್ಟ್ ನೀಡಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಸೆಪ್ಟೆಂಬರ್ 29ರ ಸಂಜೆ 6.39ಕ್ಕೆ ವಾರಾಹಿ ಚಲನಚಿತ್ರ ಯುಟ್ಯೂಬ್ ಚಾನೆಲ್​ನಲ್ಲಿ ಕಿರೀಟಿ ಮೊದಲ ಚಿತ್ರದ ಟೈಟಲ್ ಲಾಂಚ್ ಆಗಲಿದೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಪ್ರೊಡಕ್ಷನ್ ಬಂಡವಾಳ ಹೂಡಿ, ಸಿನಿಮಾ ನಿರ್ಮಿಸುತ್ತಿದೆ. ಅಲ್ಲದೆ ಇದು ವಾರಾಹಿ ಸಂಸ್ಥೆಯ 15ನೇ ಚಿತ್ರ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ: Nano Narayanappa | ಕೆಜಿಎಫ್ ಸಿನಿಮಾ ತಾತ ಈಗ ಫುಲ್ ಟೈಂ ಹೀರೋ

Exit mobile version