Site icon Vistara News

Janhvi Kapoor: ಗೌನ್‌ನಿಂದಾಗಿ ಟ್ರೋಲ್‌ಗೆ ಗುರಿಯಾದ ಜಾಹ್ನವಿ ಕಪೂರ್

Janhvi Kapoor Brutally Trolled For Off-Shoulder Gown

ಬೆಂಗಳೂರು: ಸೆಲೆಬ್ರಿಟಿಗಳು ತಮ್ಮ ಉಡುಪುಗಳಿಂದ ಟ್ರೋಲ್‌ ಆಗುವುದು ಹೊಸತೇನಲ್ಲ. ಫ್ಯಾಷನ್ ಸಮಾರಂಭದಲ್ಲಿ ಜಾಹ್ನವಿ ಕಪೂರ್ (Janhvi Kapoor) ಪಾಲ್ಗೊಂಡಿದ್ದರು. ತಮ್ಮ ಡ್ರೆಸ್ ನಿಭಾಯಿಸಿದ ರೀತಿಗೆ ನೆಟ್ಟಿಗರು ನಟಿಯನ್ನು ಟ್ರೋಲ್‌ ಮಾಡಿದ್ದಾರೆ. ಜಾಹ್ನವಿ ಕಪೂರ್ ಬಟ್ಟೆಯನ್ನು ಸರಿ ಮಾಡಿಕೊಂಡ ರೀತಿ ಹಾಗೂ ಅವರ ಫ್ಯಾಷನ್ ಆಯ್ಕೆಗಾಗಿ ನೆಟ್ಟಿಗರು ಮನಬಂದಂತೆ ಕಾಮೆಂಟ್‌ ಮಾಡಿದ್ದಾರೆ.

ಪ್ರಶಸ್ತಿ ಸಮಾರಂಭದಲ್ಲಿ, ಜಾನ್ವಿ ಅವರು ಕ್ಯಾಮೆರಾಗಳಿಗೆ ಪೋಸ್ ನೀಡುವಾಗ ತಮ್ಮ ಉಡುಪನ್ನು ಸರಿ ಮಾಡಿಕೊಳ್ಳುವ ರೀತಿ ಸರಿಯಿಲ್ಲ ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. ಈವೆಂಟ್‌ನಲ್ಲಿ ಆಫ್ ಶೋಲ್ಡರ್ ನಲ್ಲಿ ಕಾಣಿಸಿಕೊಂಡರು. ಉದ್ದವಾದ ಗೌನ್‌ ಹೈ ಹೀಲ್ಸ್‌ಗೆ ಸಿಕ್ಕಿಹಾಕೊಂಡ ಪರಿಣಾಮ ನಟಿಗೆ ನಡೆಯಲೂ ಕಷ್ಟಕರವಾಗಿತ್ತು. ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ನಟಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಅನೇಕರು ಅವರ ಡ್ರೆಸ್ ಬಗ್ಗೆ ಟೀಕೆ ಮಾಡಿದ್ದಾರೆ. ‘ಬಟ್ಟೆಯನ್ನು ಮಾನ ಮುಚ್ಚಲು ಹಾಕಿಕೊಳ್ಳಬೇಕು. ಈ ರೀತಿ ಕಷ್ಟ ಪಡೋಕೆ ಅಲ್ಲ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಅವರ ಬಟ್ಟೆ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದಾರೆ.

ನಟಿ ಜಾಹ್ನವಿ ಕಪೂರ್ (Janhvi Kapoor), ಜ್ಯೂನಿಯರ್‌ ಎನ್‌ಟಿಆರ್‌ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ದಕ್ಷಿಣ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಹೈದರಾಬಾದ್‌ನಲ್ಲಿ ಕೊರಟಾಲ ಶಿವ ನಿರ್ದೇಶನದಲ್ಲಿ ನಟಿ ಎನ್‌ಟಿಆರ್ 30 ಸಿನಿಮಾಗಾಗಿ ಜಾಹ್ನವಿ ಕಪೂರ್ ಈಗಾಗಲೇ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮತ್ತೆ ಇನ್ನೊಬ್ಬ ತೆಲುಗು ನಟನ ಜತೆ ತೆರೆ ಹಂಚಿಕೊಳ್ಳಲಿದ್ದಾರೆ.

ವೈರಲ್‌ ಪೋಸ್ಟ್‌

ನಟಿ ಅಖಿಲ್‌ ಅಕ್ಕಿನೇನಿ ಜತೆ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ವರದಿಯಾಗಿದೆ. ಹೊಸ ಬಗೆಯ ಕಥೆಯಲ್ಲಿ ಜಾಹ್ನವಿ ಕಾಣಿಸಿಕೊಳ್ಳಲಿದ್ದಾರೆ. ಅನಿಲ್ ಕುಮಾರ್ ನಿರ್ದೇಶಿಸಲಿರುವ ಚಿತ್ರದಲ್ಲಿ ಜಾಹ್ನವಿ ಕಪೂರ್ ಅವರು ಅಖಿಲ್ ಜತೆ ಪರದೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮೊದಲ ಬಾರಿಗೆ ಜಾಹ್ನವಿ- ಅಖಿಲ್‌ ತೆರೆಯ ಮೇಲೆ ಒಂದಾಗುತ್ತಿದ್ದಾರೆ.

Exit mobile version