Site icon Vistara News

Pawan Kalyan: ಆಂಧ್ರದಲ್ಲಿ ಮತ್ತೊಂದು ಹೈಡ್ರಾಮಾ; ರಾತ್ರೋರಾತ್ರಿ ಪವನ್ ಕಲ್ಯಾಣ್ ಬಂಧನ!

Pawan Kalyan

ಬೆಂಗಳೂರು: ತೆಲುಗು ದೇಶಂ ಪಕ್ಷದ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿರುವುದು ಆಂಧ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. 2014-2019ರ ನಡುವೆ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್‌ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚಂದ್ರಬಾಬು ಅವರನ್ನು ಪೊಲೀಸರು ಸಾಕಷ್ಟು ಸಾಕ್ಷ್ಯಾಧಾರಗಳೊಂದಿಗೆ ಬಂಧಿಸಿದ್ದಾರೆ. ಪವನ್‌ ಕಲ್ಯಾಣ್ (Pawan Kalyan) ಅವರು ಸೆಪ್ಟೆಂಬರ್‌ 9ರಂದು ನಂದ್ಯಾಲದಲ್ಲಿ (Chandrababu Naidu) ನಡೆದ ಕಾರ್ಯಾಚರಣೆಯಲ್ಲಿ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರ ಬಂಧನವನ್ನು ಖಂಡಿಸಿದ್ದರು. ವಿಜಯವಾಡ ಕಡೆಗೆ ಹೋಗಲು ಪ್ರಯತ್ನಿಸಿದರು.ಪೊಲೀಸರು ಬಿಡದ ಕಾರಣ ವಿರೋಧಿಸಿ ಪವನ್ ಕಲ್ಯಾಣ್ ರಸ್ತೆಯಲ್ಲೇ ಮಲಗಿದ್ದರು. ಪವನ್ ಹಿಂದಕ್ಕೆ ಸರಿಯದ ಕಾರಣ ಪೊಲೀಸರು ಅವರನ್ನು ಬಂಧಿಸಿ ವಶಕ್ಕೆ ಪಡೆದರು.

ಆಂಧ್ರಪ್ರದೇಶದ ಮುಖ್ಯಮಂತ್ರಿ ಜನನ್‌ಮೋಹನ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ ಜನಸೇನಾ ಮುಖ್ಯಸ್ಥ ಕಲ್ಯಾಣ್, “ಮಾಜಿ ಮುಖ್ಯಮಂತ್ರಿಯನ್ನು ಬಂಧಿಸಿರುವ ರೀತಿ ದುಃಖಕರವಾಗಿದೆ. ರಾಜ್ಯದ ಅಧಿಕಾರಿಗಳು ಮತ್ತು ಆಡಳಿತದ ರೀತಿಯನ್ನು ನಾವು ಕಟ್ಟುನಿಟ್ಟಾಗಿ ಖಂಡಿಸುತ್ತೇವೆ. ಒಬ್ಬ ನಾಯಕನ (ಮುಖ್ಯಮಂತ್ರಿ ಜಗನ್ ಮೋಹನ್) ಆದೇಶದ ಮೇರೆಗೆ ಆಡಳಿತ ಪಕ್ಷವು ಬಂಧನ ಮಾಡಿದೆʼʼಎಂದು ಕಿಡಿಕಾರಿದರು.

ನಾಯ್ಡು ಅವರ ನೇತೃತ್ವದಲ್ಲಿ ರಾಜ್ಯ ಕಂಡ ಅಭಿವೃದ್ಧಿಯನ್ನು ಪ್ರಸ್ತಾಪಿಸಿದ ಪವನ್ ಕಲ್ಯಾಣ್, “ಜಗನ್ ಮೋಹನ್ ಅವರಿಗೆ ಕನಿಷ್ಠ ಜ್ಞಾನವೂ ಇಲ್ಲ. ಚಂದ್ರಬಾಬು ನಾಯ್ಡು ಅವರ ಮುಖ್ಯಮಂತ್ರಿಯಾಗಿ ರಾಜ್ಯವು ಸಾಧಿಸಿದ ಅಭಿವೃದ್ಧಿಯ ಪ್ರಗತಿಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ತೆಲುಗು ಜನರ ಹೆಮ್ಮೆಯನ್ನು ಬಿಂಬಿಸುತ್ತದೆʼʼಎಂದರು.

ಇದನ್ನೂ ಓದಿ: Pawan Kalyan: ಪವನ್ ಕಲ್ಯಾಣ್‌ ಮಾಜಿ ಪತ್ನಿಗೆ ನಟನ ಫ್ಯಾನ್‌ ಕಿರಿಕ್! ಈಗ ಮನಸ್ಸಿಗೆ ಶಾಂತಿ ಸಿಕ್ಕಿತಾ ಅಂದ್ರು ನಟಿ ರೇಣು

“ಕಳೆದ ಮೂರ್ನಾಲ್ಕು ತಿಂಗಳಿಂದ (ಪ್ರತಿಪಕ್ಷ ನಾಯಕರ ವಿರುದ್ಧ) ಪ್ರಕರಣಗಳನ್ನು ದಾಖಲಿಸಲು ಪ್ರಯತ್ನಿಸುತ್ತಿರುವವರು ಯಾವ ಪಕ್ಷದವರಾಗಿದ್ದರೂ ನಿರ್ವಿವಾದವಾಗಿ ಖಂಡಿಸಬೇಕು,” ಎಂದು ಅವರು ಹೇಳಿದರು.

“ಜಗನ್ ಮೋಹನ್ ಅವರ ನೆಗೆಟಿವ್‌ ಆಲೋಚನೆಗಳು ರಾಜ್ಯವನ್ನು ಕತ್ತಲೆಯಲ್ಲಿ ಮುಳುಗಿಸಿವೆ. ರಾಜ್ಯ ವಿಭಜನೆಯಿಂದ ಎಷ್ಟು ನಷ್ಟವಾಗಿದೆ ಎಂದು ಎಲ್ಲರಿಗೂ ತಿಳಿದಿದೆ. ಚಂದ್ರಬಾಬು ನಾಯ್ಡು ವಿರುದ್ಧ ಮೂರು ವರ್ಷಗಳ ಹಿಂದೆ ಪ್ರಕರಣ ದಾಖಲಾಗಿತ್ತು, ಈಗ ಅವರನ್ನು ಏಕೆ ಬಂಧಿಸಿದ್ದಾರೆ? ವಿರೋಧ ಪಕ್ಷಗಳು ಸಭೆ ನಡೆಸಲು ಯೋಜಿಸಿದಾಗಲೆಲ್ಲಾ ಸ್ಥಳೀಯ ನಾಯಕರ ಮೇಲೆ ಹಲ್ಲೆ ಮಾಡುವುದು ಮತ್ತು ಗಲಾಟೆ ಮಾಡುವುದು ಆಡಳಿತ ಪಕ್ಷಕ್ಕೆ ಅಭ್ಯಾಸವಾಗಿದೆ,” ಎಂದು ಅವರು ಕಲ್ಯಾಣ್‌ ಕಿಡಿಕಾರಿದರು.

ʻʻನಾಳೆ ಗುಂಟೂರು ಜಿಲ್ಲೆಯ ಮಂಗಳಗಿರಿಯಲ್ಲಿ ಸರ್ವಪಕ್ಷಗಳ ಮುಖಂಡರ ಸಭೆ ನಡೆಸಿ ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಎದುರಿಸಲು ಯೋಜನೆ ರೂಪಿಸಲಾಗುವುದುʼʼ ಎಂದರು.

Exit mobile version